ಕರಾವಳಿ

ನಂದಿನಿ ನೂತನ ಗ್ರಾಹಕ ಸ್ನೇಹಿ ಯೋಜನೆಗೆ ಚಾಲನೆ.

Pinterest LinkedIn Tumblr

nandhini_new_franchies_1

ಮಂಗಳೂರು,ಸೆ.19: ನಗರದ ಬಿಜೈ ರಸ್ತೆಯ ರೋಹನ್ ಕಾರ್ಪೋರೇಶನ್ ಅಪಾರ್ಟ್‌ಮೆಂಟ್ ನಲ್ಲಿ ಲೋಹಿತ್ ಎಸ್ ಇವರ ಸಹಭಾಗಿತ್ವದೊಂದಿಗೆ ಪ್ರಥಮ ” ನಂದಿನಿ ಪ್ರಾಂಚೈಸಿ ಮಳಿಗೆಯನ್ನು ಗುರುವಾರ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮಹಾಬಲ ಮಾರ್ಲ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಂದಿನಿ ಎಲ್ಲಾ ಉತ್ಪನ್ನಗಳನ್ನು ಒಂದೇ ಸೂರ್‍ಇನಡಿ ಗ್ರಾಹಕರಿಗೆ ಪರಿಚಯಿಸುವ ಕೆ.ಎಮ್.ಎಫ಼್ ನ ಪ್ರಯತ್ನ ಶ್ಲಾಘನೀಯ ಎಂದು ಸಂಸ್ಥೆಯ ಯೋಜನೆಗಳ ಬಗ್ಗೆ ಮೆಚ್ಚಿಗೆ ವ್ಯಕ್ತ ಪಡಿಸಿದರು.

nandhini_new_franchies_2

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಂದಿನಿ ಬ್ರಾಂಡ್ ನಡಿ ತಯಾರಾಗುವ ವಿವಿಧ ಶ್ರೇಣಿ ” ಸಂದಿನಿ ಹಾಲು ಮತ್ತು ಹಾಲಿನ ಉತ್ಪನ್ನ ಹಾಗೂ ಸಿಹಿ ಉತ್ಪನ್ನಗಳು ಒಂದೇ ಸ್ಥಳದಲ್ಲಿ ಗ್ರಾಹಕರಿಗೆ ದೊರಕಿವಂತಾಗಲು ಜಿಲ್ಲಾ ಕೇಂದ್ರ ಅಯ್ದು ಪ್ರಮುಖ ಸ್ಥಳಗಳಲ್ಲಿ ನಂದಿನಿ ಪ್ರಾಂಚೈಸಿ ಮಳಿಗೆಗಳನ್ನು ತೆರೆಯಲು ಯೋಜನೆ ರೂಪಿಸಿದೆ ಅದರಂತೆ ಇಲ್ಲಿ ಮೊದಲ ಪ್ರಾಂಚೈಸಿಯನ್ನು ಆರಂಭಿಸಲಾಗಿದೆ. ಮಾತ್ರವಲ್ಲದೇ ಪ್ರತಿ ಪ್ರಾಂಚೈಸಿ ಮಳಿಗೆಯಲ್ಲೂ ನಂದಿನಿ ಐಸ್ ಕ್ರೀಮ್ ದೊರಕುವಂತೆ ವ್ಯವಸ್ಥೆ ಮಾಡಲಾಗಿದೆ.

nandhini_new_franchies_3

ಒಕ್ಕೂಟವು ಅವಿಭಜಿತ ಜಿಲ್ಲೆಯ 1370 ಅಧಿಕೃತ ನಂದಿನಿ ಡೀಲರ್ ಗಳ ಮೂಲಕ ಒಕ್ಕೂಟದ ವ್ಯಾಪ್ತಿಯ ಗ್ರಾಹಕರಿಗೆ ಪ್ರತಿನಿತ್ಯ 3.20 ಲೀಟರ್ ಹಾಲು, 35000 ಕೆಜಿ ಮೊಸರು ಹಾಗೂ ವಿವಿಧ ಉತ್ಪನ್ನಗಳನ್ನು 90 ಇನ್ಸುಲೇಟೆಡ್ ವಿತರಣಾ ವಾಹನಗಳ ಮೂಲಕ ವಿತರಿಸುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ 17 ಪಾರ್ಲರ್ ಗಳು 16 ಸಗಟೂ ಮಾರಾಟಗಾರರ ಮೂಲಕ ಗ್ರಾಹಕರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಿರಂತರ ಒದಗಿಸುತ್ತಿದೆ ಎಂದರು.

nandhini_new_franchies_4

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅವಿಭಜಿತ ಜಿಲ್ಲೆಯ ಲಕ್ಷಾಂತರ ಗ್ರಾಹಕರ ಅಪೇಕ್ಷೆ ಮೇರೆಗೆ ಗ್ರಾಹಕರ ಅನುಕೂಲಕ್ಕಾಗಿ ಸ್ಥಳೀಯ ಕಾರ್ಪೊರೆಟರ್ ಲ್ಯಾನ್ಸ್ ಲೊಟ್ ಪಿಂಟೋ ಗ್ರಾಹಕ ಸ್ನೇಹಿ ಯೋಜನೆಯಡಿಯಲ್ಲಿ ಗ್ರಾಹಕರು ದೂರು ಸಲಹೆ ಸ್ವೀಕರಿಸಲು, ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾಹಿತಿ ಪಡೆಯಲು ಅನೂಕೂಲವಾಗುವಂತೆ ಗ್ರಾಹಕರು ಉಚಿತ ಕರೆ ಮಾಡಲು ಟೋಲ್ ಪ್ರೀ ದೂರವಾಣಿ ಸಂಖೆ 18004259333 ಗೆ ಚಾಲನೆ ನೀಡಿದರು.

nandhini_new_franchies_5

ಸಮಾರಂಭದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ ದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ ಸತ್ಯನಾರಾಯಣ, ಮಾರಕಟ್ಟೆ ವ್ಯವಸ್ಥಾಪಕ ಬಿ.ಎನ್.ವಿಜಯಕುಮಾರ್ , ಉಪ ವ್ಯವಸ್ಥಾಪಕ ಸ್ವಾಮಿ ಶೆ ಟ್ಟಿ ಮುಂತಾದವರು ಉಪಸ್ಥಿತರಿದ್ದರು.

Write A Comment