ಮನೋರಂಜನೆ

ಈ ಫೋಟೋದಲ್ಲಿರುವ ದೇವತೆ ನಟಿ ಹೇಮಮಾಲಿನಿ

Pinterest LinkedIn Tumblr


ಈ ಫೋಟೋದಲ್ಲಿ ಕಾಣುತ್ತಿರುವ ದೇವಿ ಚಿತ್ರದಲ್ಲಿರುವುದು ಕನಸಿನ ಕನ್ಯೆ ಹೇಮಮಾಲಿನಿ. ಹೌದು ತಮ್ಮ ಹಳೆಯ ಚಿತ್ರವೊಂದನ್ನು ಹೇಮಮಾಲಿನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದೇವತೆಯಂತೆ ಅಲಂಕಾರಗೊಂಡಿರುವ ಅವರು ತಕ್ಷಣಕ್ಕೆ ಹೇಮಮಾಲಿನಿ ಎಂದು ಗುರುತಿಸುವುದಕ್ಕೆ ಸಾಧ್ಯವಿಲ್ಲ. ತಮ್ಮ ಸಿನಿಪಯಣ ಆರಂಭದ ಕಾಲದಲ್ಲಿ ತಮಿಳು ನಿಯತಕಾಲಿಕೆಗಾಗಿ ತೆಗೆಸಿದ ಫೋಟೋ ಇದಾಗಿದ್ದು, ಈ ಚಿತ್ರಕ್ಕಾಗಿ ನಾನು ಸಾಕಷ್ಟು ಹುಡುಕಾಡಿದ್ದೆ ಎಂದು ಅವರು ತಿಳಿಸಿದ್ದಾರೆ. ಈ ಫೋಟೋ ತೆಗೆಸಿಕೊಳ್ಳುವಾಗ ನಟಿ ಹೇಮಾಮಾಲಿನಿಗೆ ಇನ್ನು 14 ವರ್ಷವಂತೆ. ಅಂದ ಹಾಗೇ ತಮ್ಮ ಜೀವನ ಚರಿತ್ರೆಯ ಪುಸ್ತಕಕ್ಕಾಗಿ ನಟಿ ಈ ಪೋಟೋಗಾಗಿ ಸಾಕಷ್ಟು ಹುಡುಕಾಡಿದ್ದೆ ಎಂದು ತಿಳಿಸಿದ್ದಾರೆ.

ಎವಿಎಂ ಸ್ಟುಡಿಯೋದಲ್ಲಿ ಈ ಫೋಟೋವನ್ನು ತೆಗೆಸಿಕೊಂಡಿದ್ದೆ . ಇನ್ನೇನು ಹಿಂದಿಯಲ್ಲಿ ನಟನೆ ಶುರುಮಾಡುವ ಮುನ್ನ ತೆಗೆದ ಫೋಟೋ ಇದು. ಇನ್ನು ಈ ಫೋಟೋದಲ್ಲಿರುವುದು ನಾನೇ ಎಂಬುದನ್ನು ನಂಬಲು ನನಗೆ ಅಸಾಧ್ಯವಾಯಿತು. ಈ ಫೋಟೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ಸಂತಸವಾಗಿದೆ ಎಂದು ತಿಳಿಸಿದ್ದಾರೆ.

ನಟಿ ಹೇಮಾಮಾಲಿನ ಜೀವನಚರಿತ್ರೆ ಬಿಯಾಂಡ್​ ದಿ ಡ್ರೀಮ್​ಗರ್ಲ್​ ಪುಸ್ತಕದ ಪುಟವನ್ನು ಈ ಚಿತ್ರ ಸೇರಲಿದೆ. ಲೇಖಕ ರಾಮ್​ ಕಮಲ್​ ಮುಖರ್ಜಿ ಅವರ ಜೀವನ ಚರಿತ್ರೆ ಬರೆಯುತ್ತಿದ್ದಾರೆ.

Comments are closed.