ಅಂತರಾಷ್ಟ್ರೀಯ

ತಾನು ಸಾಯುವ ಮುಂಚೆ 2500 ಮಕ್ಕಳನ್ನು ಹುಟ್ಟಿಸುವ ಟಾರ್ಗೆಟ್ ಇಟ್ಟುಕೊಂಡ ವ್ಯಕ್ತಿ ! ಈಗಾಗಲೇ 150 ಮಹಿಳೆಯರು ಪ್ರೆಗ್ನೆಂಟ್….

Pinterest LinkedIn Tumblr

ಜಗತ್ತಿನಲ್ಲಿ ಜನ ಇಂದು ಬೇರೆ ಬೇರೆ ರೀತಿಯ ಆಸೆಯನ್ನಿಟ್ಟುಕೊಂಡು ಅದನ್ನು ನೆರವೇರಿಸುವ ಹಂಬಲದಲ್ಲಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾಡಲು ಆಸೆಯನ್ನು ಕೇಳಿ ಇಡೀ ಜಗತ್ತೇ ಈತನನ್ನು ತಿರುಗಿನೋಡುವಂತೆ ಮಾಡಿದೆ. ಅಷ್ಟಕ್ಕೂ ಆತ ನೆರೆವೇರಿಸಲು ಮುಂದಾಗಿರುವ ಆಸೆ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದೆ.

ಈತನ ಆಸೆ ಕೇಳಿದ್ರೆ ನೀವು ಕೂಡ ಒಮ್ಮೆಗೆ ದಂಗಾಗುತ್ತೀರಿ. ತಾನು ಸಾಯುವ ಮುಂಚೆ 2500 ಮಕ್ಕಳನ್ನು ಹುಟ್ಟಿಸುವ ಆಸೆ ಹೊಂದಿದ್ದಾನೆ ಈ ಭೂಪ ! ಈವರೆಗೂ ಆತ 150 ಮಹಿಳೆಯರನ್ನು ಪ್ರೆಗ್ನೆಂಟ್ ಮಾಡಿದ್ದಾನೆ.

ಲಾಕ್‌ಡೌನ್ ಕೂಡಾ ಈತನ ಈ ಗುರಿಗೆ ಯಾವುದೇ ಧಕ್ಕೆಯುಂಟು ಮಾಡಿಲ್ಲ. ಮಾರ್ಚ್‌ನಿಂದ ಈವರೆಗೂ ತಾನು ಅನೇಕ ಮಹಿಳೆಯರನ್ನು ಭೇಟಿಯಾಗಿದ್ದೇನೆ. ಇನ್ನು ತನ್ನ ಟಾರ್ಗೆಟ್ ಪೂರ್ಣಗೊಳಿಸುವುದಷ್ಟೇ ಬಾಕಿ ಎಂದಿದ್ದಾರೆ. ಇದಕ್ಕಾಗಿ ಈತ ಪ್ರತಿ ವಾರ ಐದು ಮಹಿಳೆರನ್ನು ಭೇಟಿಯಾಗುತ್ತಾನೆ.

ಅಮೆರಿಕದ ವರ್ಮಾಂಟ್‌ ನಿವಾಸಿ 49 ವರ್ಷದ ಜೋಯ್ ಡೋನರ್ ಇತ್ತೀಚೆಗೆ ಚರ್ಚೆಯಲ್ಲಿದ್ದಾನೆ. ತನ್ನ ಬಗ್ಗೆ ಈತ ಬಹಿರಂಗಪಡಿಸಿದ ವಿಚಾರದ ಬಳಿಕ ಜನರು ಈತನ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಜೋಯ್ ಓರ್ವ ವೀರ್ಯ ದಾನಿಯಾಗಿದ್ದಾನೆ. ಲಾಕ್‌ಡೌನ್ ವೇಳೆ ತಾನು ಸುಮಾರು ಆರು ಮಕ್ಕಳ ತಂದೆಯಾದ ದಾಖಲೆ ಮಾಡಿದ್ದೇನೆಂದಿದ್ದಾರೆ. ಲಾಕ್‌ಡೌನ್ ಅವರ ಕೆಲಸಕ್ಕೆ ಧಕ್ಕೆಯುಂಟು ಮಾಡಬಹುದೆಂದು ಎಲ್ಲರೂ ಭಾವಿಸಿದ್ದರು. ಆದರೆ ಹಾಗಾಗಲಿಲ್ಲ.

ಜೋಯ್ ಸಾಯುವ ಮುನ್ನ 2500 ಮಕ್ಕಳ ತಂದೆಯಾಗ ಬಯಸಿದ್ದಾನೆ. ವೀರ್ಯ ದಾನಿಯಾಗಿರುವುದರಿಂದ ಭವಿಷ್ಯದಲ್ಲಿ ಈ ಮಕ್ಕಳು ಆತನನ್ನು ತಲುಪಬಹುದು. ಆದರೆ ಈ ಕೆಲಸದಲ್ಲಿ ಅವರು ವೈಯುಕ್ತಿಕವಾಗಿಯೂ ಬಹಳ ಉತ್ಸಾಹ ವಹಿಸಿದ್ದಾರೆ.

ಈವರೆಗೂ ಜೋಯ್ 150 ಮಕ್ಕಳ ತಂದೆಯಾಗಿದ್ದಾರೆ. ಅವರು ವಿಶ್ವದ ಅನೇಕ ಕಡೆ ಈ ನಿಟ್ಟಿನಲ್ಲಿ ಪ್ರಯಾಣ ಮಾಡಿದ್ದಾರೆ. ಅರ್ಜೆಂಟೈನಾದಲ್ಲಿ ಲಾಕ್‌ಡೌನ್‌ನಲ್ಲಿ ಸಿಕ್ಕಾಕೊಂಡ ಅವರು ಸುಮಾರು ಐವರು ಮಹಿಳೆಯರನ್ನು ಪ್ರೆಗ್ನೆಂಟ್ ಮಾಡಿದ್ದಾರೆ.

2020ರಲ್ಲಿ ಅವರು ಇನ್ನೂ ಹತ್ತು ಮಹಿಳೆಯರನ್ನು ಗರ್ಭಿಣಿಯನ್ನಾಗಿಸುವ ಆಸೆ ಹೊಂದಿದ್ದಾರೆ. ಅವರಿಗೆ ಮಕ್ಕಳೆಂದರೆ ಅಚ್ಚುಮೆಚ್ಚು ಹೀಗಾಗಿ ತನ್ನ ವೀರ್ಯದಿಂದ ಹುಟ್ಟಿದ ಅನೇಕ ಮಕ್ಕಳನ್ನು ಅವರು ಭೇಟಿಯಾಗುತ್ತಾರೆ.

ಆರ್ಟಿಫಿಶಿಯಲ್ ಮಾತ್ರವಲ್ಲದೇ ತಾವೇ ಮಹಿಳೆಯರೊಂದಿಗಿದ್ದು ಪ್ರೆಗ್ನೆಂಟ್ ಮಾಡುತ್ತಾರೆ. ಇದಕ್ಕಾಗಿ ಹಣವನ್ನೂ ಪಡೆಯುವುದಿಲ್ಲ. ಅನೇಕ ಬಾರಿ ಪ್ರಯಾಣದ ವೆಚ್ಚವನ್ನಷ್ಟೇ ಪಡೆಯುತ್ತಾರೆ.

ಇದರಿಂದ ನನಗೆ ಬಹಳ ಖುಷಿ ಸಿಗುತ್ತದೆ. ಹೀಗಾಗೇ ತಾನು ಹಣ ಪಡೆಯುವುದಿಲ್ಲ. ಮಕ್ಕಳಾಗಬೇಕೆಂದು ಬಯಸುವ ಮಹಿಳೆಯರಿಗೆ ಸಹಾಯ ಮಾಡಿ ಖುಷಿಯಾಗುತ್ತದೆ ಎನ್ನುತ್ತಾರೆ ಜೋಯ್.

ಆನ್‌ಲೈನ್ ಮೂಲಕ ಮಹಿಳೆಯರು ಅವರನ್ನು ಭೇಟಿಯಾಗುತ್ತಾರೆ. ಇದಾದ ಬಳಿಕ ಅವರಿಗೆ ಇಷ್ಟವಾದಂತೆ ಪ್ರೆಗ್ನೆಂಟ್ ಆಗುತ್ತಾರೆ.

ಸದ್ಯ 49 ವರ್ಷ ಪ್ರಾಯದ ಜೋಯ್ ಈಗಿನ್ನೂ ತಮ್ಮ ಟಾರ್ಗೆಟ್‌ನಿಂದ ಬಹಳ ದೂರವಿದ್ದಾರೆ. ಆದರೆ ಶೀಘ್ರದಲ್ಲೇ ಅವರು ತಮ್ಮ ಟಾರ್ಗೆಟ್ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.