ರಾಯಚೂರು, ಫೆ.6-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನ್ನಡಕ, ವಾಚ್ ಖರೀದಿಸಲು ತಾವು ಸೆಕೆಂಡ್ ಹ್ಯಾಂಡ್ ಗಿರಾಕಿ ಅಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಯಾರಾದರೂ ಸೆಕೆಂಡ್ ಗಿರಾಕಿಗಳಿದ್ದರೆ ಮಾರಾಟ ಮಾಡಲಿ ಎಂದು Zq ಸುದ್ದಿಗಾರರಿಗೆ ತಿಳಿಸಿದರು. ಮುಖ್ಯಮಂತ್ರಿ ಬಳಿ ದುಬಾರಿ ವಾಚ್, ಕನ್ನಡಕ ಇರುವುದು ಸತ್ಯ. ನಿನ್ನೆ ಅವರು ಮೈಸೂರಿನಲ್ಲಿ ತೋರಿಸಿದ ವಾಚ್, ಕನ್ನಡಕ ಕಡಿಮೆ ಬೆಲೆ ಇರಬಹುದು. ಕಳೆದ 15 ದಿನಗಳ ಹಿಂದೆ ಮೈಸೂರಿನಲ್ಲಿ ದುಬಾರಿ ವಾಚ್ ಮತ್ತು ಕನ್ನಡಕದ ಬಗ್ಗೆ ಹೇಳಿಕೆ ನೀಡಿದ್ದೆ.
ತಮ್ಮ ಹೇಳಿಕೆಗೆ ನಿನ್ನೆ ಏಕೆ ಪ್ರತಿಕ್ರಿಯೆ ನೀಡಿದರು ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗೆ ಹೊಸ ಕನ್ನಡಕ ಮತ್ತು ವಾಚ್ ಖರೀದಿಸುವ ಬಯಕೆಯಾಗಿರಬೇಕು. ಪದೇ ಪದೇ ಈ ವಿಚಾರ ಕೆದಕುವುದು ಬೇಡ ಎಂದು ಹೇಳಿದರು.