ರಾಷ್ಟ್ರೀಯ

ಮೋದಿ ವಿರುದ್ದದ ಜಾಹಿರಾತನ್ನು ಹಿಂಪಡೆದ ಆಮ್ ಆದ್ಮಿ

Pinterest LinkedIn Tumblr

aapಪ್ರಧಾನಿ ಮೋದಿ ವಿರುದ್ಧ ಜಾಹೀರಾತು ಸಮರ ಆರಂಭಿಸಿದ್ದ ಆಮ್ ಆದ್ಮಿ ಸರ್ಕಾರ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ನಿಧನರಾದ ಹಿನ್ನೆಲೆಯಲ್ಲಿ ಕಲಾಂ ಅವರಿಗೆ ಗೌರವ ಸೂಚಿಸುವ ಸಲುವಾಗಿ ತನ್ನ  ಜಾಹಿರಾತನ್ನು ಹಿಂಪಡೆಡಿದೆ.

ದೆಹಲಿ ಸರ್ಕಾರದ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಕೆಲಸ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಡುತ್ತಿಲ್ಲ. ಪ್ರತಿಯೊಂದು ಕೆಲಸದಲ್ಲೂ ಮೋದಿಯವರು ಮಧ್ಯೆ ಪ್ರವೇಶಿಸುತ್ತಿದೆ ಎಂದು ಆರೋಪಿಸಿದ್ದ ಆಪ್ ಸರ್ಕಾರ ಮೋದಿ ವಿರುದ್ಧ ಜಾಹೀರಾತು ಸಮರಕ್ಕೆ ಕೈ ಹಾಕಿತ್ತು. ಆಮ್ ನ ವರ್ತನೆ ಬಿಜೆಪಿಗೆ ಮಾತ್ರವಲ್ಲ,ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು.

ಆದರೆ ಇದೀಗ ಅಬ್ದುಲ್ ಕಲಾಂ ಅವರು ನಿಧನರಾದ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸೂಚಿಸುವ ಸಲುವಾಗಿ ಈ ಜಾಹೀರಾತುಗಳನ್ನು ಹಿಂಪಡೆಯುತ್ತಿರುವ ಆಮ್ ಆದ್ಮಿ ಪಕ್ಷವು ಹೊರಾಂಗಣ ಸಾರ್ವಜನಿಕ ಪ್ರದೇಶಗಳಲ್ಲಿ ಹಾಕಿರುವ ಎಲ್ಲಾ ಜಾಹೀರಾತುಗಳನ್ನು ತೆಗೆಯುವಂತೆ ತಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದೆ ಎನ್ನಲಾಗುತ್ತಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಆಮ್ ನ ಕಾರ್ಯಕರ್ತರು ಜಾಹಿರಾತು ಫಲಕವನ್ನು ತೆಗೆಯುತ್ತಿದ್ದಾರೆ.

Write A Comment