ಕರಾವಳಿ

ಕುಂದಾಪುರ(ಉಳ್ಳೂರು): ನಾಯಿ ಕಡಿತದಿಂದ ಗಂಭೀರ ಗಾಯಗೊಂಡ ಜಿಂಕೆಯ ರಕ್ಷಣೆ

Pinterest LinkedIn Tumblr

ಕುಂದಾಪುರ: ಬೀದಿ ನಾಯಿ ಕಡಿತಕ್ಕೊಳಗಾಗಿ ಗಾಯಗೊಂಡ ಗಂಡು ಜಿಂಕೆಯನ್ನು ಉಳ್ಳೂರು ಗ್ರಾಮಸಮಿತಿ ಸದಸ್ಯ ಚಿಟ್ಟೆ ರಾಜಗೋಪಾಲ ಹೆಗ್ಡೆ ಹಾಗೂ ಸ್ಥಳಿಯರು ರಕ್ಷಿಸಿದ ಘಟನೆ ಕುಂದಾಪುರ ತಾಲೂಕಿನ ೭೪ನೇ ಉಳ್ಳೂರು ಗ್ರಾಮದಲ್ಲಿ ನಡೆದಿದೆ.

kundapura_jinke_rakshane-2

kundapura_jinke_rakshane-1

ಹಿಂದಿನ ಕಾಲು ಗಂಭೀರ ಗಾಯಗೊಂಡು ದಯನೀಯ ಸ್ಥಿತಿಯಲ್ಲಿ ಉಳ್ಳೂರು ಗ್ರಾಮಸಮಿತಿ ಸದಸ್ಯ ಚಿಟ್ಟೆ ರಾಜಗೋಪಾಲ್ ಹೆಗ್ಡೆ ಅವರ ತೋಟದ ಬಳಿಯ ತೊರೆ ಸಮೀಪ ನೀರು ಕುಡಿಯಲು ಬಂದ ಜಿಂಕೆಯನ್ನು ನೋಡಿದ ರಾಜಗೋಪಾಲ ಹೆಗ್ಡೆ ಅವರು ಸ್ಥಳೀಯರಾದ ಗುಂಡ ಹಾಗೂ ವಿಜಯ್ ಎನ್ನುವವರ ಸಹಕಾರದಲ್ಲಿ ಜಿಂಕೆಯನ್ನು ಫೋಷಿಸಿ ಅದಕ್ಕೆ ನೀರು ಕೊಡುವ ಮೂಲಕ ಆರೈಕೆ ನೀಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಬ್ರಿಜೇಶ್ ವಿನಯಕುಮಾರ್ ಅವರ ಮಾರ್ಗದರ್ಶನದಲ್ಲಿ ವನಪಾಲಕರಾದ ಹರೀಶ್ ಬಾರ್ಕೂರು ವನರಕ್ಷಕ ಶ್ರೀಕಾಂತ್ ಹಾಗೂ ವನವೀಕ್ಷಕರಾದ ರಘು ಮತ್ತು ಭಾಸ್ಕರ್ ಅವರು ಜಿಂಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿದ್ದಾಪುರ ಬರಾಬಾಳು ಅರಣ್ಯ ಇಲಾಖೆ ದೇವಿವನಕ್ಕೆ ಕೊಂಡೊಯ್ದಿದ್ದಾರೆ.

Comments are closed.