ರಾಷ್ಟ್ರೀಯ

ಜಯಲಲಿತಾರ ನಗುಮುಖದ ಹಿಂದೆ ಕಣ್ಣೀರಿನ ಕಥೆ

Pinterest LinkedIn Tumblr

jayalalithaಜಯಲಲಿತಾ ಅಕ್ಷರಶಃ ಮಹಾರಾಣಿಯಾಗಿ ಮೆರೆದವರು ಆದರೆ ಅವರ ನಗುಮುಖದ ಹಿಂದೆ ಕಣ್ಣೀರಿನ ಕಥೆಯೂ ಇದೆ. ಆಕೆ, ತಾಯಿಯ ಮಮಕಾರಕ್ಕಾಗಿ, ವಾತ್ಲಲ್ಯಕ್ಕಾಗಿ ಕಾತರಿಸಿ ಕಾತರಿಸಿ ನರಳಿದ ಹೆಣ್ಣು. ಆಕೆಯ ಬದುಕು ಕೋಮಲವಾಗಿಯಂತೂ ಇರಲಿಲ್ಲ. ಆಕೆ, ತನ್ನನ್ನು ಪ್ರೀತಿಸಿದವರ ಪಾಲಿಗೆ ನಿಲುಕದ ನಕ್ಷತ್ರ. ವಿಪರ್ಯಾಸವೆಂದರೆ ಆಕೆ ಪ್ರೀತಿಸಿದ್ದೆಲ್ಲವೂ ಅವಳ ಪಾಲಿಗೆ ನಿಲುಕದ ನಕ್ಷತ್ರವಾಗಿಯೇ ಉಳಿದುಹೋಯ್ತು. ಏಕಾಂಗಿನಿ ಕೋಮಲವಲ್ಲಿ. ಅಂದಹಾಗೆ ಕೋಮಲವಲ್ಲಿ ಅನ್ನೋದು ಜಯಲಲಿತಾರ ವೊರಿಜಿನಲ್ ಹೆಸರು.
ಜಯಲಲಿತಾ ಅಕ್ಷರಶಃ ಮಹಾರಾಣಿಯಾಗಿ ಮೆರೆದವರು ಆದರೆ ಅವರ ನಗುಮುಖದ ಹಿಂದೆ ಕಣ್ಣೀರಿನ ಕಥೆಯೂ ಇದೆ. ಆಕೆ, ತಾಯಿಯ ಮಮಕಾರಕ್ಕಾಗಿ, ವಾತ್ಲಲ್ಯಕ್ಕಾಗಿ ಕಾತರಿಸಿ ಕಾತರಿಸಿ ನರಳಿದ ಹೆಣ್ಣು. ಆಕೆಯ ಬದುಕು ಕೋಮಲವಾಗಿಯಂತೂ ಇರಲಿಲ್ಲ. ಆಕೆ, ತನ್ನನ್ನು ಪ್ರೀತಿಸಿದವರ ಪಾಲಿಗೆ ನಿಲುಕದ ನಕ್ಷತ್ರ. ವಿಪರ್ಯಾಸವೆಂದರೆ ಆಕೆ ಪ್ರೀತಿಸಿದ್ದೆಲ್ಲವೂ ಅವಳ ಪಾಲಿಗೆ ನಿಲುಕದ ನಕ್ಷತ್ರವಾಗಿಯೇ ಉಳಿದುಹೋಯ್ತು. ಏಕಾಂಗಿನಿ ಕೋಮಲವಲ್ಲಿ. ಅಂದಹಾಗೆ ಕೋಮಲವಲ್ಲಿ ಅನ್ನೋದು ಜಯಲಲಿತಾರ ವೊರಿಜಿನಲ್ ಹೆಸರು.
ಕೋಮಲವಲ್ಲಿ ಅದು ಜಯಲಲಿತಾರ ಮೂಲ ನಾಮ. ಜಯಲಲಿತಾ ತಮಿಳುನಾಡು ಸಿಎಂ ಆದ ಮೇಲಿನ ಆ ವೈಭವದ ದಿನಗಳನ್ನು ನೋಡಿದವರಿಗೆ, ಜಯಲಲಿತಾರ ಜೀವನದ ಹಠಮಾರಿತನದ ಕಥೆಗಳನ್ನು ಕೇಳಿದ್ದವರಿಗೆ, ಅಂಥಾ ಜಯಲಲಿತಾಳ ಜೀವನದ ಹಿಂದೆ ನೋವಿತ್ತು ಎಂದರೆ ನಂಬೋಕೆ ಕಷ್ಟವಾಗುತ್ತೆ ಆದರೆ, ಅದು ನಿಜ.
ಜಯಲಲಿತಾ ಯೌವನದ ದಿನಗಳಲ್ಲಂತೂ ಅದ್ಭುತ ಸೌಂದರ್ಯದ ಖನಿ. ಆ ಸೌಂದರ್ಯಕ್ಕೆ, ಕುಡಿನೋಟಕ್ಕೆ ಮರುಳಾಗದವರಿಲ್ಲ. ಆದರೆ, ಹಾಗೆ ಮರುಳಾದ ಒಬ್ಬನೇ ಒಬ್ಬನೂ ಆಕೆಯ ಆತ್ಮಸಂಗಾತಿಯಾಗಲಿಲ್ಲ. ಆಕೆಯ ಜೀವನದಲ್ಲಿ ಜಯಲಲಿತಾ ಬಾಲ್ಯದಿಂದ ಕೊನೆಯವರೆಗೂ ನೆಮ್ಮದಿಯ ಬದುಕು ಕಾಣಲೇ ಇಲ್ಲ.
ಇನ್ನಿಲ್ಲದಂತೆ ಪ್ರೀತಿಸುವ ತಾಯಿಯಿದ್ದಳು. ವಾತ್ಸಲ್ಯ ದೂರವಾಗಿತ್ತು. ಆಕೆಯ ಹೆಸರಲ್ಲಿ ಬಾಲ್ಯದಲ್ಲಿಯೇ ಲಕ್ಷಾಂತರ ಬೆಲೆ ಬಾಳುವ ಆಸ್ತಿಯಿತ್ತು. ಆದರೆ, ಬಡತನ ಕಿತ್ತು ತಿನ್ನುತ್ತಿತ್ತು. ಆದರೆ, ಆಕೆಗದು ಗೊತ್ತೇ ಇರಲಿಲ್ಲ. ಓದಬೇಕು, ದೊಡ್ಡ ಆಫೀಸರ್ ಆಗಬೇಕು ಎಂದು ಕನಸು ಕಟ್ಟಿಕೊಂಡಿದ್ದ ಹುಡುಗಿಗೆ, ಓದುವ ಭಾಗ್ಯವೇ ಸಿಕ್ಕಲಿಲ್ಲ. ಆಕೆಯ ಜೀವನದಲ್ಲಿ ಬಂದಂತಹ ಎಲ್ಲರೂ, ಆಕೆಯನ್ನು ಬಳಸಿಕೊಂಡರಷ್ಟೆ. ಜಯಲಲಿತಾ ಒಂದೊಂದೇ ಮೆಟ್ಟಿಲು ಮೇಲೇರುತ್ತಾ ಹೋದಂತೆ ಏಕಾಂಗಿಯಾಗುತ್ತಲೇ ಹೋದಾಕೆ. ಆಕೆ ತಮಿಳರ ಪಾಲಿಗೆ ಅಮ್ಮನಾದಳೇನೋ ನಿಜ. ಆದರೆ. ನಿಜ ಜೀವನದಲ್ಲಿ ಆಕೆ ತಾಯಿಯಾಗಲೇ ಇಲ್ಲ.
ಹಾಗೆ ಅಭಿಮಾನದ ಕೋಟೆಯೊಳಗೆ ಏಕಾಂಗಿನಿಯಾಗಿದ್ದ ಜಯಲಲಿತಾ ಬಾಲ್ಯದಲ್ಲಿ ಹಂಬಲಿಸಿದ್ದು ಹಿಡಿ ಪ್ರೀತಿಗಾಗಿ. ಅಮ್ಮನ ವಾತ್ಸಲ್ಯದ ಅಪ್ಪುಗೆಗಾಗಿ. ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿಯಾದರೂ ಅಪ್ಪಟ ಕನ್ನಡತಿ. ಆಕೆ ಹುಟ್ಟಿದ್ದು ಇಲ್ಲೇ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ. ಅಪ್ಪಟ ಅಯ್ಯಂಗಾರ್ ಬ್ರಾಹ್ಮಣ ಕುಟುಂಬದ ಹೆಣ್ಣುಮಗಳಾಕೆ. ಅವರ ಸಂಪ್ರದಾಯದಲ್ಲಿ ಸಾಮಾನ್ಯವಾಗಿ ಎರಡು ಹೆಸರನ್ನಿಡುತ್ತಾರೆ. ಜನ್ಮನಾಮದಲ್ಲೊಂದು ಹೆಸರು. ಆಮೇಲೆ ಮತ್ತೊಂದು ಹೆಸರು. ಹಾಗೆ ಇಟ್ಟ ಜನ್ಮನಾಮವೇ ಕೋಮಲವಲ್ಲಿ. ಇನ್ನೊಂದು ಹೆಸರು ಜಯಲಲಿತಾ.. ಜಯಾರನ್ನು ಆಕೆಯ ಹೆತ್ತವರು, ಸಂಬಂಧಿಕರೆಲ್ಲ ಕರೆಯುತ್ತಿದ್ದುದು ಅಮ್ಮು ಅಂತಾನೇ.
ಇಂಥಾ ಕುಟುಂಬದ ಜಯಲಲಿತಾ ತಮ್ಮ ನಾಲ್ಕನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ಜಯಾ ತಾಯಿ ಸಂಧ್ಯಾಗೆ ಗಂಡನನ್ನು ಸಾಕುವ ಜವಾಬ್ದಾರಿ ತಪ್ಪಿತಷ್ಟೇ. ಮಗಳನ್ನು ಸಾಕುವ, ದೊಡ್ಡ ವ್ಯಕ್ತಿಯನ್ನಾಗಿಸುವ ಹೊಣೆ ಹೆಗಲೇರಿತು. ಸಂಧ್ಯಾಗಿದ್ದ ಏಕೈಕ ಆಸರೆ ಸಿನಿಮಾಗಳೇ. ಸಂಧ್ಯಾ ಆ ಕಾಲದಲ್ಲಿ ಪೋಷಕನಟಿಯಾಗಿ ನಟಿಸುತ್ತಿದ್ದವರು. ಚಿತ್ರರಂಗ ಇದ್ದದ್ದು ಮದ್ರಾಸ್ನಲ್ಲಿ. ಹಾಗಾಗಿ ಮಗಳಿಗೆ ಅಕ್ಷರಾಭ್ಯಾಸ ಮಾಡಿಸಿ, ಆರೈಕೆ ಮಾಡುವಷ್ಟು ಸಮಯ ಸಂಧ್ಯಾಗೆ ಸಿಗಲೇ ಇಲ್ಲ. ಅತ್ತ ಜಯಲಲಿತಾ ಬಾಲ್ಯದಲ್ಲೇ ಅಮ್ಮನ ಸಾಂಗತ್ಯದಿಂದ ದೂರವಾಗ್ತಾ ಇದ್ದರು.
ಜಯಲಲಿತಾ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದು ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಹೈಸ್ಕೂಲ್ನಲ್ಲಿ. ಓದಿನಲ್ಲಿ ಪ್ರಚಂಡ ಬುದ್ದಿವಂತೆ. ಆದರೆ, ತನ್ನ ಸಾಧನೆ ಕೇಳೋಕೆ, ಮುದ್ದಿಸೋಕೆ ಅಮ್ಮನಿಲ್ಲ ಎಂಬ ಕೊರಗು ಆಕೆಯನ್ನು ಕಾಡುತ್ತಲೇ ಇತ್ತು. ಜಯಾ ಬೆಳೆದಿದ್ದು ಜಯಲಲಿತಾ ಸೋದರಿ ವಿದ್ಯಾ ಅಲಿಯಾಸ್ ಪದ್ಮವಲ್ಲಿ ಅವರ ಬಳಿ. ವಾರಕ್ಕೊಮ್ಮೆಯೋ, ಎರಡು ವಾರಕ್ಕೊಮ್ಮೆಯೋ ಮೈಸೂರಿಗೆ ಬರುತ್ತಿದ್ದ ಸಂಧ್ಯಾಳನ್ನು ಮಗಳು ಜಯಾ ಅಪ್ಪಿಕೊಂಡು ಕಣ್ಣೀರಿಡುತ್ತಿದ್ದಳು. ಶಾಲೆಯಲ್ಲಿ ಗೆದ್ದ ಪ್ರಶಸ್ತಿಗಳನ್ನು ಅಮ್ಮನಿಗೆ ತೋರಿಸೋಕೆ ಅರ್ಧರಾತ್ರಿವರೆಗೂ ಎದ್ದು ಕೂರುತ್ತಿದ್ದಳು.
ಆದರೆ, ಆಕೆಗೆ ಒಂದು ಸತ್ಯ ಗೊತ್ತಾಗಿ ಹೋಗಿತ್ತು. ಮಲಗುವಾಗ ತನ್ನ ಜೊತೆಯಲ್ಲೇ ಇರುವ ಅಮ್ಮ, ಬೆಳಗಾಗುವ ಹೊತ್ತಿಗೆ ಎದ್ದು ಹೋಗಿಬಿಡುತ್ತಾಳೆ ಅನ್ನೋ ಸತ್ಯ ಅವಳಿಗೆ ಗೊತ್ತಾಗಿತ್ತು. ಅಮ್ಮ ತನ್ನನ್ನು ಬಿಟ್ಟು ಹೋಗಬಾರದು ಅಂತಾ ತಾಯಿಯ ಸೆರಗನ್ನು ಕೈಗೆ ಕಟ್ಟಿಕೊಂಡು ಮಲಗುತ್ತಿದ್ದರಂತೆ ಜಯಲಲಿತಾ. ಹೆತ್ತಕರುಳಿನ ಸಂಕಟವೇ ಬೇರೆ. ಹೊಟ್ಟೆಪಾಡು ನಡೆಯಬೇಕಲ್ಲ ಮಲಗಿದ್ದ ಮಗಳನ್ನು ಎಬ್ಬಿಸಿದರೆ ಅತ್ತಾಳು ಎಂದುಕೊಂಡು, ಸೀರೆಯನ್ನೇ ಬಿಚ್ಚಿಟ್ಟು, ಬೇರೆ ಸೀರೆ ಉಟ್ಟುಕೊಂಡು ಹೊರಟು ಹೋಗುತ್ತಿದ್ದರಂತೆ ತಾಯಿ ಸಂಧ್ಯಾ.
ಮಗಳು ಒಂಟಿಯಾಗಿಬಿಟ್ಟಾಳು ಎಂದು ಆತಂಕಗೊಂಡಿದ್ದ ತಾಯಿ, 3ನೇ ವಯಸ್ಸಿಗೇ ಮಗಳನ್ನು ನೃತ್ಯ ಶಾಲೆಗೆ ಸೇರಿಸಿಬಿಟ್ಟರು. ಜಯಲಲಿತಾಳ ಪುಟ್ಟ ಕಾಲಿಗೆ ಗೆಜ್ಜೆ ಕಟ್ಟಲಾಗಿತ್ತು.
ಹೀಗೆ ತಾಯಿಯ ವಾತ್ಸಲ್ಯಕ್ಕಾಗಿ ಬಾಲ್ಯವಿಡೀ ಹಂಬಲಿಸಿದ ಜಯಲಲಿತಾ ಆಮೇಲೆ ಚೆನ್ನೈಗೆ ಶಿಫ್ಟ್ ಆದಳು. ಚೆನ್ನೈನ ಚರ್ಚ್ ಪಾರ್ಕ್ ಶಾಲೆಯಲ್ಲಿ ವ್ಯಾಸಂಗ ಮುಂದುವರೆಯಿತು. ಜಯಾ, ಭಾಷೆಗಳ ವಿಚಾರದಲ್ಲಿ ಅದೆಷ್ಟು ಪ್ರೌಢಿಮೆ ಹೊಂದಿದ್ದಳೆಂದರೆ, ಜಯಲಲಿತಾ ಬಾಲ್ಯದಲ್ಲೇ ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವವಿತ್ತು. ಐದೂ ಭಾಷೆಗಳನ್ನು ಸುಲಲಲಿತಾಗಿ ಮಾತನಾಡುತ್ತಿದ್ದ ಜಯಲಲಿತಾ, 10ನೇ ತರಗತಿಯಲ್ಲಿ ರ್ಯಾಂಕ್ ಸ್ಟೂಡೆಂಟ್. ಜಯಲಲಿತಾ ಶಾಲೆಗಲ್ಲ, ಇಡೀ ತಮಿಳುನಾಡಿಗೇ ಫಸ್ಟ್ ರ್ಯಾಂಕ್ ಬಂದಿದ್ದ ಹುಡುಗಿ.

Comments are closed.