ಕೊಚ್ಚಿ: ಸೋಲಾರ್ ಹಗರಣದ ಎರಡನೇ ಪ್ರಮುಖ ಆರೋಪಿ ಸರಿತ ಎಸ್ ನಾಯರ್ ಅವರು ಹಗರಣಕ್ಕೆ ಸಂಬಂಧಪಟ್ಟ ಸಿಡಿ ಮತ್ತು ಅಗತ್ಯ ದಾಖಲೆಗಳನ್ನು ಆಯೋಗಕ್ಕೆ ನೀಡಿದ್ದಾರೆ.
ಕೇರಳ ಮುಖ್ಯಮಂತ್ರಿ ಒಮನ್ ಚಾಂಡಿ, ಮಾಜಿ ಗನ್ ಮ್ಯಾನ್ ಸಲೀಂ ರಾಜ್, ಶಾಸಕ ಬೆನ್ನಿ ಬೆಹನಾನ್ ಮತ್ತು ಕಾಂಗ್ರೆಸ್ ಮುಖಂಡ ತಂಪನೂರ್ ರವಿ ಅವರೊಂದಿಗೆ ನಡೆಸಿದ ಸಂಭಾಷಣೆ ಕುರಿತಾದ ದಾಖಲೆಗಳನ್ನು ಸೋಲಾರ್ ಹಗರಣದ ತನಿಖಾ ಸಮಿತಿಯ ನ್ಯಾಯಮೂರ್ತಿ ಜಿ ಶಿವರಾಜನ್ ಅವರಿಗೆ ನೀಡಿದ್ದಾರೆ.
ಸಲೀಂ ರಾಜ್ ನೊಂದಿಗಿನ ಮೊಬೈಲ್ ಸಂಭಾಷಣೆಯ ಒಂದು ಸಿಡಿ. ಬೆನ್ನಿ ಬೆಹನಾನ್ ಮತ್ತು ತಂಪನೂರ್ ರವಿ ಜತೆಗಿನ ಸಂಭಾಷಣೆಯ ದಾಖಲೆ ಹಾಗೂ ಮೊಬೈಲ್ ನಲ್ಲಿ ಉದ್ಯಮಿಯೊಂದಿಗೆ ಚಾಟ್ ಮಾಡಿದ ದಾಖಲೆಗಳ ಮೂರು ಸಿಡಿಗಳು ಆಯೋಗಕ್ಕೆ ಸಲ್ಲಿಸಿದ್ದು. ಇವುಗಳನ್ನು ಸಾಕ್ಷ್ಯಾಧಾರಗಳಾಗಿ ಆಯೋಗ ಸ್ವೀಕರಿಸಿದೆ.