ಕನ್ನಡ ವಾರ್ತೆಗಳು

ನಿವೇಶನ ರಹಿತರಿಗೆ ನಿವೇಶನ ಮಂಜೂರಾತಿಗೆ ಒತ್ತಾಯಿಸಿ ಸಿಪಿಐ ಪ್ರತಿಭಟನೆ / ಭೂಮಂಜೂರತಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭ : ಶಾಸಕ ಜೆ.ಆರ್.ಲೋಬೋ

Pinterest LinkedIn Tumblr

CPI_Protest_LOBO_1

ಮಂಗಳೂರು: ನಿವೇಶನ ರಹಿತರಿಗೆ ನಿವೇಶನ ಮಂಜೂರಾತಿ ವಿಳಂಭವಾಗುತ್ತಿರುವುದನ್ನು ಖಂಡಿಸಿ ಹಾಗೂ ಶೀಘ್ರ ನಿವೇಶನ ಮಂಜೂರಾತಿಗೆ ಆಗ್ರಹಿಸಿ ಸಿಪಿಐ (ಎಂ) ವತಿಯಿಂದ ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಯಿತ್ತು. ಸಿಪಿಐ (ಎಂ) ಮುಖಂಡರಾದ ವಸಂತ್ ಪೂಜಾರಿ, ಸುನೀಲ್ ಕುಮಾರ್ ಬಜಾಲ್ ಸೇರಿದಂತೆ ವಿವಿಧ ನಾಯಕರು ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿ ಶೀಘ್ರ ನಿವೇಶನ ಮಂಜೂರಾತಿಗೆ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಪ್ರತಿಭಟನೆಗೆ ಪ್ರತಿಕ್ರಿಯಿಸಿದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ. ಆರ್ ಲೋಬೊರವರು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮನೆ ನಿವೇಶನಕ್ಕಾಗಿ ಈಗಾಗಲೇ ಸುಮಾರು 1,200 ಕ್ಕಿಂತಲೂ ಅಧಿಕ ಅರ್ಜಿಗಳು ಬಂದಿದ್ದು, ಭೂಮಂಜೂರತಿಯ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

CPI_Protest_LOBO_2 CPI_Protest_LOBO_3 CPI_Protest_LOBO_4 CPI_Protest_LOBO_5 CPI_Protest_LOBO_6 CPI_Protest_LOBO_7 CPI_Protest_LOBO_8 CPI_Protest_LOBO_10

ಈ ನಿಟ್ಟಿನಲ್ಲಿ ಆಶ್ರಯ ಸಮಿತಿ ಹಲವಾರು ಸಭೆಗಳನ್ನು ನಡೆಸಿದ್ದು, ಕಣ್ಣೂರು ಪರಿಸರದಲ್ಲಿ 11 ಎಕ್ರೆ ಸರಕಾರಿ ಭೂಮಿಯಲ್ಲಿ ಜಿ+2 ಮಾದರಿಯಂತೆ ಪ್ರತಿ ಅರ್ಹ ಕುಟುಂಬಕ್ಕೆ ಒಂದು ಹಾಲ್, ಶೌಚಾಲಯ, ಮಲಗುವ ಹಾಗು ಅಡುಗೆ ಕೋಣೆ ಇರುವ ಬಹುಮಹಡಿ ವಸತಿಸಂಕೀರ್ಣ ನಿರ್ಮಿಸಲು ನೀಲಿ ನಕಾಶೆ ಸಿದ್ದ ಪಡಿಸಲಾಗಿದೆ.

ಮೊದಲ ಹಂತದಲಿ, ಆರ್ಜಿ ಸಲ್ಲಿಸಿದ ಅರ್ಹ 500 ನಿವೇಶನ ರಹಿತ ಕುಟುಂಬಗಳನ್ನು ಶೀಘ್ರದಲ್ಲಿ ಅಯ್ಕೆ ಮಾಡಲಾಗುವುದು. ಪ್ರತಿ ನಿವೇಶನಕ್ಕೆ ಸುಮಾರು 4 ಲಕ್ಷ ರೂಪಾಯಿ ನಿರ್ಮಾಣ ವೆಚ್ಚವಾಗುವುದೆಂದು ಅಂದಾಜಿಸಿದ್ದು, ಇದರಲ್ಲಿ ಸರಕಾರದಿಂದ 1.20 ಲಕ್ಷ ಹಾಗು ಮಹಾನಗರ ಪಾಲಿಕೆಯಿಂದ20 ಸಾವಿರ ರೂಪಾಯಿ ಅನುದಾನವನ್ನು ಪ್ರತಿ ಮನೆ ನಿವೇಶನಕ್ಕೆ ನೀಡಲಾಗುವುದು. ಉಳಿದ ಹಣವನ್ನು ಫಲನುಭವಿಗಳು ಬ್ಯಾಂಕ್ ಸಾಲದ ಮೂಲಕ ಬರಿಸಬೇಕು ಎಂದು ಸಭೆಯನ್ನು ಉದ್ದೇಶಿಸಿ ಶಾಸಕರು ತೀಳಿಸಿದರು.

Write A Comment