
ಎಲ್ಲರಲ್ಲೂ ಒಂದಲ್ಲ ಒಂದು ರೀತಿಯ ಹುಚ್ಚು ಇರುತ್ತೆ…ಕೆಲವರು ತಮಗೆ ಇಷ್ಟವಾದ ವಸ್ತುಗಳನ್ನು ಸಂಗ್ರಹಿಸುವ ಹುಚ್ಚಿರುತ್ತೆ…ಆದರೆ ಇಲ್ಲೊಬ್ಬ ಜಗತ್ತಿನ ದುಬಾರಿ ಕಾರುಗಳಲ್ಲಿ ಒಂದಾದ ಪೊರ್ಶೆ ಕಾರನ್ನು ಸಂಗ್ರಹಿಸುವ ಮೂಲಕ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದಾನೆ.

ಕೋಟಿಗಟ್ಟಲೆ ಹಣ ಇಲ್ಲದಿದ್ದರೆ ಇಂಥ ದುಬಾರಿ ಕಾರುಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಈತನ ಬಳಿ ಬರೋಬರಿ 80 ಪೊರ್ಶೆ ಕಾರುಗಳಿವೆ. ಈತನ ಪ್ರಾಯ ಕೂಡ 80 ವರ್ಷ.
ಆಸ್ಟ್ರಿಯಾ ವಿಯೆನ್ನಾ ಒಟ್ಟೊಕರ್ ಎಂಬ ವ್ಯಕ್ತಿ ದುಬಾರಿ 80 ಪೊರ್ಶೆ ಕಾರುಗಳನ್ನು ಹೊಂದಿದ್ದಾರೆ. ಆದರೆ ಅದಕ್ಕೂ ಅಚ್ಚರಿ ಎಂದರೆ 80 ವರ್ಷ ಪ್ರಾಯದಲ್ಲೂ ಪೊರ್ಶೆ ಕಾರುಗಳನ್ನು ಕಲೆಕ್ಟ್ ಮಾಡುತ್ತಿದ್ದಾರೆ.

ಒಟ್ಟೊಕರ್ 30 ವರ್ಷ ಪ್ರಾಯವಿದ್ದಾಗ ಅವರ ಮನೆಯ ಹಿಂಭಾಗದಲ್ಲಿ ಪೊರ್ಶೆ ಕಾರೊಂದು ವೇಗವಾಗಿ ಹೋಗಿತ್ತಂತೆ. ಅದನ್ನು ಕಂಡ ಅವರಿಗೆ ರೋಮಾಂಚನವಾಯಿತಂತೆ. ತಾನು ಕೂಡ ಪೊರ್ಶೆ ಕಾರನ್ನು ಖರೀದಿಸಬೇಕೆಂದು ಮನದಲ್ಲೇ ಅಂದುಕೊಂಡರಂತೆ.

ನಂತರ ಪೊರ್ಶೆ ಖರೀದಿಸಲು ಹಣ ಸಂಗ್ರಹಿಸಲು ಪ್ರಾರಂಭಿಸುತ್ತಾರೆ. ಹಣ ಒಟ್ಟುಗೂಡಿಸಿ ಪೊರ್ಶೆ 911ಇ ಕಾರನ್ನು ಮೊದಲು ಖರೀದಿಸುತ್ತಾರೆ.
ಮೊದಲ ಕಾರನ್ನು ಖರೀದಿಸಿದ ಒಟ್ಟೊಕರ್ಗೆ ಪೊರ್ಶೆ ಮಾರುಕಟ್ಟೆಗೆ ಪರಿಚಯಿಸುವ ಪ್ರತಿ ಕಾರುಗಳನ್ನು ಖರೀದಿಸಬೇಕೆಂಬ ಆಸೆ ಹುಟ್ಟಿಕೊಳ್ಳುತ್ತದೆ. ಆ ಬಳಿಕ ಪೊರ್ಶೆ 917, 910, 904,956 ಹೀಗೆ ಹಲವು ಕಾರುಗಳನ್ನು ಖರೀದಿಸುತ್ತಾರೆ.
ಈ ವರ್ಷ ಒಟ್ಟೊಕರ್ ಅವರು 80 ವರ್ಷ ಪೂರೈಸಿದ್ದಾರೆ. ಅದಕ್ಕಾಗಿ 80ನೇ ಪೊರ್ಶೆ ಕಾರನ್ನು ಖರೀದಿಸಿದ್ದಾರೆ. ನೀಲಿ ಬಣ್ಣದ ಕಾರನ್ನು ಖರೀದಿಸುವ ಮೂಲಕ ಆಸೆಯನ್ನು ಪೂರೈಸಿದ್ದಾರೆ.
ಇನ್ನು ಕಾರುಗಳನ್ನು ಖರೀದಿಸಿದಂತೆ ಅದನ್ನು ನಿಲ್ಲಿಸಲು ಜಾಗದ ಕೊರತೆ ಉಂಟಾಗಿದೆ. ಹಾಗಾಗಿ ಕಟ್ಟಡವೊಂದನ್ನು ನಿರ್ಮಸಿ ಅದರಲ್ಲಿ ಕಾರನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ.
ಒಟ್ಟೊಕರ್ ಈ ಬಗ್ಗೆ ಮಾತನಾಡಿದ್ದು, ನಾನು ದಿನಕ್ಕೆ ಒಂದೊಂದು ಕಾರನ್ನು ಬಳಸುವ ಸಂತೋಷ ನನಗಿದೆ ಎಂದು ಹೇಳುತ್ತಾರೆ.
Comments are closed.