ಅಂತರಾಷ್ಟ್ರೀಯ

116 ವರ್ಷದ ವಿಶ್ವದ ಹಿರಿಯಜ್ಜಿ ಇನ್ನಿಲ್ಲ

Pinterest LinkedIn Tumblr

166-old-dead

ಡೆಟ್ರಾಯಿಟ್, ಜೂ.19-ಬರೋಬ್ಬರಿ 116 ವಸಂತಗಳನ್ನು ಕಂಡ ವಿಶ್ವದ ಅತ್ಯಂತ ಹಿರಿಯ ಮಹಿಳೆ ಜೆರಿಲಿಯನ್ ಟ್ಯಾಲಿ ಬುಧವಾರ ವಿಧಿವಶರಾಗಿದ್ದಾರೆ. ಅಮೆರಿಕದ ಜಾರ್ಜಿಯಾದಲ್ಲಿ 1899ರಲ್ಲಿ ಜನಿಸಿದ್ದ ಟ್ಯಾಲಿಯನ್ನು ಮಂಗಳವಾರವಷ್ಟೆ ಶ್ವಾಸಕೋಶದ ತೊಂದರೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇವರು 1930ರಲ್ಲಿ ಜಾರ್ಜಿಯಾ ಬಿಟ್ಟು ಮಿಚಿಗನ್‌ಗೆ ಬಂದು ನೆಲೆಸಿದ್ದರು. ಕಳೆದ ತಿಂಗಳಷ್ಟೇ 116ನೆ ಜನ್ಮ ದಿನ ಆಚರಿಸಿಕೊಂಡಿದ್ದ ಟ್ಯಾಲಿ ಟೆಡ್ರಾಯಿಟ್‌ನ ಆಸ್ಪತ್ರೆಯಲ್ಲಿ ನಿಧನರಾದರು. ಇವರ ಸಾವಿನಿಂದ ಮೂರು ಶತಮಾನಗಳ ಕೊಂಡಿಯೊಂದು ಕಳಚಿದಂತಾಗಿದೆ.

Write A Comment