ಅಂತರಾಷ್ಟ್ರೀಯ

ಲೈಂಗಿಕ ಕ್ರಿಯೆಗೆ ಬಲವಂತ ಪಡಿಸಿದ ಇಸಿಸ್ ಕಮಾಂಡರ್ ನನ್ನು ಗುಂಡಿಟ್ಟು ಹತ್ಯೆ ಮಾಡಿದ ಖುರ್ದಿಶ್ ಮಹಿಳೆ

Pinterest LinkedIn Tumblr

6271gun-shot-1

ಬಗ್ದಾದ್,ಸೆ.8: ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವಂತೆ ಒತ್ತಾಯಿಸಿದ ಐಎಸ್‍ಐಸ್ ಕಮಾಂಡರ್ ಒಬ್ಬರನ್ನು ಖುರ್ದಿಶ್ ಮಹಿಳೆ ಗುಂಡಿಟ್ಟು ಹತ್ಯೆ ಮಾಡಿದ್ದಾಳೆ.

ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುದು ಅಲ್ಲದೆ ಲೈಂಗಿಕ ಗುಲಾಮಗಿರಿಯಲ್ಲಿಯೇ ಬಿದ್ದಿರುವಂತೆ ಮಹಿಳೆಗೆ ಐಎಸ್‍ಐಸ್ ಕಮಾಂಡರ್ ಪದೇ ಪದೇ ಒತ್ತಾಯಿಸುತ್ತಿದ್ದ,ಇದಕ್ಕೆ ಮಹಿಳೆ ಸಾಕಷ್ಟು ಪ್ರತಿರೋಧ ಒಡ್ಡಿದರೂ ಗಮನ ಹರಿಸದೆ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗಿವಂತೆ ಬಲವಂತ ಮಾಡುತ್ತಿದ್ದ.ಇದರಿಂದ ತಿರುಗಿಬಿದ್ದ ಮಹಿಳೆ ಗುಂಡಿಟ್ಟು ಹತ್ಯೆ ಮಾಡಿದ್ದಾಳೆ.

ಇರಾಕ್‍ನ ಮೌಸುಲ್ ನನಗರದ ಯಾಜೀದಿ ಖುರ್ದಿಶ್ ಅಲ್ಪಸಂಖ್ಯಾತ ಸಂಘಟನೆಯ ಸದಸ್ಯೆಯಾಗಿರುವ ಈ ಮಹಿಳೆ ಉಗ್ರನನ್ನು ಹತ್ಯೆ ಮಾಡಿ ತನ್ನ ಸೇಡು ತೀರಿಸಿಕೊಂಡಿದ್ದಾಳೆ.

ಐಎಸ್‍ಐಸ್ ಉಗ್ರರರು ಮಹಿಳೆಯರನ್ನು ತಮ್ಮ ಲೈಂಗಿಕ ಕೆಲಸಕ್ಕಾಗಿ ಬಳಸಿಕೊಳ್ಳುತ್ತಾರೆ.ಅದಕ್ಕೆ ನಿರಾಕರಿಸಿದ ಮಹಿಳೆಯರನ್ನು ನಿರ್ಧಾಕ್ಷಣ್ಯವಾಗಿ ಹತ್ಯೆ ಮಾಡುತ್ತಾರೆ.ಈ ಮಹಿಳೆಯೂ ಇದೇ ಮಾದರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗಲಿ ನಿರಾಕರಿಸಿ ಉಗರನ್ನು ಹತ್ಯೆ ಮಾಡಿದ್ದಾಳೆ.

Write A Comment