ರಾಷ್ಟ್ರೀಯ

ರೆಸ್ಟೋರೆಂಟ್‍ನಲ್ಲಿ ಬೀದಿ ಮಕ್ಕಳಿಗೆ ಪ್ರವೇಶ ನಿಷೇಧ; ತನಿಖೆಗೆ ಆದೇಶ

Pinterest LinkedIn Tumblr

street_childrenನವದೆಹಲಿ (ಪಿಟಿಐ): ದೆಹಲಿಯ ಕನೌಟ್‍ನಲ್ಲಿರುವ ಪ್ರತಿಷ್ಠಿತ ರೆಸ್ಟೋರೆಂಟ್‍ವೊಂದರಲ್ಲಿ ಬೀದಿ ಮಕ್ಕಳಿಗೆ ಪ್ರವೇಶ ನಿರಾಕರಿಸಿರುವ ಪ್ರಕರಣದ ಬಗ್ಗೆ ತನಿಖೆ ನಡೆಸಲು ದೆಹಲಿ ಸರಕಾರ ಆದೇಶ ನೀಡಿದೆ.

ಲೇಖಕಿಯೊಬ್ಬರೊಂದಿಗೆ ಬೀದಿ ಮಕ್ಕಳು ರೆಸ್ಟೋರೆಂಟ್‍ಗೆ ಬಂದಾಗ ಅಲ್ಲಿ ಮಕ್ಕಳಿಗೆ ಪ್ರವೇಶ ನಿಷೇಧಿಸಲಾಗಿದೆ. ಈ ಪ್ರಕರಣದ ಬಗ್ಗೆ ಮಾತನಾಡಿದ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು, ಇದು ಕಲೋನಿಯಲ್ ವ್ಯವಸ್ಥೆಯ ಮನಸ್ಥಿತಿಯನ್ನು ತೋರಿಸುತ್ತದೆ. ಇದನ್ನು ಕ್ಷಮಿಸಲಾಗುವುದಿಲ್ಲ. ಒಂದು ವೇಳೆ ಈ ಆರೋಪ ನಿಜವಾಗಿದ್ದರೆ, ರೆಸ್ಟೋರೆಂಟ್‍ನ ಪರವಾನಗಿಯನ್ನೇ ರದ್ದು ಮಾಡಲಾಗುವುದು ಎಂದಿದ್ದಾರೆ.

ಪ್ರಸ್ತುತ ಪ್ರಕರಣದ ಬಗ್ಗೆ ತನಿಖೆ ನಡೆಸಿ 24 ಗಂಟೆಯೊಳಗೆ ವರದಿ ಸಲ್ಲಿಸಬೇಕೆಂದು ನಾವು ಆದೇಶಿಸಿರುವುದಾಗಿ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ಸೋನಾಲಿ ಶೆಟ್ಟಿ ಎಂಬ ಲೇಖಕಿ ಶನಿವಾರ ತನ್ನ ಪತಿಯ ಹುಟ್ಟುಹಬ್ಬ ಆಚರಣೆಯ ಸಲುವಾಗಿ ಬೀದಿ ಮಕ್ಕಳನ್ನು ರೆಸ್ಟೋರೆಂಟ್‍ಗೆ ಕರೆದುಕೊಂಡು ಹೋಗಿದ್ದರು. ಆ ವೇಳೆ ಬೀದಿ ಮಕ್ಕಳಿಗೆ ಆಹಾರ ನೀಡಲು ರೆಸ್ಟೋರೆಂಟ್‍ನವರು ನಿರಾಕರಿಸಿದ್ದಾರೆ.

Comments are closed.