ಅಂತರಾಷ್ಟ್ರೀಯ

ತಾನು ಸಂಪಾದಿಸದ ಹಣವೆನ್ನೆಲ್ಲಾ ಹರಿದು ಹಾಸಿಗೆ ಮಾಡಿಕೊಂಡಿದ್ದ ಅಜ್ಜಿ!

Pinterest LinkedIn Tumblr

yy

ವಿಯೆನ್ನಾ: ತಾವು ಬೆವರು ಸುರಿಸಿ ಕೂಡಿಟ್ಟ ಹಣ, ಆಸ್ತಿಯನ್ನು ಮಕ್ಕಳು, ಮೊಮ್ಮಕ್ಕಳು ಅನುಭವಿಸಲಿ ಎಂದು ಎಷ್ಟೋ ಜನ ವೃದ್ಧರು ವಿಲ್ ಬರೆಯುತ್ತಾರೆ. ಆದರೆ ಇಲ್ಲೊಬ್ಬ ಅಜ್ಜಿಗೆ ಮಾತ್ರ ಮಕ್ಕಳು, ಮೊಮ್ಮಕ್ಕಳ ಮೇಲೆ ಅದೇನೂ ಮುನಿಸಿತ್ತೋ ಗೊತ್ತಿಲ್ಲ. ತಾನು ಸಂಪಾದಿಸದ ಹಣವೆನ್ನೆಲ್ಲಾ ಹರಿದು ಹಾಸಿಗೆ ಮಾಡಿಕೊಂಡಿದ್ದರು.

ಹೌದು. ಕೇಳಲು ನಿಮಗೆ ಆಶ್ಚರ್ಯವೆನಿಸಬಹುದು. ಆದರೆ ಆಸ್ಟ್ರೀಯಾದ ಒಬ್ಬ ವೃದ್ಧೆ ತಾನು ಸಂಪಾದಿಸಿದ್ದ ಹಣವೆನ್ನೆಲ್ಲಾ ಹರಿದು ಹಾಸಿಗೆಗೆ ತುಂಬಿಸಿ ಅದರ ಮೇಲೆ ಮಲಗುತ್ತಿದ್ದರಂತೆ. ಅಲ್ಲದೇ ಆಕೆಯ ಹೆಸರಿನಲ್ಲಿದ್ದ 9.5 ಲಕ್ಷ ಪೌಂಡನಷ್ಟು ಹಣ, ಉಳಿತಾಯ ಖಾತೆಯ ಪಾಸ್‍ಬುಕ್ ಎಲ್ಲವನ್ನು ಹರಿದು ಹಾಕಿದ್ದರು.

ಗೊತ್ತಾಗಿದ್ದು ಹೇಗೆ?: 85 ವರ್ಷವಾಗಿದ್ದ ಈ ಅಜ್ಜಿ ಕೆಲವು ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ. ಆಗ ಮನೆಯವರು ಕೊಠಡಿ ಪರಿಶೀಲನೆ ಮಾಡಿದಾಗ ಈ ಹಾಸಿಗೆಯೊಳಗೆ ಹರಿದು ತುಂಬಿಸಿದ್ದ ನೋಟುಗಳು ಪತ್ತೆಯಾಗಿವೆ. ಹಣವೂ ಸೇರಿದಂತೆ ತನ್ನ ಸ್ವಂತ ದಾಖಲೆಗಳನ್ನು ಅಜ್ಜಿ ನಾಶ ಮಾಡಿದ್ದೇಕೆ ಎನ್ನುವುದು ಇನ್ನು ತಿಳಿದುಬಂದಿಲ್ಲ. ಆದರೆ ಅಜ್ಜಿ ಹರಿದ ನೋಟುಗಳನ್ನು ಸೆಂಟ್ರಲ್ ಬ್ಯಾಂಕ್ ಬದಲಾಯಿಸಿಕೊಡುವುದಾಗಿ ಹೇಳಿರುವುದರಿಂದ ಮೊಮ್ಮಕ್ಕಳಲ್ಲಿ ಸಂತಸ ಮೂಡಿಸಿದೆ.

Write A Comment