ಅಂತರಾಷ್ಟ್ರೀಯ

ಇಫ್ತಾರ್ ಮುನ್ನ ತಿಂಡಿ ಮಾರಿದ್ದಕ್ಕೆ ಪಾಕ್‍ನಲ್ಲಿ ಹಿಂದೂ ವೃದ್ಧನ ಮೇಲೆ ಹಲ್ಲೆ

Pinterest LinkedIn Tumblr

hindu_pakಕರಾಚಿ (ಪಿಟಿಐ): ಇಫ್ತಾರ್ ಮುನ್ನ ತಿಂಡಿ ಮಾರಾಟ ಮತ್ತು ಸೇವನೆ ಮಾಡಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನದಲ್ಲಿ 80ರ ವಯಸ್ಸಿನ ವೃದ್ಧರೊಬ್ಬರಿಗೆ ಪೊಲೀಸ್ ಹಿಗ್ಗಾಮುಗ್ಗ ಥಳಿಸಿರುವ ಘಟನೆ ವರದಿಯಾಗಿದೆ.

ದಕ್ಷಿಣ ಸಿಂಧ್ ಪ್ರದೇಶದಲ್ ಘೋಟ್ಕಿ ಜಿಲ್ಲೆಯಲ್ಲಿರುವ ಹಯಾತ್ ಪಿಟಾಫಿ ಎಂಬ ಕುಗ್ರಾಮದಲ್ಲಿ ಈ ಘಟನೆ ನಡೆದಿದೆ.

ಇಫ್ತಾರ್ ಮುನ್ನ ತಿಂಡಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಗೋಕುಲ್ ದಾಸ್ ಎಂಬ ವೃದ್ಧರೊಬ್ಬರಿಗೆ ಅಲಿ ಹುಸೇನ್ ಎಂಬ ಪೊಲೀಸ್ ಥಳಿಸಿದ್ದಾರೆ.

ಅದೇ ವೇಳೆ ದಾಸ್ ಅವರು ಇಫ್ತಾರ್ ಮುನ್ನ ಬಾಳೆಹಣ್ಣು ತಿನ್ನುವುದನ್ನು ನಾನು ನೋಡಿದ್ದೇನೆ ಎಂದು ಹುಸೇನ್ ಆರೋಪಿಸಿದ್ದಾರೆ,
ಪೊಲೀಸ್‍ನಿಂದ ತೀವ್ರ ಹಲ್ಲೆಗೊಳಗಾಗಿರುವ ದಾಸ್ ಅವರ ಚಿತ್ರವೀಗ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ದಾಸ್ ಅವರಿಗೆ ನ್ಯಾಯ ಒದಗಿಸಲು ಆನ್‍ಲೈನ್ ಅಭಿಯಾನ ಆರಂಭವಾಗಿದೆ.

ದಾಸ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.

Comments are closed.