ಕರ್ನಾಟಕ

ದರೋಡೆಗೆ ಸಜ್ಜಾಗಿದ್ದ ಕುಖ್ಯಾತ ರೌಡಿ ಕುಣಿಗಲ್ ಗಿರಿಯ ನಾಲ್ವರು ಸಹಚರರ ಬಂಧನ

Pinterest LinkedIn Tumblr

Raudi

ಬೆಂಗಳೂರು,ಸೆ.8; ಮಾರತ್ ಹಳ್ಳಿ ರಿಂಗ್ ರಸ್ತೆಯ ಸಿಲ್ಕ್ ಬೋರ್ಡ್ ಸಮೀಪದ ನಿರ್ಜನ ಪ್ರದೇಶದಲ್ಲಿ ದರೋಡೆಗೆ ಸಜ್ಜಾಗಿದ್ದ ಕುಖ್ಯಾತ ರೌಡಿ ಕುಣಿಗಲ್ ಗಿರಿಯ ನಾಲ್ವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜೆ.ಸಿನಗರದ ಪ್ರವೀಣ್‍ಕುಮಾರ್(27)ಅತ್ತಿಬೆಲೆಯ ಸುಬ್ರಮಣಿ(26)ಮಧು(21)ವಿವೇಕ್(22) ಬಂಧಿತ ಆರೋಪಿಗಳಾಗಿದ್ದಾರೆ, ಬಂಧಿತರಿಂದ ಎರಡು ದ್ವಿಚಕ್ರವಾಹನಗಳು ಲಾಂಗ್,ಮರದ ದೊಣ್ಣೆ, ಕಾರದ ಪುಡಿ ಪೊಟ್ಟಣ, ಹಾಗೂ 4 ಮೊಬೈಲ್ ಪೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ರಿಂಗ್ ರಸ್ತೆಯ ಸಿಲ್ಕ್ ಬೋರ್ಡ್ ಸಮೀಪದ ನಿರ್ಜನ ಪ್ರದೇಶದಲ್ಲಿ ಎರಡು ದ್ವಿಚಕ್ರ ವಾಹನಗಳಲ್ಲಿ ಮಾರಕಾಸ್ತ್ರಗಳೊಂದಿಗೆ ಒಂಟಿಯಾಗಿ ಸಾರ್ವಜನಿಕರನ್ನು ಬೆಲೆ ಬಾಳುವ ವಸ್ತುಗಳನ್ನು ದೋಚಲು ಸಜ್ಜಾಗಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಕಾರ್ಯಾಚರಣೆಯಲ್ಲಿ ಗಾರೇಬಾವಿಪಾಳ್ಯ ಶಿವಾ(22) ಸೇರಿ ಮೂವರು ಪರಾರಿಯಾಗಿದ್ದು ಅವರಿಗಾಗಿ ತೀವ್ರ ಶೋಧ ನಡೆಸಲಾಗಿದೆ,ಇವರೆಲ್ಲರೂ ಕುಖ್ಯಾತ ದರೋಡೆ ಕೋರನಾದ ಕುಣಿಗಲ್ ಗಿರಿಯ ಸಹಚರರಾಗಿರುವುದು ವಿಚಾರಣೆಯಲ್ಲಿ ಗೊತ್ತಾಗಿದೆ.

ವೈಶ್ಯಾವಾಟಿಕೆ ದಂಧೆ ನಡೆಸುವ ಸ್ಥಳಗಳಿಗೆ ಹೋಗಿ ಅವರನ್ನು ಬೆದರಿಸಿ ದರೋಡೆ ಮಾಡುತ್ತಿದ್ದ ಆರೋಪಿಗಳು ಮಡಿವಾಳದ ಹೊಂಗಸಂದ್ರದ ಮನೆಯೊಂದಕ್ಕೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ, ಮನೆಯಲ್ಲಿದ್ದವರನ್ನು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ1.5 ಲಕ್ಷ ರೂ. ಚಿನ್ನಾಭರಣಗಳನ್ನು ಮತ್ತು ನಗದು ಹಣವನ್ನು ದೋಚಿ ಪರಾರಿಯಾಗಿದ್ದರು.

ಆರೋಪಿ ಪ್ರವೀಣ್ ಕುಮಾರ್ ಬಸವೇಶ್ವರನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಪಟ್ಟಿಯಲ್ಲಿದ್ದು,ಈತನ ವಿರುದ್ಧ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಡಿಸಿಪಿ ರಮೇಶ್ ತಿಳಿಸಿದ್ದಾರೆ.

Write A Comment