ಅಂತರಾಷ್ಟ್ರೀಯ

ಸಾಲಕ್ಕೆ ವಿದ್ಯಾರ್ಥಿನೀಯರ ನಗ್ನ ಫೋಟೋ, ವಿಡಿಯೋಗಳು!

Pinterest LinkedIn Tumblr

chinaಬೀಜಿಂಗ್: ನೂರಾರು ಯುವತಿಯರ ನಗ್ನ ಚಿತ್ರ ಮತ್ತು ವಿಡಿಯೋಗಳನ್ನು ಆಧಾರವಾಗಿ ಇಟ್ಟುಕೊಂಡು ಸಾಲ ನೀಡುತ್ತಿರುವ ದಂಧೆ ಚೀನಾದಲ್ಲಿ ಬೆಳಕಿಗೆ ಬಂದಿದೆ. ಇಂತಹ ದಂಧೆ ನಡೆಸುತ್ತಿದ್ದ ಜಿಡೈಬೊ ಎಂಬ ಆನ್ಲೈನ್ ಸಂಸ್ಥೆಯಲ್ಲಿ ಸಾಲ ಪಡೆದಿದ್ದ ಸುಮಾರು 160 ಯುವತಿಯರ ನಗ್ನ ಚಿತ್ರ ಮತ್ತು ವಿಡಿಯೋಗಳು ಸೋರಿಕೆಯಾಗಿವೆ.

ಕಳೆದ ನವೆಂಬರ್ 30ರ ನಂತರ 10 ಜಿಬಿಯಷ್ಟು ಮಹಿಳೆಯರ ನಗ್ನ ಚಿತ್ರ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಬಹಿರಂಗಗೊಂಡಿವೆ. ಇವುಗಳಲ್ಲಿ 144 ಕಾಲೇಜು ವಿದ್ಯಾರ್ಥಿನಿಯರದ್ದಾಗಿದೆ. ಕೆಲವು ಯುವತಿಯರು ಸಾಲಕ್ಕೆ ಬದಲಾಗಿ ಸೆಕ್ಸ್ನಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿರುವ ಸ್ಕ್ರೀನ್ಶಾಟ್ಗಳು ಬಹಿರಂಗಗೊಂಡಿವೆ. 2015ರಲ್ಲಿ ಜೆಡಿ ಕ್ಯಾಪಿಟಲ್ನಲ್ಲಿ ಸ್ಥಾಪನೆಗೊಂಡಿರುವ ಜಿಡೈಬೊ ನಗ್ನ ಚಿತ್ರ ಅಥವಾ ವಿಡಿಯೋಗಳನ್ನು ನೀಡುವ ಯುವತಿಯರಿಗೆ ವಾರಕ್ಕೆ ಶೇ.30ರಷ್ಟು ಬಡ್ಡಿಗೆ ಸಾಲ ನೀಡುತ್ತಿದೆ.

ಶೋಕಿ ಜೀವನದ ಆಸೆಗೆ ಬಿದ್ದು ಖಾಸಗಿ ಚಿತ್ರ, ವಿಡಿಯೋಗಳನ್ನು ಅಡವಿಟ್ಟು ಸಾಲ ಪಡೆಯುತ್ತಿರುವ ಕಾಲೇಜು ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚುತ್ತಿದೆ ಎನ್ನಲಾಗಿದೆ. ಸಾಲ ಮರುಪಾವತಿ ಮಾಡುವಲ್ಲಿ ವಿಫಲರಾದ ಯುವತಿಯರ ನಗ್ನ ಚಿತ್ರಗಳನ್ನು ಆಕೆಯ ಕುಟುಂಬಸ್ಥರಿಗೆ ಅಥವಾ ಸಾಮಾಜಿಕ ತಾಣಗಳಲ್ಲಿ ಹರಿಯಬಿಡಲಾಗುತ್ತದೆ. ಇಂತಹ ಅನೈತಿಕ ದಂಧೆ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

Comments are closed.