ಅಂತರಾಷ್ಟ್ರೀಯ

ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್‌‌ ಆಯ್ಕೆ; ಟ್ರಂಪ್‌ಗೆ ಮುಖಭಂಗ: ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಕಮಲ ಹ್ಯಾರಿಸ್​

Pinterest LinkedIn Tumblr

ವಾಷಿಂಗ್ಟನ್‌: ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಕೊನೆಗೂ ಹೊರಬಿದ್ದಿದ್ದು ಜೋ ಬೈಡನ್‌ ಜಯ ಗಳಿಸಿದ್ದಾರೆ.

ಎರಡನೇ ಬಾರಿ ಅಧ್ಯಕ್ಷ ಪದವಿ ಅಲಂಕರಿಸುವ ಡೊನಾಲ್ಡ್‌ ಟ್ರಂಪ್‌ ಕನಸು ಇದರೊಂದಿಗೆ ಭಗ್ನಗೊಂಡಿದೆ. ಮ್ಯಾಜಿಕ್‌ ನಂಬರ್‌ಗಿಂತ 14 ಮತ ಹೆಚ್ಚು ಪಡೆಯುವ ಮೂಲಕ ಡೆಮಾಕ್ರಟಿಕ್‌ ಪಕ್ಷದ ಜೋ ಬಿಡೆನ್‌ ದಾಖಲಾರ್ಹ ಜಯ ಪಡೆದಿದ್ದಾರೆ. ಜೋ ಬಿಡೆನ್‌ ಒಟ್ಟು 284 ಮತ ಗಳಿಸಿದ್ದಾರೆ. ಡೊನಾಲ್ಡ್‌ ಟ್ರಂಪ್‌ 214 ಮತ ಪಡೆದುಕೊಂಡಿದ್ದಾರೆ.

ಜೋಸೆಫ್​ ಬಿಡೆನ್​ ಅಮೆರಿಕ ಅಧ್ಯಕ್ಷರಾಗುತ್ತಿದ್ದಂತೆ ಕಮಲ ಹ್ಯಾರಿಸ್​ ಉಪಾಧ್ಯಕ್ಷರಾಗಿದ್ದಾರೆ. ಈ ಮೂಲಕ ಶ್ವೇತಭವನಕ್ಕೆ ಪ್ರವೇಶಿಸಿದ ಬ್ಲಾಕ್​ ಅಮೆರಿನ್​ ಅವರಾಗಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ಏಷ್ಯಾನ್​ ಅಮೆರಿಕನ್​ ಮಹಿಳೆ ಇವರಾಗಿದ್ದಾರೆ. ಕ್ಯಾಲಿಫೋರ್ನಿಯಾದ ಸೆನೆಟರ್​ ಆಗಿರುವ ಹ್ಯಾರಿಸ್​, ಈ ಮೊದಲು ಸ್ಯಾನ್​ಫ್ರಾನ್ಲಸಿಸ್ಕೋದಲ್ಲಿ ವಕೀಲರಾಗಿದ್ದರು. ಅಲ್ಲದೇ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್​ ಆಗಿ ಕೂಡ ಸೇವೆ ಸಲ್ಲಿಸಿದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಭಾರತೀಯ ಮೂಲದ ಹ್ಯಾರಿಸ್​ ಶ್ವೇತಭವನ ಪ್ರವೇಶ ಭಾರತೀಯರಲ್ಲಿಯೂ ಸಂತಸ ತಂದಿದೆ. ಹ್ಯಾರಿಸ್​ ತಾಯಿ ಭಾರತೀಯರಾದರೆ, ತಂದೆ ಜಮೈಕಾದವರು. ಇವರಿಬ್ಬರು ಹಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ವಾಸ್ತವ್ಯ ಆರಂಭಿಸಿದ್ದರು.

ಬೈಡನ್‌ 50.6% ಅಂದರೆ 7,48,47,834 ಮತ ಗಳಿಸಿದರೆ ಡೊನಾಲ್ಡ್‌ ಟ್ರಂಪ್‌ 47.7% ಅಂದರೆ 7,05,91,531 ಮತಗಳನ್ನು ಗಳಿಸಿದ್ದಾರೆ. ಅಮೆರಿಕದಲ್ಲಿ ಇನ್ನೂ ಮತ ಎಣಿಕೆ ಪೂರ್ಣಗೊಂಡಿಲ್ಲ.

ಫಲಿತಾಂಶ ತಡವಾಗುತ್ತಿರುವ ಕಾರಣ ಅಮೆರಿಕಾದಲ್ಲಿ ಹಿಂಸಾಚಾರ ಭುಗಿಲೇಳುತ್ತಿದೆ. ಫ್ಲೋರಿಡಾದಲ್ಲಿ ಟ್ರಂಪ್ ಬೆಂಬಲಿಗರು ನಡೆಸುತ್ತಿದ್ದ ಕಾರ್ಯಕ್ರಮದಲ್ಲಿ ಕಾರಲ್ಲಿ ಬಂದ ಅಗಂತಕನೊಬ್ಬ ಮನಸೋಇಚ್ಚೆ ಗುಂಡು ಹಾರಿಸಿದ್ದು, ಇಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ. ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡೇ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಈ ಮಧ್ಯೆ, ಟ್ರಂಪ್ ವಿರುದ್ಧ 40 ಲಕ್ಷ ಮತಗಳಿಂದ ಗೆಲ್ತೇನೆ ಎಂದು ಜೋ ಬೈಡನ್ ಹೇಳಿಕೊಂಡಿದ್ದಾರೆ. ಆದರೆ ಅಕ್ರಮ ಮಾರ್ಗದಲ್ಲಿ ಅಧ್ಯಕ್ಷ ಸ್ಥಾನ ಅಲಂಕರಿಸೋದು ತರವಲ್ಲ ಎಂದು ಟ್ರಂಪ್ ತಿರುಗೇಟು ನೀಡಿದ್ದಾರೆ. ಬೈಡನ್ ಬೆಂಬಲಿಗರು ಮಾತ್ರ, ಟ್ರಂಪ್ ವೈಟ್ ಹೌಸನ್ನು ಖಾಲಿ ಮಾಡ್ಬೇಕು ಅಂತಾ ಆಗ್ರಹಿಸ್ತಿದ್ದಾರೆ.

ಟ್ರಂಪ್ ಕೋರ್ಟ್‍ಗೆ ಹೋದರೂ ಡಿಸೆಂಬರ್ 8ರೊಳಗೆ ಫಲಿತಾಂಶ ಪ್ರಕಟವಾಗಲೇಬೇಕಿದೆ. ಜನವರಿ 20ರಂದು ಹೊಸ ಅಧ್ಯಕ್ಷರು ಪ್ರಮಾಣವಚನ ಸ್ವೀಕರಿಸಲೇಕು. ಈ ಡೆಡ್‍ಲೈನನ್ನು ಯಾವ ಕೋರ್ಟ್ ಕೂಡ ತಡೆಯಲು ಆಗುವುದಿಲ್ಲ ಎಂದು ಪರಿಣಿತರು ಅಭಿಪ್ರಾಯ ಪಡುತ್ತಿದ್ದಾರೆ.

Comments are closed.