ಉತಾಹ್: ನಾಸಾದಿಂದ ಜಗತ್ತಿನ ಪ್ರಥಮ ಶಕ್ತಿಶಾಲಿ ರಾಕೆಟನ್ನು ಉತಾಹ್ ಉಡಾವಣೆ ಕೇಂದ್ರದಿಂದ ಮಂಗಳವಾರ ಉಡಾವಣೆ ಮಾಡಲಿದೆ. ಬಾಹ್ಯಾಕಾಶ ಯಾತ್ರಿಗಳಿಗೆ ಮತ್ತು ಮಂಗಳ ಗೃಹ ಹಾಗೂ ಇನ್ನಿತರ ಬಾಹ್ಯಾಕಾಶ ಯಾತ್ರೆಗಳಿಗೆ ಈ ರಾಕೆಟ್ ಸಹಾಯವಾಗಲಿದೆ.
ಮಂಗಳವಾರ ಬೆಳಗಿನ ಜಾವ ಉಡಾವಣೆ ಮಾಡಿದ ರಾಕೆಟ್ ಜಗತ್ತಿನ ಶಕ್ತಿದಾಯಕ ರಾಕೆಟ್ ಆಗಲಿದೆ ಎಂದು ತಿಳಿಸಿದೆ. ಬಾಹ್ಯಾಕಾಶದಲ್ಲಿ ಯಾನಿಗಳ ನಿರ್ದಿಷ್ಟ ಕಕ್ಷೆ ಜತೆಗೆ ದತ್ತಾಂಶ ಕೂಡ ಒದಗಿಸಲಿದೆ ಎಂದು ನಾಸಾ ಹೇಳಿದೆ. ಉಡಾವಣೆ ಮಾಡಲಿರುವ ರಾಕೆಟ್ ಪ್ರಯೋಗ ಕಡೆಯ ಸಲದ್ದಾಗಿದ್ದು ಇದರ ನಂತರ 2018 ರಲ್ಲಿ ನಾಸಾ ನಿಗದಿತ ಇಎಮ್1 ಎಂಬ ಹೆಸರಿನಲ್ಲಿ ಅಧಿಕೃತ ಸೇವೆಯನ್ನು ಓರಿಯನ್ ಬಾಹ್ಯಾಕಾಶ ನೌಕೆಗೆ ಜೋಡಣೆ ಮಾಡಲಿದೆ.
ಓರಿಯನ್ ನೌಕೆ ಚಂದ್ರಯಾನಕ್ಕೆ ಈ ರಾಕೆಟ್ ಜತೆ ಇನ್ನೂ 13 ಉಪಗ್ರಹಗಳನ್ನು 2018 ರಲ್ಲಿ ಹೊತ್ತೊಯ್ಯಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಉಪಕರಣಗಳು ಅಥವಾ ಕೂಬ್ಸ್ಯಾಟ್ಸ್ ಎಂದು ಕರೆಯಲ್ಪಡುವ ವಸ್ತುಗಳನ್ನು ಹೊರಲಿದೆ. ಇವು ಮುಂಬರುವ ಉದ್ದೇಶಿತ ಮನುಕುಲದ ಮಂಗಳ ಗೃಹ ವಾಸದ ಬಗ್ಗೆ ನಿಖರ ಮಾಹಿತಿ ಒದಗಿಸುತ್ತವೆ ಎಂದು ನಾಸಾದ ಉಪ ನಿರ್ವಾಹಕ ದಾವಾ ನ್ಯೂಮಾನ್ ಹೇಳಿದ್ದಾರೆ.
Comments are closed.