ಮನೋರಂಜನೆ

ಮಲೇರಿಯಾದಿಂದ ಗುರುತೇ ಸಿಗದಂತಾದ ಈ ನಟಿ ಯಾರು ಗೊತ್ತಾ?

Pinterest LinkedIn Tumblr


ಕಳೆದ ವರ್ಷ ಅಕ್ಷಯ್‌ ಕುಮಾರ್‌ ಜೊತೆ ನಟಿಸಿದ್ದ ನಟಿ ಕೃತಿ ಕರಬಂಧ ‘ಹೌಸ್‌ಫುಲ್‌ 4’ ಸಿನಿಮಾದಿಂದ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿತ್ತು. ಈ ನಡುವೆ ಅವರ ಅಭಿಮಾನಿಗಳಿಗೆ ಬ್ಯಾಡ್‌ ನ್ಯೂಸ್‌ ಕೇಳಿಬಂದಿದೆ.

ಹೌದು, ಕೃತಿ ಕರಬಂಧ ಅವರಿಗೆ ಮಲೇರಿಯಾ ಆಗಿದೆ. ಈ ಸುದ್ದಿಯನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ ಸ್ಟೋರಿ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಜೊತೆ ಅವರು ಶೇರ್‌ ಮಾಡಿಕೊಂಡಿರುವ ಫೋಟೋ ನೋಡಿದರೆ ಫೋಟೋ ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಅಷ್ಟರಮಟ್ಟಿಗೆ ಅವರು ಬಳಲಿದಂತೆ ಕಾಣುತ್ತಿದ್ದಾರೆ.

‘ಹಾಯ್‌, ಇದು ನನ್ನ ಮಲೇರಿಯಾ ಮುಖ’ ಎಂದು ಹೇಳುತ್ತಲೇ ಆ ಫೋಟೋವನ್ನು ಅವರು ಶೇರ್‌ ಮಾಡಿಕೊಂಡಿದ್ದಾರೆ. ‘ನನ್ನ ಬಗ್ಗೆ ಅನೇಕರು ಚಿಂತೆ ಮಾಡುತ್ತಿದ್ದೀರಿ. ನಾನು ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದೇನೆ. ನಾನು ಇನ್ನಷ್ಟು ಸುಧಾರಿಸಿಕೊಳ್ಳಲಿದ್ದೇನೆ’ ಎಂದು ಕೃತಿ ಹೇಳಿದ್ದಾರೆ. ಕೊರೊನಾ, ಲಾಕ್‌ಡೌನ್‌ ಮುಂತಾದ ಅಡೆತಡೆಗಳಿರುವ ಈ ವರ್ಷದಿಂದಾಗಿ ಅವರು ತಾಳ್ಮೆ ಕಲಿತಿದ್ದಾರಂತೆ.

ಮಲೇರಿಯಾದಿಂದ ಗುಣಮುಖರಾಗಲು ಕೃತಿ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರಿಂದಾಗಿ ಅವರಿಗೆ ಬೋರ್‌ ಆಗುತ್ತಿದೆ. ಹಾಗಾಗಿ ಅಭಿಮಾನಿಗಳಲ್ಲಿ ಒಂದು ವಿಚಿತ್ರವಾದ ಮನವಿಯನ್ನು ಮಾಡಿಕೊಂಡಿದ್ದಾರೆ. ‘ದಯವಿಟ್ಟು ತುಂಬ ಫನ್ನಿಯಾಗಿರುವ ಮೀಮ್‌ಗಳನ್ನು ಶೇರ್‌ ಮಾಡಿ. ವಿಶ್ರಾಂತಿ ಪಡೆಯುತ್ತ ಬೇಜಾರಾಗಿದೆ. ಮಾಡಲು ಬೇರೇನೂ ಕೆಲಸ ಇಲ್ಲ’ ಎಂದಿದ್ದಾರೆ ‘ಗೂಗ್ಲಿ’ ಬೆಡಗಿ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

Comments are closed.