ಅಂತರಾಷ್ಟ್ರೀಯ

ಸಂಸತ್ ದಾಳಿ ಗೆ ಯತ್ನಿಸಿದ ಉಗ್ರರ ಹತ್ಯೆ

Pinterest LinkedIn Tumblr

8080CIF1TDQUYAAhZYe

ಆಫ್ಘಾನಿಸ್ತಾನದ ಸಂಸತ್ ಮೇಲೆ ಸೋಮವಾರ ನಡೆದ ತಾಲಿಬಾನ್ ದಾಳಿ ನಡೆಸಲು ಮುಂದಾಗಿದ್ದ ಉಗ್ರರನ್ನು ಹತ್ಯೆ ಮಾಡಲು ಭದ್ರತಾ ಪಡೆ ಯಶಸ್ವಿಯಾಗಿದೆ.

ಇಂದು ಬೆಳಿಗ್ಗೆ ತಾಲಿಬಾನ್ ಉಗ್ರರು ಸಂಸತ್ ಹೊರಗಡೆ ಬಾಂಬ್ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಒಟ್ಟು ಐವರು ಮಹಿಳೆಯರು ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಉಗ್ರಗಾಮಿಗಳು ಒಂದು ಕಾರ್ ಬಾಂಬ್ ಸೇರಿದಂತೆ 9 ಬಾಂಬ್ ಸ್ಪೋಟಿಸಿದ್ದಲ್ಲದೆ ಆಸು ಪಾಸಿನ ಕಟ್ಟಡಗಳಿಂದ ಗುಂಡಿನ ದಾಳಿ ನಡೆಸಿದರು.

ದಾಳಿ ನಡೆದ ಮರುಕ್ಷಣವೇ ಮಿಂಚಿನ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ ಕಟ್ಟಡವನ್ನು ಖಾಲಿ ಮಾಡಿ ಗುಂಡಿನ ದಾಳಿ ನಡೆಸಿದ್ದು ಎಲ್ಲ ಏಳು ಮಂದಿ ಉಗ್ರರನ್ನು ಹತ್ಯೆ ಮಾಡಲು ಸಫಲರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment