ಬೆಂಗಳೂರು : ಸ್ಯಾಂಡಲ್ವುಡ್ನ ಆ್ಯಂಗ್ರಿ ಯಂಗ್ಮ್ಯಾನ್ ವಸಿಷ್ಠ ಎನ್ ಸಿಂಹ ಅಭಿನಯದ ‘ಕಾಲಚಕ್ರ’ ಚಿತ್ರದ ವಿಭಿನ್ನ ಟೀಸರ್ ಬಿಡುಗಡೆಯಾಗಿದ್ದು, ಭರ್ಜರಿ ಪ್ರಶಂಸೆ ವ್ಯಕ್ತವಾಗಿದೆ.
ವಸಿಷ್ಠ ಎನ್ ಸಿಂಹ ನಾಯಕರಾಗಿ ನಾಲ್ಕು ಪಾತ್ರಗಳಲ್ಲಿ ನಟಿಸಿರುವ ಕಾಲಚಕ್ರ ಚಿತ್ರದ ಟೀಸರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ಲೈಕ್ಸ್ ಅಂಡ್ ವೀವ್ಸ್ ಪಡೆದುಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿದೆ.
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರತಿ ಕ್ಷಣ, ಪ್ರತಿ ನಿಮಿಷ ಹಾಗೂ ಪ್ರತಿ ನಿತ್ಯ ಹೊಸ ಹೊಸ ಆಲೋಚನೆಗಳು ಹುಟ್ಟುತ್ತಲೇ ಇರುತ್ತವೆ. ಅಂಥದ್ದೇ ಒಂದು ಹೊಸ ಥ್ರಿಲ್ಲಿಂಗ್ ಆಲೋಚನೆ ಈಗ ಕಾಲಚಕ್ರ ಟೀಸರ್ ಮೂಲಕ ಬಿಡುಗಡೆಯಾಗಿದೆ.
ರಶ್ಮಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಸುಮಂತ್ ಕ್ರಾಂತಿ ನಿರ್ದೇಶನದ ‘ಕಾಲಚಕ್ರ’ ಚಿತ್ರದ ವಿಭಿನ್ನ ಟೀಸರ್ ಅಪಾರ ಮೆಚ್ಚುಗೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ , ವಸಿಷ್ಠ ಸಿಂಹ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ.
ಸಂತೋಷ್ ನಾಯಕ್ ರಚಿಸಿರುವ ಈ ಹಾಡನ್ನು ಗಾಯಕ ಕೈಲಾಶ್ ಖೇರ್ ಹಾಡಿದ್ದಾರೆ. ಸುಪ್ರಸಿದ್ಧ ಸಂಗೀತ ನಿರ್ದೇಶಕ ಗುರುಕಿರಣ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸುಮಂತ್ ಕ್ರಾಂತಿ ರಚನೆ ಹಾಗೂ ನಿರ್ದೇಶನ ಈ ಚಿತ್ರಕ್ಕಿದೆ. ಈ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಸೈಕಲಾಜಿಕಲ್ ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಲಾಕ್‌ಡೌನ್‌ಗೂ ಮುನ್ನ ನಡೆದಿದ್ದ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ ‘ಕಾಲಚಕ್ರ’ ಚಿತ್ರದ ಟೀಸರ್ ಬಿಡುಗಡೆ ಮಾಡಿ, ಮೆಚ್ಚುಗೆ ಸೂಚಿಸಿ,ಪ್ರಶಂಸೆ ಮಾತುಗಳಾಡಿದ್ದರು.
ಕಾಲಚಕ್ರ’ದ ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಗೊಂಡು ಸಿನಿರಸಿಕರ ಮನಗೆದ್ದಿದೆ. ಎಲ್ ಎಂ ಸೂರಿ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ವಸಿಷ್ಠ ಎನ್ ಸಿಂಹ, ರಕ್ಷ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಕಾಲಚಕ್ರ ಚಿತ್ರದ ಟೀಸರ್ ಹೇಳುವ ಪ್ರಕಾರ ಇದೊಂದು ಸಸ್ಪೆನ್ಸ್ ಥ್ರಿಲ್ಲರ್, ಪ್ರೀತಿ ಇದೆ. ಸಂಬಂಧಗಳ ವ್ಯಾಲ್ಯೂ ಇದೆ. ಪತ್ನಿಯನ್ನು ಕಳೆದುಕೊಂಡ ಪತಿ ಹಾಗೂ ಅಮ್ಮನನ್ನ ಕಳೆದುಕೊಂಡ ಮಗುವಿನ ನೋವಿದೆ. ಜೊತೆಗೆ ಸಾಧನೆ, ಸವಾಲುಗಳು ಮತ್ತು ಮೋಸದ ಕರಿಛಾಯೆಯೂ ಇದೆ.
ಟೀಸರ್ ನೋಡಿ ಎಲ್ಲವನ್ನೂ ಹೇಳಲು ಸಾಧ್ಯವಾಗದೇ ಇದ್ರೂ, ನಿರ್ದೇಶಕ ಸುಮಂತ್ ಕ್ರಾಂತಿಯವರು ಹೇಳಲು ಹೊರಟಿರುವ ಕಥೆಯ ತಿರುಳಿನಲ್ಲಿ ಸಮ್ಥಿಂಗ್ ಈಸ್ ದೇರ್ ಎನ್ನುವ ಸಂದೇಶವಂತೂ ಕಾಣಿಸುತ್ತೆ. ಎಲ್ಲದಕ್ಕಿಂತ ಮುಖ್ಯವಾದ ಸಂಗತಿ ಏನಂದ್ರೆ, ಕಾಲಚಕ್ರ ಕಾಲ್ಪನಿಕ ಕಥೆಯಲ್ಲ. ಇದು ರಿಯಲ್ ಸ್ಟೋರಿಯನ್ನ ಆಧರಿಸಿದ ಚಿತ್ರವಾಗಿದೆ. ಒಮ್ಮೆ ನೋಡಿದ್ರೆ ಮತ್ತೊಮ್ಮೆ ನೋಡಬೇಕು ಎನ್ನುವ ಕುತೂಹಲ ಉಂಟಾಗುತ್ತೆ.
ಕಾಲಚಕ್ರ. 1991ರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಇದೇ ಟೈಟಲ್ನಲ್ಲಿ ಸಿನಿಮಾ ಮಾಡಿದರು. ಸೂಪರ್ ಡೂಪರ್ ಹಿಟ್ ಕೂಡ ಆಗಿತ್ತು. ಇದೀಗ 29 ವರ್ಷಗಳ ಬಳಿಕ ಈಗ ಅದೇ ಕಾಲಚಕ್ರ ಟೈಟಲ್ನಲ್ಲಿ ಹೊಸ ಚಿತ್ರ ರೆಡಿಯಾಗಿದೆ.