ಪರ್ತ್, ಫೆ.1-ವಿಶ್ವದೆಲ್ಲೆಡೆ ಒಂದೇ ಮಗು ಸಾಕು ಎಂಬ ಘೋಷಣೆ ಮೊಳಗುತ್ತಿರುವಾಗಲೇ ಆಸ್ಟ್ರೇಲಿಯದ ವಾರ್ನ್ಬ್ರೊ ನಿವಾಸಿ ಕಿಮ್ಟುಸಿ ಎಂಬ ಮಹಾತಾಯಿ ಒಂದೇ ಬಾರಿಗೆ ಕೇವಲ 2 ನಿಮಿಷಗಳ ಅಂತರದಲ್ಲಿ 5 ಮಕ್ಕಳನ್ನು ಹೆತ್ತಿದ್ದಾಳೆ. ಈಗಾಗಲೇ ಒಂದು ಗಂಡು, ಎರಡು ಹೆಣ್ಣು ಮಕ್ಕಳನ್ನು ಹೊಂದಿರುವ ಟುಸಿ ತನ್ನ ಪತಿ ವೌಘನ್ನನ್ನು ಒಪ್ಪಿಸಿ ಇನ್ನೊಂದು ಗಂಡು ಮಗು ಹೆರಲು ನಿರ್ಧರಿಸಿದ್ದಳು.
ಆದರೆ, ಆಗಿದ್ದು, 5 ಮಕ್ಕಳು, ಒಂದು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳು, ಯಾವುದೇ ಡ್ರಗ್ಸ್ ಆಗಲಿ, ಸಂತಾನೋತ್ಪತ್ತಿ ಔಷಧಗಳನ್ನಾಗಲಿ ಸೇವಿಸದೆ ಸಹಜವಾಗಿಯೇ ಟುಸಿ 5 ಮಕ್ಕಳನ್ನು ಹೆತ್ತಿದ್ದು, ಕೇವಲ 55 ಮಿಲಿಯನ್ನಲ್ಲಿ ಒಬ್ಬರಲ್ಲಿ ಇಂಥ ಸಾಧ್ಯತೆಗಳಿರುತ್ತವೆ ಎನ್ನುತ್ತಾರೆ ವೈದ್ಯರು.
ಈಗ ಟುಸಿ ದಂಪತಿಗೆ ಒಟ್ಟು ಎಂಟು ಮಕ್ಕಳು. ಎರಡು, ಗಂಡು ಮತ್ತು 6 ಹೆಣ್ಣು ಹೊಸದಾಗಿ ಹುಟ್ಟಿದ ಮಕ್ಕಳಿಗೆ ಅಲಿ, ಪೆನೆಲೋಪ್, ಟಿಫ್ಫಾನಿ, ಬೀಟ್ರಿಕ್ಸ್(ಹೆಣ್ಣುಮಕ್ಕಳು) ಗಂಡು ಮಗುವಿಗೆ ಕೀತ್ ಎಂದು ಹೆಸರಿಡಲಾಗಿದೆ.
ಟುಸಿಯ ಗೆಳತಿ ಅವಳನ್ನು ಸಮುದ್ರ ದಂಡೆಯಲ್ಲಿ ಮರಳಿನ ಮೇಲೆ ನಿಲ್ಲಿಸಿ ಫೋಟೋ ತೆಗೆದಿದ್ದಾಳೆ.