ವಿಶ್ವಸಂಸ್ಥೆ, ಫೆ.6- ಜಗತ್ತಿನಾದ್ಯಂತ 34ಭಯೋತ್ಪಾದಕ ಸಂಘಟನೆಗಳು, ಇಸ್ಲಾಮಿಕ್ ಸ್ಟೇಟ್ (ಐಎಸ್)ಗೆ ತಮ್ಮ ಬೆಂಬಲ ಮತ್ತು ನಿಷ್ಠೆ ಘೋಷಿಸಿದ್ದು, ಅದು ಇನ್ನೂ ಹೆಚ್ಚುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಬಾನ್-ಕಿ-ಮೂನ್ ಹೇಳಿದ್ದಾರೆ.
ಫಿಲಿಪ್ಪೈನ್ಸ್, ಉಜ್ಜೆಕಿಸ್ಥಾನ್, ಪಾಕಿಸ್ಥಾನ, ಲಿಬಿಯ ಮತ್ತು ನೈಜೀರಿಯಾಗಳಂತಹ ರಾಷ್ಟ್ರಗಳಿಂದ ಈ ಸಂಘಟನೆಗಳು ದಾಳಿಗಳನ್ನು ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಈ ಬಗ್ಗೆ ವಿಶ್ವಸಂಸ್ಥೆಯ ಸದಸ್ಯರಾಷ್ಟ್ರಗಳೆಲ್ಲ ದಾಳಿ ವಿರುದ್ಧ ಎಚ್ಚರ ವಹಿಸಿ ರಕ್ಷಣೆಯನ್ನು ಬಲಪಡಿಸಿಕೊಳ್ಳಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಐಎಸ್‌ಐಎಸ್(ಐಎಸ್‌ಐಎಲ್) ಸಂಘಟನೆ ಕಳೆದ 18ತಿಂಗಳ ಅವಧಿಯಲ್ಲಿ ತನ್ನ ಬಲವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದು,
ಪಶ್ಚಿಮ ಮತ್ತು ಉತ್ತರ ಆಫ್ರಿಕ ಮದ್ಯ ಪ್ರಾಚ್ಯ ಹಾಗೂ ಆಗ್ನೇಯ ಏಶಿಯಾಗಳ ಮೇಲೆ ಅದು ಅಧಿಕ ಪ್ರಭಾವ ಬೀರಲಿದೆ ಮತ್ತು ಅಷ್ಟೇ ವೇಗವಾಗಿ ಬೇಳೆಯುತ್ತಿದೆ ಎಂದು ಬೌನ್ ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಇಸ್ಲಾಮಿಕ್ ಸಮಘಟನೆ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಉಗ್ರ ಸಂಘಟನೆಯಾಗಿದ್ದು, 2015ರಲ್ಲಿ ತೈಲ ಮತ್ತು ತೈಲೋತ್ಪನ್ನಗಳ ಮೂಲದಿಂದ 400-500 ಮಿಲಿಯನ್(ದಶಲಕ್ಷ) ಡಾಲರ್‌ಗಳ ಮೊತ್ತ ಸಂಗ್ರಹಿಸಿದೆ.
ಇರಾಕಿನ ತನ್ನ ಹಿಡಿತದಲ್ಲಿರುವ ಪ್ರದೇಶಗಳಲ್ಲಿನ ವಿವಿಧ ಬ್ಯಾಂಕ್ ಶಾಖೆಗಳಿಂದ ಐಎಸ್ ಅಪಹರಿಸಿರು ಮೊತ್ತ ಒಂದು ಶತಕೋಟಿ ಡಾಲರ್‌ಗೂ ಹೆಚ್ಚು. ಇನ್ನೂ ಕೂಡ ಸಿರಿಯಾ ಮತ್ತು ಇರಾಕ್‌ಗಳಲ್ಲಿ ಐಎಸ್ ದೋಚುತ್ತಲೇ ಇದೆ ಎಂದು ಬಾನ್ ಹೇಳಿದ್ದಾರೆ.