ಕರಾವಳಿ

ಗ್ರಾಮ ಪಂಚಾಯಾತ್ ಚುನಾವಣೆ: ದ.ಕ.ಜಿಲ್ಲೆಯ ಅಂತಿಮ ಫಲಿತಾಂಶ – ಇಲ್ಲಿದೆ ಅಯ್ಕೆಯಾದವರ ವಿವರ

Pinterest LinkedIn Tumblr

ಮಂಗಳೂರು. ಜನವರಿ.01: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಸೆಂಬರ್ 30 ರಂದು ಒಟ್ಟು 220 ಗ್ರಾಮ ಪಂಚಾಯತ್‍ಗಳ 3,222 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆಯು ಜಿಲ್ಲೆಯ 7 ಕೇಂದ್ರಗಳಲ್ಲಿ ನಡೆದಿದ್ದು, ಎಣಿಕೆ ಪ್ರಕ್ರಿಯೆ ಬುಧವಾರ ತಡರಾತ್ರಿವರೆಗೆ ಕೆಲವು ತಾಲೂಕಿನಲ್ಲಿ ನಡೆದರೆ ಕೆಲವು ತಾಲೂಕುಗಳಲ್ಲಿ ಮುಂಜಾನೆಯವರೆಗೆ ನಡೆದಿದೆ ನಂತರದ ಫಲಿತಾಂಶದ ವಿವಿರ ಇಂತಿವೆ.

ಮಂಗಳೂರು ತಾಲೂಕಿನ 37 ಗ್ರಾಮ ಪಂಚಾಯತ್‍ಗಳ 651 ಸ್ಥಾನಗಳಿಗೆ 28 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 623 ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಒಟ್ಟು 651 ಸದಸ್ಯ ಸ್ಥಾನಗಳಲ್ಲಿ 315 ಸಾಮಾನ್ಯ, 336 ಮಹಿಳಾ ಸ್ಥಾನಗಳಿದ್ದು, 42 ಅನುಸೂಚಿತ ಜಾತಿ ಸದಸ್ಯ ಸ್ಥಾನಗಳಲ್ಲಿ ಸಾಮಾನ್ಯ 5, ಮಹಿಳೆ 37, ಮತ್ತು 37 ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳಲ್ಲಿ 37 ಮಹಿಳೆಯರು, 163 ಹಿಂದುಳಿದ ಅ. ವರ್ಗ ಸದಸ್ಯ ಸ್ಥಾನಗಳಲ್ಲಿ 73 ಸಾಮಾನ್ಯ, 90 ಮಹಿಳೆ, 45 ಹಿಂದುಳಿದ ಬ ವರ್ಗ ಸದಸ್ಯ ಸ್ಥಾನಗಳಲ್ಲಿ 22 ಸಾಮಾನ್ಯ 23 ಮಹಿಳೆ ಹಾಗೂ 364 ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಲ್ಲಿ 215 ಸಾಮಾನ್ಯ, 149 ಮಹಿಳೆಯರು ಆಯ್ಕೆಯಾಗಿರುತ್ತಾರೆ.

ಮೂಡುಬಿದಿರೆ ತಾಲೂಕಿನ 12 ಗ್ರಾಮ ಪಂಚಾಯತ್‍ಗಳ, 193 ಸ್ಥಾನಗಳಿಗೆ 7 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 186 ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಒಟ್ಟು 193 ಸದಸ್ಯ ಸ್ಥಾನಗಳಲ್ಲಿ 94 ಸಾಮಾನ್ಯ, 99 ಮಹಿಳಾ ಸ್ಥಾನಗಳಿದ್ದು, 20 ಅನುಸೂಚಿತ ಜಾತಿ ಸದಸ್ಯ ಸ್ಥಾನಗಳಲ್ಲಿ ಸಾಮಾನ್ಯ 7, ಮಹಿಳೆ 13, ಮತ್ತು 14 ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳಲ್ಲಿ 2 ಸಾಮಾನ್ಯ, 12 ಮಹಿಳೆ, 46 ಹಿಂದುಳಿದ ಅ. ವರ್ಗಗಳಲ್ಲಿ 21 ಸಾಮಾನ್ಯ, 25 ಮಹಿಳೆ, 11 ಹಿಂದುಳಿದ ಬ ವರ್ಗ ಸದಸ್ಯ ಸ್ಥಾನಗಳಲ್ಲಿ 4 ಸಾಮಾನ್ಯ 7 ಮಹಿಳೆ ಹಾಗೂ 102 ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಲ್ಲಿ 60 ಸಾಮಾನ್ಯ, 42 ಮಹಿಳೆಯರು ಆಯ್ಕೆಯಾಗಿರುತ್ತಾರೆ

ಬಂಟ್ವಾಳ ತಾಲೂಕಿನ 57 ಗ್ರಾಮ ಪಂಚಾಯತ್‍ಗಳಲ್ಲಿ, 837 ಸ್ಥಾನಗಳಿಗೆ 15 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 822 ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಒಟ್ಟು 837 ಸದಸ್ಯ ಸ್ಥಾನಗಳಲ್ಲಿ 404 ಸಾಮಾನ್ಯ, 433 ಮಹಿಳಾ ಸ್ಥಾನಗಳಿದ್ದು, 59 ಅನುಸೂಚಿತ ಜಾತಿ ಸದಸ್ಯ ಸ್ಥಾನಗಳಲ್ಲಿ ಸಾಮಾನ್ಯ 2, ಮಹಿಳೆ 57, ಮತ್ತು 72 ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳಲ್ಲಿ 12 ಸಾಮಾನ್ಯ, 60 ಮಹಿಳೆ, 203 ಹಿಂದುಳಿದ ಅ. ವರ್ಗಗಳಲ್ಲಿ 85 ಸಾಮಾನ್ಯ , 118 ಮಹಿಳೆ, 53 ಹಿಂದುಳಿದ ಬ ವರ್ಗ ಸದಸ್ಯ ಸ್ಥಾನಗಳಲ್ಲಿ 27 ಸಾಮಾನ್ಯ 26 ಮಹಿಳೆ ಹಾಗೂ 450 ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಲ್ಲಿ 278 ಸಾಮಾನ್ಯ, 172 ಮಹಿಳೆಯರು ಆಯ್ಕೆಯಾಗಿರುತ್ತಾರೆ.

ಬೆಳ್ತಂಗಡಿ ತಾಲೂಕಿನ 46 ಗ್ರಾಮ ಪಂಚಾಯತ್‍ಗಳಲ್ಲಿ, 631 ಸ್ಥಾನಗಳಿಗೆ 7 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 624 ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಒಟ್ಟು 631 ಸದಸ್ಯ ಸ್ಥಾನಗಳಲ್ಲಿ 304 ಸಾಮಾನ್ಯ, 327 ಮಹಿಳಾ ಸ್ಥಾನಗಳಿದ್ದು, 64 ಅನುಸೂಚಿತ ಜಾತಿ ಸದಸ್ಯ ಸ್ಥಾನಗಳಲ್ಲಿ ಸಾಮಾನ್ಯ 16, ಮಹಿಳೆ 48, ಮತ್ತು 54 ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳಲ್ಲಿ 7 ಸಾಮಾನ್ಯ, 47 ಮಹಿಳೆ, 143 ಹಿಂದುಳಿದ ಅ. ವರ್ಗಗಳಲ್ಲಿ 56 ಸಾಮಾನ್ಯ , 87 ಮಹಿಳೆ, 36 ಹಿಂದುಳಿದ ಬ ವರ್ಗ ಸದಸ್ಯ ಸ್ಥಾನಗಳಲ್ಲಿ 19 ಸಾಮಾನ್ಯ 17 ಮಹಿಳೆ ಹಾಗೂ 334 ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಲ್ಲಿ 206 ಸಾಮಾನ್ಯ, 128 ಮಹಿಳೆಯರು ಆಯ್ಕೆಯಾಗಿರುತ್ತಾರೆ

ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್‍ಗಳಲ್ಲಿ, 343. ಸ್ಥಾನಗಳಿಗೆ 21 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 322 ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಒಟ್ಟು 343 ಸದಸ್ಯ ಸ್ಥಾನಗಳಲ್ಲಿ 167 ಸಾಮಾನ್ಯ, 176 ಮಹಿಳಾ ಸ್ಥಾನಗಳಿದ್ದು, 40 ಅನುಸೂಚಿತ ಜಾತಿ ಸದಸ್ಯ ಸ್ಥಾನಗಳಲ್ಲಿ ಸಾಮಾನ್ಯ 13, ಮಹಿಳೆ 27, ಮತ್ತು 37 ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳಲ್ಲಿ 12 ಸಾಮಾನ್ಯ, 25 ಮಹಿಳೆ, 72 ಹಿಂದುಳಿದ ಅ. ವರ್ಗಗಳಲ್ಲಿ 29 ಸಾಮಾನ್ಯ , 43 ಮಹಿಳೆ, 17 ಹಿಂದುಳಿದ ಬ ವರ್ಗ ಸದಸ್ಯ ಸ್ಥಾನಗಳಲ್ಲಿ 10 ಸಾಮಾನ್ಯ 7 ಮಹಿಳೆ ಹಾಗೂ 177 ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಲ್ಲಿ 103 ಸಾಮಾನ್ಯ, 74 ಮಹಿಳೆಯರು ಆಯ್ಕೆಯಾಗಿರುತ್ತಾರೆ

ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್‍ಗಳಲ್ಲಿ, 282 ಸ್ಥಾನಗಳಿಗೆ 6 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 276 ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಒಟ್ಟು 282 ಸದಸ್ಯ ಸ್ಥಾನಗಳಲ್ಲಿ 134 ಸಾಮಾನ್ಯ, 148 ಮಹಿಳಾ ಸ್ಥಾನಗಳಿದ್ದು, 43 ಅನುಸೂಚಿತ ಜಾತಿ ಸದಸ್ಯ ಸ್ಥಾನಗಳಲ್ಲಿ ಸಾಮಾನ್ಯ 14, ಮಹಿಳೆ 29, ಮತ್ತು 33 ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳಲ್ಲಿ 7 ಸಾಮಾನ್ಯ, 26 ಮಹಿಳೆ, 48 ಹಿಂದುಳಿದ ಅ. ವರ್ಗಗಳಲ್ಲಿ 14 ಸಾಮಾನ್ಯ , 34 ಮಹಿಳೆ, 10 ಹಿಂದುಳಿದ ಬ ವರ್ಗ ಸದಸ್ಯ ಸ್ಥಾನಗಳಲ್ಲಿ 9 ಸಾಮಾನ್ಯ 1 ಮಹಿಳೆ ಹಾಗೂ 148 ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಲ್ಲಿ 90 ಸಾಮಾನ್ಯ, 58 ಮಹಿಳೆಯರು ಆಯ್ಕೆಯಾಗಿರುತ್ತಾರೆ.

ಕಡಬ ತಾಲೂಕಿನ 21 ಗ್ರಾಮ ಪಂಚಾಯತ್‍ಗಳಲ್ಲಿ, 285 ಸ್ಥಾನಗಳಿಗೆ 7 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 278 ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯ ಒಟ್ಟು 285 ಸದಸ್ಯ ಸ್ಥಾನಗಳಲ್ಲಿ 135 ಸಾಮಾನ್ಯ, 150 ಮಹಿಳಾ ಸ್ಥಾನಗಳಿದ್ದು, 36 ಅನುಸೂಚಿತ ಜಾತಿ ಸದಸ್ಯ ಸ್ಥಾನಗಳಲ್ಲಿ ಸಾಮಾನ್ಯ 12, ಮಹಿಳೆ 24, ಮತ್ತು 21 ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳಲ್ಲಿ 21 ಮಹಿಳೆಯರು, 63 ಹಿಂದುಳಿದ ಅ. ವರ್ಗಗಳಲ್ಲಿ 28 ಸಾಮಾನ್ಯ , 35 ಮಹಿಳೆ, 14 ಹಿಂದುಳಿದ ಬ ವರ್ಗ ಸದಸ್ಯ ಸ್ಥಾನಗಳಲ್ಲಿ 5 ಸಾಮಾನ್ಯ 9 ಮಹಿಳೆ ಹಾಗೂ 151 ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಲ್ಲಿ 90 ಸಾಮಾನ್ಯ, 61 ಮಹಿಳೆಯರು ಆಯ್ಕೆಯಾಗಿರುತ್ತಾರೆ

ಜಿಲ್ಲೆಯಲ್ಲಿ ಅಂತಿಮ ಮತ ಎಣಿಕೆ ಪ್ರಕ್ರಿಯೆಯಲ್ಲಿ 220 ಗ್ರಾಮ ಪಂಚಾಯತ್‍ಗಳ, 3,222 ಸ್ಥಾನಗಳಿಗೆ 91 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 3131 ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ.

ಗ್ರಾಮ ಪಂಚಾಯಿತಿಯ ಒಟ್ಟು 3,222 ಸದಸ್ಯ ಸ್ಥಾನಗಳಲ್ಲಿ 1,553 ಸಾಮಾನ್ಯ, 1,669 ಮಹಿಳಾ ಸ್ಥಾನಗಳಿದ್ದು, 304 ಅನುಸೂಚಿತ ಜಾತಿ ಸದಸ್ಯ ಸ್ಥಾನಗಳಲ್ಲಿ ಸಾಮಾನ್ಯ 69, ಮಹಿಳೆ 235, ಮತ್ತು 268 ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳಲ್ಲಿ 40 ಸಾಮಾನ್ಯ, 228 ಮಹಿಳೆ, 738 ಹಿಂದುಳಿದ ಅ. ವರ್ಗಗಳಲ್ಲಿ 306 ಸಾಮಾನ್ಯ , 432 ಮಹಿಳೆ, 186 ಹಿಂದುಳಿದ ಬ ವರ್ಗ ಸದಸ್ಯ ಸ್ಥಾನಗಳಲ್ಲಿ 96 ಸಾಮಾನ್ಯ 90 ಮಹಿಳೆ ಹಾಗೂ 1,726 ಸಾಮಾನ್ಯ ವರ್ಗದ ಸದಸ್ಯ ಸ್ಥಾನಗಳಲ್ಲಿ 1,042 ಸಾಮಾನ್ಯ, 684 ಮಹಿಳೆಯರು ಆಯ್ಕೆಯಾಗಿದ್ದಾರೆ.

Comments are closed.