
ಚೀನಾ: ಸೆ#ಕ್ಸ್’ಗೆ ಒತ್ತಾಯಿಸುತ್ತಿದ್ದ ಡಾಕ್ಟರನ್ನೇ ಕೊಂದ ನರ್ಸ್ ಒಬ್ಬಳು ಆತನ ದೇಹವನ್ನು ಬೇಯಿಸಿ ಶೌಚಾಲಯದ ಗುಂಡಿಗೆ ಹಾಕಿದ್ದು, ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ನಡೆದಿರುವುದು ಚೀನಾದಲ್ಲಿ.

ಒಂದೇ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು, ಚಿರಪರಿಚಿತರಾಗಿದ್ದರು. ಪದೇ ಪದೇ ತನ್ನೊಂದಿಗೆ ಸೆ#ಕ್ಸ್ ಮಾಡುವಂತೆ ಡಾಕ್ಟರ್ ಪೀಡಿಸುತ್ತಿದ್ದ, ಇದರಿಂದ ಕೋಪಗೊಂಡ ನರ್ಸ್ ಈ ಕೃತ್ಯವೆಸಗಿದ್ದಾಳೆ.
ನರ್ಸ್ ಫೆಂಗ್ಪಿಂಗ್ ಗುವಾಂಕ್ಸಿ ಪೊಲೀಸರ ವಶದಲ್ಲಿದ್ದಾಳೆ. ಜೂಜಾಟದ ವ್ಯಸನಿಯಾಗಿದ್ದ ಈಕೆ ಝಾವಾಂಗ್ ಪ್ರದೇಶದಲ್ಲಿದ್ದ ಪೀಪಲ್ಸ್ ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಜೂಜಾಟ ಆಡುತ್ತಿದ್ದ ಆಕೆ ಅದೇ ಆಸ್ಪತ್ರೆಯ ಮೂಳೆ ಚಿಕಿತ್ಸಕರೊಬ್ಬರಾದ ಲುವೋ ಯುವಾನ್ಜಿಯನ್ ಎಂಬವರೊಂದಿಗೆ ಹಣ ಪಡೆದುಕೊಂಡಿದ್ದಳು.
ಯುವಾನ್ಜಿಯನ್ ನೀಡಿದ ಸಾಲದ ಹಣದ ವಿಚಾರವಾಗಿ ಆಕೆಯೊಂದಿಗೆ ಲೈಂ#ಗಿಕ ಸಂಬಂಧ ಹೊಂದಲು ಒತ್ತಾಯಿಸುತ್ತಾನೆ. ವಾರದಲ್ಲಿ ಮೂರು ಬಾರಿ ಆತನ ಜೊತೆಗೆ ಮಲಗಲು ಹೇಳುತ್ತಾನೆ.
ಆದರೆ ಇದರಿಂದ ಕೋಪಗೊಂಡ ಫೆಂಗ್ಪಿಂಗ್ ಗುವಾಂಕ್ಸಿ ಆತನ ಕೊಲೆ ಮಾಡಲು ನಿರ್ಧರಿಸುತ್ತಾಳೆ. ಮಾರ್ಚ್ 23ರಂದು ಆಸ್ಪತ್ರೆಯ ಹಿಂದಿನ ಬಾಡಿಗೆ ವಸತಿ ಕೇಂದ್ರದಲ್ಲಿ ಆತನನ್ನು ಕೊಲೆ ಮಾಡುತ್ತಾಳೆ. ನಂತರ ಸಾಯಿಸಿರುವ ವಿಚಾರ ಗೊತ್ತಾಗದಂತೆ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಬೇಯಿಸಿ ಶೌಚಾಲಯದ ಗುಂಡಿಗೆ ಹಾಕುತ್ತಾಳೆ.
ಇನ್ನು ನರ್ಸ್ ಫೆಂಗ್ಪಿಂಗ್ ಗುವಾಂಕ್ಸಿ ಬಟ್ಟೆಯಿಂದ ಮುಚ್ಚಿದ ಡಾಕ್ಟರ್ ಮೃತದೇಹವನ್ನು ಸ್ಟ್ರೆಚ್ಚರ್ ಮೂಲಕ ಎಳೆದುಕೊಂಡುಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಚಾರವಾಗಿ ಆಕೆ ಡಾಕ್ಟರ್ ಅನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಸದ್ಯ, ದಾದಿ ಫೆಂಗ್ಪಿಂಗ್ ಗುವಾಂಕ್ಸಿ ಪೊಲೀಸರ ವಶದಲ್ಲಿದ್ದಾಳೆ. ತಾನು ಮಾಡಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಈ ವಿಚಾರವಾಗಿ ಕೋರ್ಟ್ ತಪ್ಪಿತಸ್ಥ ಫೆಂಗ್ಪಿಂಗ್ ಗುವಾಂಕ್ಸಿಗೆ ಶಿಕ್ಷೆ ನೀಡಿದೆ ಎಂದು ತಿಳಿದು ಬಂದಿದೆ.
Comments are closed.