ಕಾಬುಲ್ : ಆಫ್ಘಾನಿಸ್ತಾನದ ರಾಜಧಾನಿ ಕಾಬುಲ್ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 10 ಜನ ಮೃತಪಟ್ಟು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸೋಮವಾರ ನಗರದ ಪಶ್ಚಿಮ ಭಾಗದ ಪೊಲೀಸ್ ಠಾಣೆ ಹೊರಭಾಗದಲ್ಲಿ ಫ್ರೆಂಚ್ ರೆಸ್ಟೋರೆಂಟ್ ಬಳಿ ಆತ್ಮಾಹುತಿ ಬಾಂಬರ್ ಸ್ಫೋಟ ಸಂಭವಿಸಿದೆ.
ಆಘ್ಘಾನ್ನ ಗೃಹ ಸಚಿವಾಲಯದ ವಕ್ತಾರ ಅಯೂಬ್ ಸಲಂಗಿ ದಾಳಿಯ ಕುರಿತು ಟ್ವೀಟರ್ನಲ್ಲಿ ದೃಢಪಡಿಸಿದ್ದಾರೆ. ಕಾಬುಲ್ನ ನಡೆದ ಸ್ಪೋಟದಲ್ಲಿ 10 ನಾಗರಿಕರು ಹತರಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಪೊಲೀಸ್ ಕೇಂದ್ರ ಕಚೇರಿ, ಮಿಲಿಟರಿ ಪಡೆ ತುಕಡಿಗಳ ಕೇಂದ್ರ ಸ್ಥಾನವಿರುವ ಕಾಬುಲ್ನ ಸಂಸತ್ತಿನ ಸಂಕೀರ್ಣವೊಂದನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.