ಅಂತರಾಷ್ಟ್ರೀಯ

ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಸಹಾಯ ಮಾಡುವಂತೆ ಮೋದಿಗೆ ಮೊರೆ

Pinterest LinkedIn Tumblr

narendra_modiಢಾಕಾ (ಪಿಟಿಐ): ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ಆಕ್ರಮಣ ನಡೆಯುತ್ತಿದ್ದು, ತಮ್ಮ ರಕ್ಷಣೆಗೆ ಸಹಾಯ ಮಾಡುವಂತೆ ಅಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಮೂಲಭೂತವಾದಿಗಳು ಮತ್ತು ಜಮಾತ್ ಸಂಘಟನೆಗಳು ಬಾಂಗ್ಲಾದೇಶದಿಂದ ಹಿಂದೂಗಳನ್ನು ನಿರ್ನಾಮ ಮಾಡಲು ಯತ್ನಿಸುತ್ತಿದ್ದಾರೆ.

ಭಾರತದಲ್ಲಿ ಬಹುಸಂಖ್ಯಾತರು ಹಿಂದೂಗಳೇ ಆಗಿರುವ ಕಾರಣ ಭಾರತ ತಮಗೆ ಸಹಾಯ ಮಾಡುತ್ತದೆ ಎಂಬ ನಿರೀಕ್ಷೆಯಿದೆ. ನಾವು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಹೆಚ್ಚಿನ ಭರವಸೆಯನ್ನಿರಿಸಿದ್ದೇವೆ. ಇಲ್ಲಿ ಹಿಂದೂಗಳು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಮೋದಿಯವರು ಬಾಂಗ್ಲಾ ಸರಕಾರದ ಗಮನಕ್ಕೆ ತಂದು ನಮಗೆ ರಕ್ಷಣೆ ಮತ್ತು ಸುರಕ್ಷೆಯನ್ನು ಕಲ್ಪಿಸುವಂತೆ ಮಾಡಬೇಕೆಂದು ನಾವು ಬಯಸುತ್ತಿದ್ದೇವೆ ಎಂದು ಬಾಂಗ್ಲಾದೇಶದ ಹಿಂದೂ ಬೌದ್ಧ ಕ್ರೈಸ್ತ ಐಕ್ಯತಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಣಾ ದಾಸ್ ಗುಪ್ತಾ ಹೇಳಿದ್ದಾರೆ.

Comments are closed.