ಅಂತರಾಷ್ಟ್ರೀಯ

ಆಫ್ಗನ್ ಸೈನಿಕರ ಕಾರ್ಯಾಚರಣೆ, 37 ಐಸಿಸ್ ಉಗ್ರರ ಸಾವು

Pinterest LinkedIn Tumblr

isis-web1ಕಾಬೂಲ್: ಆಫ್ಘಾನಿಸ್ತಾನದ ಪೂರ್ವ ನಾಂಗರಾಹರ್ ಪ್ರಾಂತ್ಯದಲ್ಲಿ ಮಂಗಳವಾರ ಸೈನಿಕರು ನಡೆಸಿದ ಕಾರ್ಯಾಚರಣೆಯಿಂದ 37ಕ್ಕೂ ಅಧಿಕ ಐಸಿಸ್ ಉಗ್ರರು ಬಲಿಯಾಗಿದ್ದಾರೆ.

ಹಲವು ಗಂಟೆಗಳಿಂದ ಸೈನಿಕರು ನಡೆಸಿದ ಯಶಸ್ವಿ ಕಾರ್ಯಾಚರಣೆಯ ಫಲವಾಗಿ ಈಗಾಗಲೇ 37 ಉಗ್ರರು ಸಾವನ್ನಪ್ಪಿದ್ದು, 44ಕ್ಕೂ ಹೆಚ್ಚು ಉಗ್ರರು ಗಾಯಗೊಂಡಿದ್ದಾರೆ. ಸೈನಿಕರು ಉಗ್ರರನ್ನು ಹತ್ತಿಕ್ಕಲು ವಾಯುದಾಳಿ ಹಾಗೂ ಫಿರಂಗಿ ದಾಳಿ ನಡೆಸಿದ್ದಾರೆ. ಕೋಟಾ ಜಿಲ್ಲೆಯಲ್ಲಿ ಸೈನಿಕರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಈ ಮೊದಲು ಆಫ್ಘನ್ ಹಾಗೂ ಅಮೆರಿಕಾ ಪಡೆಗಳ ಮೇಲೆ ಉಗ್ರರು ದಾಳಿ ನಡೆಸಿದ್ದರು. ಆದರೆ ಸೈನಿಕರು ಇದನ್ನು ಯಶಸ್ವಿಯಾಗಿ ಹತ್ತಿಕ್ಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments are closed.