ರಾಷ್ಟ್ರೀಯ

ದುಬೈನಿಂದ ಭಾರತಕ್ಕೆ ಹಿಂತಿರುಗಲಾಗದೆ ನ್ಯಾಯಾಲಯದ ಅನುಮತಿಗೆ ಕಾಯುತ್ತಿದ್ದ ವ್ಯಕ್ತಿಗೆ ಸುಷ್ಮಾ ಸಹಾಯ

Pinterest LinkedIn Tumblr

sushmaನವದೆಹಲಿ: ದುಬೈನಿಂದ ಭಾರತಕ್ಕೆ ಹಿಂತಿರುಗಲು ಸ್ಥಳೀಯ ನ್ಯಾಯಾಲಯದಲ್ಲಿ ಅನುಮತಿಗಾಗಿ 2 ವರ್ಷಗಳ ಕಾಲ ಪರದಾಡುತ್ತಿದ್ದ ಭಾರತೀಯ ವ್ಯಕ್ತಿಯನ್ನು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ತವರಿಗೆ ಕರೆಸಿಕೊಂಡಿದ್ದಾರೆ.

ಉದ್ಯೋಗ ನಿಮಿತ್ತ ದುಬೈನಲ್ಲಿ ನೆಲೆಸಿದ್ದ ತಮಿಳುನಾಡಿನ ತಿರುಚರಾಪಲ್ಲಿ ಗ್ರಾಮದ ಜಗನ್ನಾಥನ್ ಸೆಲ್ವರಾಜ್ಗೆ ಬಸ್ನಲ್ಲಿ ಸಂಚರಿಸಲು ದುಡ್ಡಿಲ್ಲದೆ ಕಾಲ್ನಡಿಗೆಯಲ್ಲೇ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದ. ಹೀಗೆ 20ಕ್ಕೂ ಹೆಚ್ಚು ಬಾರಿ ಕೋರ್ಟ್ ಮೆಟ್ಟಿಲೇರಿದ್ದ ಈತ ಬರೋಬ್ಬರಿ ಒಟ್ಟು 1000 ಕಿ.ಮೀ. ಕ್ರಮಿಸಿದ್ದ. ಸೆಲ್ವರಾಜ್ ಕುರಿತು ಪ್ರಮುಖ ವೆಬ್ಸೈಟ್ ಒಂದರಲ್ಲಿ ಪ್ರಕಟಗೊಂಡಿದ್ದ ವರದಿಯನ್ನು ಗಮನಿಸಿದ್ದ ಸುಷ್ಮಾ ಸ್ವರಾಜ್ ತಕ್ಷಣ ಆತನಿಗೆ ತವರಿಗೆ ವಾಪಾಸಾಗಲು ವಿಮಾನದ ಟಿಕೆಟ್ ಮತ್ತಿತರ ಸೌಲಭ್ಯ ಕಲ್ಪಿಸಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಸುಷ್ಮಾ, ಸೆಲ್ವರಾಜ್ನನ್ನು ಭಾರತಕ್ಕೆ ಕರೆಸಿಕೊಂಡು ಆತನ ತವರೂರಾದ ತಿರುಚರಾಪಲ್ಲಿಗೆ ಕಳುಹಿಸಿಕೊಡಲಾಗಿದೆ ಎಂದಿದ್ದಾರೆ.

ತಿರುಚರಾಪಲ್ಲಿಯಲ್ಲಿ 2 ವರ್ಷಗಳ ಹಿಂದೆ ಸೆಲ್ವರಾಜ್ ತಾಯಿ ನಿಧನರಾಗಿದ್ದರು. ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ತವರಿಗೆ ವಾಪಾಸಾಗಲು ಮುಂದಾದ ಸೆಲ್ವರಾಜ್ಗೆ ಅಲ್ಲಿನ ಕಾನೂನು ತೊಡಕುಗಳು ಉಂಟಾದವು. ನಂತರ ತವರಿಗೆ ವಾಪಾಸಾಗಲು ಸಾಧ್ಯವಾಗಿರಲಿಲ್ಲ.

Comments are closed.