ಕರಾವಳಿ

ಶ್ರೀ ಲಕ್ಷ್ಮಿ ಸೌಹಾರ್ದಕ್ರೆಡಿಟ್ ಕೊ. ಆಪರೇಟಿವ್ ಲಿ. ಪ್ರಗತಿಯ ಹಾದಿಯಲ್ಲಿ ಸದಸ್ಯರಿಗೆ ಶೇಕಡಾ 20 ಡಿವಿಡೆಂಟ್.

Pinterest LinkedIn Tumblr

laxmi_cride_cooprater_news

ಮಂಗಳೂರು,ದೆ.20 : ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಶ್ರೀ ಲಕ್ಷ್ಮಿ ಸೌಹಾರ್ದ ಕ್ರೆಡಿಟ್ ಕೊ. ಆಪರೇಟಿವ್ ಲಿ. ಸಂಸ್ಥೆಯು ತನ್ನ 14 ನೇ ಸರ್ವ ಸದಸ್ಯರ ಸಭೆಯು ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಸರ್ವ ಸದಸ್ಯರ ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್. ರಾಘವೇಂದ್ರ ಶಾಸ್ತ್ರಿಯವರು ಅಧ್ಯಕ್ಷತೆ ವಹಿಸಿ ಬ್ಯಾಂಕಿನ 13 ವರ್ಷದ ಏಳಿಗೆಯನ್ನು ವಿವರಿಸಿದರು. ಉಪಾಧ್ಯಕ್ಷರಾದ ಶ್ರೀ ಎಂ.ಬಿ. ಪುರಾಣಿಕ್‌ರವರು ಸ್ವಾಗತಿಸಿದರು.

ಶ್ರೀ ಲಕ್ಷ್ಮಿ ಸೌಹಾರ್ದ ಕ್ರೆಡಿಟ್ ಕೊ. ಆಪರೇಟಿವ್ ಸಂಸ್ಥೆಯು 2013-14 ರಂದು ಒಟ್ಟು 32 ಲಕ್ಷ ಪಾಲು ಬಂಡವಾಳ ಹೊಂದಿದ್ದು 14311 ಜನರಿಂದ ಒಟ್ಟು ರೂ.1630 ಲಕ್ಷ ಠೇವಣಿ ಹೊಂದಿದ್ದು ರೂ.30-14 ಲಕ್ಷ ನಿವ್ವಳ ಲಾಭಗಳಿಸಿದೆ. ಹಾಗಾಗಿ ಸದಸ್ಯರಿಗೆ ಶೇ 20 ಡಿವಿಡೆಂಟ್ ಘೋಷಣೆ ಮಾಡಲು ಶಕ್ತವಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಸಂಸ್ಥೆಯು ಇನ್ನು ಎರಡು ಶಾಖೆಯನ್ನು ತೆರೆಯುವ ಬಗ್ಗೆ ಯೋಜನೆ ಹಾಕಿ ಕೊಂಡಿದೆ ಎಂದು ಅಧ್ಯಕ್ಷರು ತಿಳಿಸಿರುವರು.

ಸಭೆಯಲ್ಲಿ ನಿರ್ದೇಶಕ ಶ್ರೀ ಐ. ರಘುರಾಮರಾವ್, ಶ್ರೀ ಎಂ.ಎಸ್. ಗುರುರಾಜ್, ಶ್ರೀ ಕೆ.ಎಸ್. ಕಲ್ಲುರಾಯ, ಶ್ರೀ ಡಾ. ಪಿ. ಅನಂತಕೃಷ್ಣ ಭಟ್, ಶ್ರೀ ಎಂ. ವಿಷ್ಣುಮೂರ್ತಿ, ಶ್ರೀ ಎಂ. ಪುರುಷೋತ್ತಮ ಭಟ್, ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀ ರಘುನಾಥ ಸೋಮಯಾಜಿ, ಶ್ರೀ ಶುಭಾನಂದರಾವ್, ಶ್ರೀ ಪಿ. ಪ್ರಭಾಕರರಾವ್, ಶ್ರೀ ಬಿ. ಸುಬ್ರಮಣ್ಯರಾವ್, ಶ್ರೀ ಟಿ.ಎ. ನಾಗೇಂದ್ರ, ಶ್ರೀಮತಿ ವಿನೋದ ಎ. ರಾವ್ ಹಾಗೂ ಲೆಕ್ಕ ಪರಿಶೋಧಕರಾದ ಕೆ. ಸುರೇಶ್‌ಉಡುಪ ಉಪಸ್ಥಿತರಿದ್ದರು.

ಸುಧಾಕರರಾವ್ ಪೇಜಾವರರವರು ಕಾರ್ಯಕ್ರಮ ನಿರೂಪಿಸಿರುತ್ತಾರೆ. ನಿರ್ದೇಶಕ ಪಿ. ಅನಂತ ಕೃಷ್ಣ ಭಟ್‌ರವರು ಸಭೆಯಲ್ಲಿ ಬಂದಿರುವ ಗಣ್ಯರಿಗೆ ವಂದನಾರ್ಪಣೆ ಮಾಡಿದರು.

Write A Comment