ಅಂತರಾಷ್ಟ್ರೀಯ

ಸ್ವಿಜರ್‍ಲ್ಯಾಂಡ್‍ನಲ್ಲಿ ರಸ್ತೆಗಿಳಿಯಲಿದೆ ಬ್ಯಾಟರಿ ಚಾಲಿತ ಡ್ರೈವರ್‍ಲೆಸ್ ಮಿನಿ ಬಸ್ !

Pinterest LinkedIn Tumblr

driverless-bus

ಬರ್ನ್: ಚೀನಾದಲ್ಲಿ ಇತ್ತೀಚೆಗಷ್ಟೇ ಚಾಲಕನಿಲ್ಲದೇ ಓಡಿಸುವ ಬಸ್ ಪ್ರಯೋಗ ಮಾಡಲಾಗಿತ್ತು. ಇದೀಗ ಸ್ವಿಜರ್‍ಲ್ಯಾಂಡ್‍ನಲ್ಲಿ ಚಾಲಕನಿಲ್ಲದ ಕೇವಲ ಬ್ಯಾಟರಿಯಿಂದ ಓಡುವ ಬಸ್ಸನ್ನು ರಸ್ತೆಗಳಿಸಲು ತಯಾರಿ ನಡೆದಿದೆ.

ಹೌದು. ಇದೇ ಮೊದಲ ಬಾರಿಗೆ ಬ್ಯಾಟರಿ ಚಾಲಿತ ಡ್ರೈವರ್‍ಲೆಸ್ ಮಿನಿ ಬಸ್ ಸ್ವಿಜರ್‍ಲ್ಯಾಂಡ್‍ನಲ್ಲಿ ಇನ್ನೇನು ಕೆಲವು ದಿನಗಳಲ್ಲೇ ರಸ್ತೆಗಿಳಿಯುತ್ತಿದೆ. ಸ್ವಿಜ್ ಫೆಡರಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಇಲ್ಲಿನ ಬೆಸ್ಟ್ ಮೈಲ್ ಎಂಬ ಕಂಪನಿಯ ಸಹಭಾಗಿತ್ವದೊಂದಿಗೆ ಈ ಬಸ್ ತಯಾರಾಗಿದ್ದು, 2016ಕ್ಕೆ ಜನರ ಸೇವೆಗೆ ದೊರಕಲಿದೆ.

ಈ ಬಸ್ 9 ಜನರನ್ನು ಒಂದು ಬಾರಿಗೆ ಹೊತ್ತು ಸಾಗುವ ಸಾಮಥ್ರ್ಯ ಹೊಂದಿದ್ದು, ಸ್ವಿಜರ್‍ಲ್ಯಾಂಡ್‍ನ ಸೀಯಾನ್ಸ್ ಓಲ್ಡ್ ಟೌನ್‍ನ ಪ್ರವಾಸಿತಾಣಗಳಿಗೆ ಈ ಸೇವೆ ಸಿಗಲಿದೆ. ಈ ಬಸ್ಸನ್ನು 6 ತಿಂಗಳ ಕಾಲ ಪರೀಕ್ಷಾರ್ಥ ಸಂಚಾರ ನಡೆಸಿದ್ದು, ಇದರಲ್ಲಿ ಯಶಸ್ವಿಯಾದ ಕಾರಣ ಈ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

Write A Comment