ಅಂತರಾಷ್ಟ್ರೀಯ

ಭಾರತದಲ್ಲಿ ಬೃಹತ್ ದಾಳಿ ನಡೆಸ್ತಾರಂತೆ ಇಸಿಸ್ ಉಗ್ರರು..?

Pinterest LinkedIn Tumblr

iccಇರಾಕ್ ಹಾಗೂ ಸಿರಿಯಾದಲ್ಲಿ ತನ್ನ ಕೃತ್ಯದ ಮೂಲಕ ಭಯ ಹುಟ್ಟಿಸಿರುವ ಇಸಿಸ್ ಉಗ್ರ ಸಂಘಟನೆ ಇದೀಗ ಭಾರತದ ಮೇಲೆ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲು ಸಿದ್ದತೆ ನಡೆಸಿದೆ ಎಂಬ ಆಘಾತಕರ ಮಾಹಿತಿ ಲಭ್ಯವಾಗಿದೆ.

ತಾಲಿಬಾನ್‌ ಸಂಘಟನೆ ಜತೆಗೆ ನಂಟು ಹೊಂದಿರುವ ಪಾಕಿಸ್ತಾನಿಯೊಬ್ಬನಿಂದ ದೊರೆತಿದೆ ಎನ್ನಲಾದ ಕೆಲವು ಉರ್ದು ಭಾಷೆಯಲ್ಲಿನ ದಾಖಲೆಗಳನ್ನು ಹಾರ್ವರ್ಡ್ ಯುನಿವರ್ಸಿಟಿಯ ತಜ್ಞರು ಭಾಷಾಂತರ ಮಾಡಿದ್ದು ಈ ದಾಖಲೆಗಳಲ್ಲಿ ಈ ವಿಷಯ ಬಹಿರಂಗವಾಗಿದೆ ಎಂದು ಅಮೇರಿಕಾದ ಪತ್ರಿಕೆಯೊಂದು ತನಿಖಾ ವರದಿ ಪ್ರಕಟಿಸಿದೆ.

32 ಪುಟಗಳ ಉರ್ದು ದಾಖಲೆಗಳನ್ನು ಉಲ್ಲೇಖಿಸಿ ಮಂಗಳವಾರ (ಜುಲೈ 28) ಈ ಪತ್ರಿಕೆಯಲ್ಲಿ ಪ್ರಕಟವಾಗಿರುವ ತನಿಖಾ ವರದಿಯು ಭಾರತದ ಮೇಲೆ ದಾಳಿಗೆ ಸಿದ್ಧತೆ ನಡೆಸುತ್ತಿರುವ ವಿಷಯ ದಾಖಲೆಗಳಲ್ಲಿದೆ. ಅಲ್ಲದೇ ಅಮೆರಿಕದ ಮೇಲಿನ ದಾಳಿಗೆ ಇದು ಮುನ್ನುಡಿಯಾಗಲಿದೆ ಎಂದು ದಾಖಲೆಗಳಲ್ಲಿ ಹೇಳಲಾಗಿದೆ ಎಂದು ತಿಳಿಸಿದೆ.

ಅಷ್ಟೇ ಅಲ್ಲ , ಒಂದೊಮ್ಮೆ ಅಮೆರಿಕ ತನ್ನೆಲ್ಲಾ ಮಿತ್ರ ರಾಷ್ಟ್ರಗಳೊಂದಿಗೆ ದಾಳಿ ನಡೆಸಿದರೂ ನಾವೆಲ್ಲರೂ ಒಗ್ಗಟ್ಟಾಗಿ ಅಂತಿಮ ಯುದ್ಧ ನಡೆಸುತ್ತೇವೆ ಎಂಬ ಅಂಶವೂ ಈ  ದಾಖಲೆಗಳಲ್ಲಿದೆ ಎನ್ನಲಾಗಿದ್ದು ಈ ಕುರಿತು ಭಾರತ ಕಟ್ಟೆಚ್ಚರ ವಹಿಸುವ ಅನಿವಾರ್ಯತೆ ಇದೆ ಎಂಬುದನ್ನೂ ವರದಿ ತಿಳಿಸಿದೆ.

Write A Comment