ನವದೆಹಲಿ: ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣದ ವೇಳೆಯಲ್ಲಿ ಒದಗಿಸುವ ಉಪಹಾರಕ್ಕೆ ಕನ್ನ ಹಾಕುತ್ತಿದ್ದ ಏರ್ ಇಂಡಿಯಾದ ಸಿಬ್ಬಂದಿಯನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ವಿಮಾನದ ಕ್ಯಾಬಿನ್ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯಿಂದ ಹಾಲಿನ ಪೆಟ್ಟಿಗೆಗಳು, ವಿಮಾನದಲ್ಲಿ ಒದಗಿಸುವ ಊಟ, ಹಣ್ಣಿನ ರಸದ ಪ್ಯಾಕೆಟ್ಗಳು, ಗೋಡಂಬಿ ಸೇರಿದಂತೆ ದುಬಾರಿ ಮದ್ಯದ ಬಾಟಲಿಗಳನ್ನು ತಮ್ಮ ಬ್ಯಾಗ್ನಲ್ಲಿರಿಸಿಕೊಂಡು ಕದ್ದೊಯ್ಯುತ್ತಿದ್ದ ಸಿಬ್ಬಂದಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಕೊಲಂಬೊದಿಂದ ಚೆನ್ನೈ ಮಾರ್ಗವಾಗಿ ನವದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಅಕ್ರಮ ಪತ್ತೆಯಾಗಿದೆ. ಏರ್ ಇಂಡಿಯಾದ ನೂತನ ವ್ಯವಸ್ಥಾಪಕರಾದ ಅಶ್ವನಿ ಲೊಹಾನಿ ಘಟನೆ ಬಗ್ಗೆ ಪ್ರತಿಕ್ರಿಯಿಸಿ ಈ ರೀತಿಯ ಅಕ್ರಮ ಎಸಗಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.