ಅಂತರಾಷ್ಟ್ರೀಯ

ತಮ್ಮದೇ ಖಜಾನೆ ಲೂಟಿ ಮಾಡಿದ ಐಸಿಸ್ ನಾಯಕರು

Pinterest LinkedIn Tumblr

isisisiನಿನೆವೇಹ್‌, ಇರಾಕ್‌: ಐಎಸ್‌ ಉಗ್ರ ಸಂಘಟನೆಯ ಐದು ಮಂದಿ ಪ್ರಮುಖ ನಾಯಕರು ತಮ್ಮದೇ ಖಜಾನೆಯಿಂದ ಡಾಲರ್‌ಗಟ್ಟಲೆ ಹಣ ದೋಚಿ ಪರಾರಿಯಾಗಿದ್ದಾರೆ.

ಐಎಸ್‌ನ ಖಜಾನೆ ಅಧಿಕಾರಿ ಅಬು ಅಲ್‌– ಬರಾ ಅಲ್‌–ಖಹ್ತಾನಿ ಸೇರಿದಂತೆ ಐದು ಮಂದಿ ನಾಯಕರು ತೆಲ್‌ ಅಫ್ತರ್‌ ಜಿಲ್ಲೆಯ ನಿನೆವೇಹ್‌ ಪಟ್ಟಣದಿಂದ ಹಣ ಲೂಟಿ ಮಾಡಿಕೊಂಡು ಕಾಲ್ಕಿತ್ತಿದ್ದಾರೆ.

‘ಪರಾರಿಯಾಗಿರುವ ಐದು ಮಂದಿಯನ್ನು ಹುಡುಕಿ ಅವರನ್ನು ಕೊಲ್ಲಲು ಐಎಸ್‌ ತನ್ನ ಸದಸ್ಯರ ತಂಡವೊಂದನ್ನು ರಚಿಸಿದೆ’ ಎಂದು ಅಲ್‌ ಸುಮಾರಿಯಾ ಸುದ್ದಿವಾಹಿನಿ ವರದಿ ಮಾಡಿದೆ.

ಈ ಐದು ಮಂದಿಯ ತಂಡದಲ್ಲಿ ಕೇರಳ ಮೂಲದ ಒಬ್ಬ ಉಗ್ರನೂ ಇದ್ದ ಎನ್ನಲಾಗಿದೆ.

Comments are closed.