ಅಂತರಾಷ್ಟ್ರೀಯ

ಅಫ್ಘನ್​ಭದ್ರತಾ ಪಡೆಯಿಂದ ಒಂದೇ ದಿನ 46 ಉಗ್ರರ ಹತ್ಯೆ

Pinterest LinkedIn Tumblr

afaಕಾಬೂಲ್: ಅಫ್ಘಾನಿಸ್ತಾನ ಭದ್ರತಾ ಪಡೆ ವಿವಿಧ ಕಡೆ ಒಂದೇ ದಿನ ನಡೆಸಿದ ಕಾರ್ಯಾಚರಣೆ ಮತ್ತು ವೈಮಾನಿಕ ದಾಳಿಯಲ್ಲಿ ಒಟ್ಟು 46 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅಫ್ಘನ್ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.

ಹತ್ಯೆಯಾದ ಉಗ್ರರಲ್ಲಿ ಒರ್ವ ಹಕ್ಕಾನಿ ಜಾಲದ ಖಲೀಲ್ ಮತ್ತು 13 ಮಂದಿ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರರು ಎಂದು ಗುರುತಿಸಲಾಗಿದೆ.

ಜಂಟಿ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹಲವಾರು ಸ್ಪೋಟಕಗಳು ಹಾಗೂ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಒಟ್ಟು 11 ಯೋಧರು ಹತರಾಗಿಯೂ ಮೂಲಗಳು ತಿಳಿಸಿವೆ.

Comments are closed.