ಅಂತರಾಷ್ಟ್ರೀಯ

ಅಮೆರಿಕದ ನೈಟ್ ಕ್ಲಬ್ ಮೇಲೆ ಗುಂಡಿನ ದಾಳಿ; ಸಾವಿಗೀಡಾದವರ ಸಂಖ್ಯೆ 50ಕ್ಕೇರಿಕೆ; ಶೂಟರ್ ಹತ್ಯೆ

Pinterest LinkedIn Tumblr

Orlando

ಒರ್ಲಾಂಡೋ: ಅಮೆರಿಕ ನೈಟ್ ಕ್ಲಬ್ ನಲ್ಲಿ ವ್ಯಕ್ತಿಯೊಬ್ಬ ಸಿಕ್ಕಾಪಟ್ಟೆ ನಡೆಸಿದ ಗುಂಡಿನ ದಾಳಿಗೆ ಸಾವಿಗೀಡಾದವರ ಸಂಖ್ಯೆ ಇದೀಗ 50ಕ್ಕೇರಿದೆ. ಇನ್ನು ಸುಮಾರು 53 ಮಂದಿ ಗಾಯಗೊಂಡಿದ್ದಾರೆ ಎಂದು ಒರ್ಲಾಂಡೋ ಮೇಯರ್ ತಿಳಿಸಿದ್ದಾರೆ. ಹತ್ಯೆ ಮಾಡಿದವನನ್ನು ಪೊಲೀಸರು ಗುಂಡಿಕ್ಕಿ ಸಾಯಿಸಿದ್ದಾರೆ.

ಅಮೆರಿಕದ ಫ್ಲೋರಿಡಾ ರಾಜ್ಯದ ಓರ್ಲಾಂಡೋ ನಗರದಲ್ಲಿರುವ ಪಲ್ಸ್ ನೈಟ್’ಕ್ಲಬ್ ನಲ್ಲಿ ಅಲ್ಲಿನ ಕಾಲಮಾನ ಬೆಳಗ್ಗೆ 2 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಗುಂಡಿನ ದಾಳಿಯಲ್ಲಿ 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದಾಳಿ ನಡೆಸಿದ 22 ವರ್ಷದ ವ್ಯಕ್ತಿಯನ್ನು ಪೊಲೀಸರು ಹತ್ಯೆಗೈಯಲು ಯಶಸ್ವಿಯಾಗಿದ್ದಾರೆನ್ನಲಾಗಿದೆ.

ಓರ್ಲಾಂಡೋದಲ್ಲಿರುವ ಈ ನೈಟ್’ಕ್ಲಬ್ ಸಲಿಂಗಿಗಳ ಅಡ್ಡೆಯಾಗಿತ್ತೆನ್ನಲಾಗಿದೆ. ಆದರೆ, ಇಂದು ಶೂಟೌಟ್ ಯಾಕೆ ನಡೆಯಿತು ಎಂಬ ಮಾಹಿತಿ ಲಭ್ಯವಾಗಿಲ್ಲ. ಗುಂಡಿನ ದಾಳಿ ನಡೆಸಿದ ವ್ಯಕ್ತಿಯ ಮಾಹಿತಿಯೂ ಸದ್ಯಕ್ಕೆ ಲಭ್ಯವಾಗಿಲ್ಲ.

ಪ್ರತ್ಯಕ್ಷದರ್ಶಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ದಾಳಿಕೋರನ ತನ್ನ ಬಳಿಯಿದ್ದ ಆಟೋಮ್ಯಾಟಿಕ್ ಗನ್ ನಿಂದ ಜನರನ್ನು ಸಾಯಿಸಿದ್ದಾನೆ ಎನ್ನಲಾಗಿದೆ.
ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕ್ಲಬ್’ಗೆ ಬಂದ ದುಷ್ಕರ್ಮಿ ಮನಸಿಗೆ ಬಂದಂತೆ ಗುಂಡಿನ ದಾಳಿಗೈದಿದ್ದಾನೆ. ಬಳಿಕ ಹಲವಾರು ಜನರನ್ನು ಒತ್ತೆಯಾಗಿರಿಸಿಕೊಂಡಿರುತ್ತಾನೆ. ಆನಂತರ ಬೆಳಗ್ಗೆ 5ಗಂಟೆ ಸುಮಾರಿಗೆ ಪೊಲೀಸ್ ತಂಡ ಆಗಮಿಸಿ ದುಷ್ಕರ್ಮಿಯನ್ನು ಹತ್ಯೆಗೈದಿದೆ.

Comments are closed.