ಮನೋರಂಜನೆ

ಜಾಕ್ವೆಲಿನ್ ಸೌಂದರ್ಯಕ್ಕೆ ಕಾರಣವಾಗಿದ್ದು ಕುದುರೆ !!

Pinterest LinkedIn Tumblr

3276jacqueline-fernandez-in-roy-002

ಬಾಲಿವುಡ್ ನಲ್ಲಿ ತನ್ನ ಥಳಕು ಬಳಕು ದೇಹ ಸಿರಿಯ ಮೂಲಕವೇ ಅಭಿಮಾನಿಗಳ ಮನ ಗೆದ್ದ ಶ್ರೀಲಂಕಾದ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಇದೀಗ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾಳೆ.

ಹೌದು. ಸಿನಿಮಾ ನಟಿಯರು ತಮ್ಮ ದೇಹದ ಸೌಂದರ್ಯ, ಹಾಗಿ ಬಾಡಿ ಮೆಂಟೈನ್ ಮಾಡಲು ಸಾಕಷ್ಟು ಕಸರತ್ತು ಮಾಡುತ್ತಾರೆ. ಆದರೆ ಜಾಕ್ವೆಲಿನ್ ಮಾತ್ರ ಕುದುರೆಯ ಸಹವಾಸ ಮಾಡಿ ತನ್ನ ಸುಂದರ ದೇಹವನ್ನು ಕಾಯ್ದುಕೊಂಡಿದ್ದಾಳಂತೆ.

ಜಾಕ್ವೆಲಿನ್‍ ಗೆ ಕುದುರೆ ಸವಾರಿ ತುಂಬಾ ಪ್ರೀತಿಯಂತೆ. ಅಲ್ಲದೇ ಇದು ತನ್ನ ದೇಹ ಸಿರಿಯ ಗುಟ್ಟು ಎಂಬುದನ್ನೂ ಒಪ್ಪಿಕೊಂಡಿರುವ  ಜಾಕ್ವೆಲಿನ್ ನಾಲ್ಕೈದು ತಾಸು ಕುದುರೆ ಸವಾರಿ ಮಾಡಿದರೆ ಎಂತಹ ಕೊಬ್ಬು ಕೂಡ ಕರಗಿ ಬೆವರಾಗಿ ಹರಿಯುತ್ತದೆ. ಅದರಲ್ಲಿಯೂ ವಾರಕ್ಕೆ ಕನಿಷ್ಠ ಎರಡು ಸಲ ಕುದುರೆ ಸವಾರಿ ಮಾಡಿದರೆ ಬೇರೆ ಯಾವ ವ್ಯಾಯಾಮದ ಅಗತ್ಯವೂ ಇಲ್ಲ ಎನ್ನುವ ಮೂಲಕ ಉತ್ತಮ ಫಿಟ್‍ನೆಸ್ ರಹಸ್ಯವನ್ನು ಬಾಯ್ಬಿಟ್ಟಿದ್ದಾಳೆ.

Write A Comment