ಅಂತರಾಷ್ಟ್ರೀಯ

ರಜಾದಿನ ಸೆಕ್ಸ್‌ ಬೆಸ್ಟ್‌ ಎಂಬ ನಿರೀಕ್ಷೆ:ಬಹುತೇಕರಿಗೆ ದ್ರಾಕ್ಷಿಹುಳಿ!

Pinterest LinkedIn Tumblr

smartಸೆಕ್ಸ್‌ ಬಗ್ಗೆ ಏನೆಲ್ಲ ಕಲ್ಪನೆಯಲ್ಲಿ ತೇಲಾಡುವವರಿದ್ದಾರೆ. ರಜಾದಿನ ಮಜಾಮಾಡಬೇಕೆನ್ನುವವರಿಗೂ ಕೊರತೆಯೇನಿಲ್ಲ. ಇದಕ್ಕಾಗಿ ಭರ್ಜರಿ ಟೂರುಗೀರು ಹೊಡೆವವರೂ ಇದ್ದಾರೆ. ಆದರೆ ಮಿಲನ ಮಹೋತ್ಸವಕ್ಕಾಗಿ ಇಷ್ಟೆಲ್ಲ ಕಷ್ಟ ಪಟ್ಟವರಲ್ಲಿ ಹೆಚ್ಚಿನವರಿಗೆ ದ್ರಾಕ್ಷಿಹುಳಿಯ ಅನುಭವವೇ ಹೆಚ್ಚು ಅಂತ ಸಮೀಕ್ಷೆಯೊಂದು ಹೇಳಿದೆ. ಸಮೀಕ್ಷೆ ಪ್ರಕಾರ ರಜೆದಿನಗಳಂದು ಸೆಕ್ಸ್‌ ಬೆಸ್ಟ್‌ ಅನ್ನುವ ಭಾವನೆ ಇಟ್ಟುಕೊಂಡವರು ಶೇ.52ರಷ್ಟು ಮಂದಿ ಇದ್ದಾರೆ.ಇದೇ ವೇಳೆ ಛೇ ಎಲ್ಲಾ ಹಾಳಾಯ್ತು ಅಂತ ಬೇಸರ ಪಟ್ಟುಕೊಂಡವರ ಸಂಖ್ಯೆಯೂ ಶೇ.60ರಷ್ಟು ಇದೆಯಂತೆ!

ಡ್ಯುರೆಕ್ಸ್‌ ಕಾಂಡೋಂ ಕಂಪನಿ ಲಂಡನ್‌ನಲ್ಲಿ ಈ ಸಮೀಕ್ಷೆ ನಡೆಸಿದೆ. ಇದಕ್ಕಾಗಿ 2 ಸಾವಿರ ಮಂದಿ ಜೋಡಿಗಳನ್ನೂ ಸಂದರ್ಶಿಸಿದೆ. ಅಚ್ಚರಿ ಎಂದರೆ ಸಮೀಕ್ಷೆ ವೇಳೆ ರಜಾದಿನ ಸೆಕ್ಸ್‌ ಹಾಳಾಗಲು ಕಾರಣ ಫೋನ್‌ ಮತ್ತು ಟ್ಯಾಬ್‌ ಎಂದು ಹಲವರು ದೂರಿದ್ದಾರೆ. ಶೇ.40 ರಷ್ಟು ಮಂದಿ ಫೋನ್‌ ಬೆಡ್‌ನ‌ಲ್ಲಿದ್ದರಿಂದ ಸೆಕ್ಸ್‌ ಚೆನ್ನಾಗಿ ಆಗಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೇ ಶೇ.72ರಷ್ಟು ಮಂದಿ ಸೆಕ್ಸ್‌ ಮಧ್ಯೆ ಫೋನ್‌ ಕೂಡ ಬಳಸೋದುಂಟು ಅಂತ ಹೇಳಿದ್ದಾರೆ. ಮತ್ತೆ ಕೆಲವರು, ನಮ್ಮ ಮಧ್ಯೆ ಸಂಬಂಧ ಅಷ್ಟು ಚೆನ್ನಾಗಿಲ್ಲದಿರುವುದು ಕಾರಣ ಎಂದೂ ಹೇಳಿದ್ದಾರೆ.

ಬಹುತೇಕ ಏಕಾಂತ ಮಧ್ಯೆ ಗ್ಯಾಡೆjಟ್‌ ಇತ್ಯಾದಿ ಬಳಸೋದ್ರಿಂದಲೇ ಎಲ್ಲ ಎಡವಟ್ಟುಗಳಾಗಿವೆ ಎಂಬ ತೀರ್ಮಾನಕ್ಕೆ ಸಮೀಕ್ಷೆ ಬಂದಿದೆ.

ಫ‌ಲಿತಗಳು…
ರಜಾ ದಿನ ಸೆಕ್ಸ್‌ ಎಂದು ಕಾದುಕುಳಿತವರಿಗೆಬೇಜಾರೋ ಬೇಜಾರು!

ಶೇ.72ರಷ್ಟು ಮಂದಿ ಸೆಕ್ಸ್‌ವೇಳೆ ಫೋನ್‌ ಕೂಡಬಳಸ್ತಾರೆ!

ಶೇ.40ರಷ್ಟು ಮಂದಿಯ ಪ್ರಕಾರ ರಜಾದಿನ ಸೆಕ್ಸ್‌ ಹಾಳಾಗಲು ಫೋನ್‌, ಟ್ಯಾಬ್‌ ಕಾರಣ!

ಸಂಬಂಧ ಚೆನ್ನಾಗಿಲ್ಲದೇ ಇರೋದ್ರಿಂದ ಸೆಕ್ಸ್‌ಮಜಾ ಅನುಭವಿಸಲು ಸಮಸ್ಯೆ!
-ಉದಯವಾಣಿ

Comments are closed.