ಕರ್ನಾಟಕ

ಯುವಕನಿಂದ ಸಚಿವ ಆಂಜನೇಯಗೆ ಅಸಭ್ಯ ಶಬ್ದಗಳಿಂದ ನಿಂದನೆ!

Pinterest LinkedIn Tumblr

anjaಬೆಂಗಳೂರು: ಉಪಚುನಾವಣೆ ಪ್ರಚಾರಕ್ಕೆ ತೆರಳಿದ್ದ ಅಭ್ಯರ್ಥಿ ಹಾಗು ಭಾವಿ ಜನಪ್ರತಿನಿಧಿಗಳಿಗೆ ಜನರೇ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ರಾಯಚೂರಿನ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ರಾಜಶೇಖರ ನಾಯಕ್ ಪರ ಪ್ರಚಾರಕ್ಕೆ ತೆರಳಿದ್ದ ಸಮಾಜಕಲ್ಯಾಣ ಇಲಾಖೆ ಸಚಿವ ಆಂಜನೇಯಗೆ ಯುವಕನೊಬ್ಬ ರಾಯಚೂರಿಗೆ ಐಐಟಿ ಕೈತಪ್ಪಿದ್ದಕ್ಕೆ ಸಚಿವರ ಎದುರೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡಿದ್ದ ಘಟನೆ ನಡೆದಿದೆ.

ಘಟನೆಯ ನಂತರ ಯುವಕನನ್ನು ಸಾರ್ವಜನಿಕರೇ ಆಚೆಗೆ ಕರೆದುಕೊಂಡು ಹೋದರಾದರೂ ಯುವಕನ ಪ್ರಶ್ನೆಗೆ ಸಚಿವ ಆಂಜನೇಯ ನಿಂತಲ್ಲೇ ಬೆವತು ಹೋಗಿದ್ದಾರೆ.

ಇನ್ನು ಬೆಂಗಳೂರಿನ ಹೆಬ್ಬಾಳ ಕ್ಷೇತ್ರದಲ್ಲಿ ಮನೆ, ಮನೆ ಪ್ರಚಾರಕ್ಕೆ ತೆರಳಿದ್ದ ಕಾಂಗ್ರೆಸ್ ಅಭ್ಯರ್ಥಿ ರೆಹಮಾನ್ ಷರೀಫ್ ಗೆ ಕ್ಷೇತ್ರದಲ್ಲಿನ ಮಹಿಳೆಯರೇ ಕ್ಲಾಸ್ ತೆಗೆದು ಕೊಂಡಿದ್ದಾರೆ, ಹೆಬ್ಬಾಳದ ವಿವಿಧ ಪ್ರದೇಶದಲ್ಲಿ ರಸ್ತೆ ಸಮಸ್ಯೆಗಳಿವೆ, ಬರೀ ಓಟ್ ಕೇಳಲು ಬರುತ್ತೀರ ನಂತರ ಈ ಕಡೆ ಕಾಲೇ ಇಡುವುದಿಲ್ಲ ಎಂದು ಆರೋಪಿಸಿದ್ದಾರೆ.

Write A Comment