ರಾಷ್ಟ್ರೀಯ

39 ಹೆಂಡಿರ ಮುದ್ದಿನ ಗಂಡ ಈತ…!

Pinterest LinkedIn Tumblr

article-1358654-0D434280000

ಝಿಯೋನಾ ಛನಾ ಎಂಬ ವ್ಯಕ್ತಿಯದೇ ಈ ದೊಡ್ಡ ಕುಟುಂಬ. ಈತ ನೂರು ಕೋಣೆಗಳ ಬೃಹತ್ ಮನೆಯಲ್ಲಿ ಈ ಎಲ್ಲರೊಂದಿಗೆ ಆರಾಮವಾಗಿ ಬದುಕು ನಡೆಸಿದ್ದಾನೆ. ಪತ್ನಿಯರು ಈ ವ್ಯಕ್ತಿಯ ನೆಮ್ಮದಿಯ ಬದುಕಿಗೆ ಸಾಕಷ್ಟು ಸಹಕರಿಸುತ್ತ ಸಾಗಿದ್ದಾರೆ. ಯಾರಿಗೂ ಯಾವುದೇ ಕೊರತೆಯಿಲ್ಲದಂತೆ ಈತ ಎಲ್ಲವನ್ನೂ ನಿಭಾಯಿಸುತ್ತ ಬಂದಿದ್ದಾನೆ.  ಈ ಕುಟುಂಬಕ್ಕೆ ಒಮ್ಮೆ ಮಾಂಸಾಹಾರದ ಅಡುಗೆ ತಯಾರಿಸಲು ಬರೋಬ್ಬರಿ 30 ತೂಕದ ಕೋಳಿಗಳು ಬೇಕೇಬೇಕು..! ಈ ಅವಿಭಕ್ತ ಕುಟುಂಬದ ಯಜಮಾನನಾಗಿರುವ ಛನಾ ಖುಷಿಯಿಂದ ಒಂದು ವಿಷಯವನ್ನು ಎಲ್ಲರೊಂದಿಗೂ ಹಂಚಿಕೊಳ್ಳುತ್ತಾನೆ.  ಱಱದೇವರ ದಯೆಯಿಂದ ನನಗೆ 39 ಹೆಂಡತಿಯರೊಂದಿಗೆ ಸಂಸಾರ ನಡೆಸುವ ಯೋಗ ಲಭಿಸಿದೆೞೞ ಎಂಬುದು ಆತನ ಮನದಾಳದ ಮಾತು.

94 ಮಕ್ಕಳು, 14 ಸೊಸೆಯಂದಿರು ಮತ್ತು 33 ಮೊಮ್ಮಕ್ಕಳನ್ನೂ ಹೊಂದಿದ್ದಾರೆ. ಎಲ್ಲ ಒಟ್ಟಿಗೆ ಸೇರಿ 181 ಮಂದಿ ಸದಸ್ಯರು ಈ ಮನೆಯಲ್ಲಿ ಸುಖ ಸಂಸಾರ ಅನುಭವಿಸುತ್ತಿದ್ದಾರೆ. ಈತನ ಬೃಹದಾಕಾರದ ನಾಲ್ಕು ಮಹಡಿಯ ಮನೆಯಲ್ಲಿ ಒಟ್ಟು ನೂರು ಕೋಣೆಗಳಿದ್ದು, 186 ಮಂದಿ ಅಲ್ಲಿ ವಾಸಿಸುತ್ತಿದ್ದಾರೆ. ಈ ಮನೆ ಭಾರತದ ಮಿಜೋರಾಂನ ಒಂದು ಪುಟ್ಟ ಹಳ್ಳಿ ಬೆಟ್ಟ-ಗುಡ್ಡಗಳಿಂದ ಆವೃತವಾದ ಸುಂದರ ಸ್ಥಳದಲ್ಲಿ ಎದ್ದು ನಿಂತಿದೆ.  ಬತ್ತಾ ನ್ ಎಂಬ ಈ ಹಳ್ಳಿಯಲ್ಲಿ ಝಿಯೋನಾ ಛನಾ ತನ್ನ ಈ ದೈತ್ಯ ಸಂಸಾರದೊಂದಿಗೆ ವಾಸಿಸುತ್ತಿದ್ದು, ಅಲ್ಲಿನ ವ್ಯವಸ್ಥೆಯೇ ಎಲ್ಲರನ್ನೂ ಚಕಿತಗೊಳಿಸುತ್ತಿದೆ. ಇಲ್ಲಿ ಬಟ್ಟೆ ಒಗೆಯುವ ವ್ಯವಸ್ಥೆಯದೇ ಒಂದು ಸೋಜಿಗ.  ಈ ನಿವಾಸವನ್ನು ಮನೆ ಎನ್ನುವುದಕ್ಕಿಂತ ಒಂದು ಹೊಟೇಲ್ ಎಂದು ಬಣ್ಣಿಸಬಹುದು. ಝಿಯೋನಾ ಮ್ಯಾನ್ಷನ್ ಈ ಹಳ್ಳಿಯಲ್ಲಿನ ಒಂದು ಅತಿ ದೊಡ್ಡ ಕಾಂಕ್ರಿಟ್ ಕಟ್ಟಡವಾಗಿದ್ದು, ಎಲ್ಲರನ್ನೂ ಆಕರ್ಷಿಸುತ್ತಿದೆ.

ಈ ನಡುವೆ ಝಿಯೋನಾ ತನ್ನ ಈ ಸೌಭಾಗ್ಯಕ್ಕೆ ತನ್ನನ್ನು ತಾನೇ ಹೊಗಳಿಕೊಳ್ಳುತ್ತಾನೆ. ಇಂದು ನನಗೆ ನಾನು ದೇವರು ಸೃಷ್ಟಿಸಿದ ವಿಶೇಷ ಮನುಷ್ಯ ಎಂಬ ಭಾವನೆ ಉಂಟಾಗಿದೆ. ಆ ದೇವರು ನನಗೆ ಇಷ್ಟೊಂದು ದೊಡ್ಡ ಮಟ್ಟದ ಮಕ್ಕಳನ್ನು ಕರುಣಿಸಿದ್ದಾನೆ. ಹಾಗಾಗಿ ನಾನೊಬ್ಬ ಅದೃಷ್ಟವಂತ ವ್ಯಕ್ತಿ. 39 ಮಹಿಳೆಯರಿಗೆ ಗಂಡನಾಗುವುದು ಕಡಿಮೆ ವಿಷಯವೇನಲ್ಲ ಎಂದು ಎಲ್ಲರೆದುರು ಕೊಚ್ಚಿಕೊಳ್ಳುತ್ತಾನೆ.  ಝಿಯೋನಾ ಈ ಕುಟುಂಬದಲ್ಲಿ ಸೇನಾ ಶಿಸ್ತನ್ನು ಕಾಪಾಡಿದ್ದಾನೆ. ತನ್ನ ಪ್ರಥಮ ಪತ್ನಿ ಝತ್ತಿಯಾಂಗಿ ಬಗ್ಗೆ ಈತನಿಗೆ ಸಾಕಷ್ಟು ಪ್ರೀತಿ. ಏಕೆಂದರೆ, ಇಡೀ ಸಂಸಾರವನ್ನು ಆಕೆ ತುಂಬ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ ಎಂಬುದು ಆತನ ಹೇಳಿಕೆ.  ಒಂದು ಹೊತ್ತಿನ ಊಟಕ್ಕೆ ಈ ಮನೆಯ ಅಡುಗೆ ಕೋಣೆಯಲ್ಲಿ 30 ಕೋಳಿಗಳ ಮಾಂಸ ಅಥವಾ 132 ಫೌಂಡ್ ಆಲೂಗಡ್ಡೆ ಜತೆಗೆ 220 ಫೌಂಡ್ ಅಕ್ಕಿ ಖರ್ಚಾಗುತ್ತದೆ. ಒಂದೇ ಬಾರಿ ಊಟಕ್ಕೆ ಎಲ್ಲರೂ ಕುಳಿತಾಗ ಅದನ್ನು ನೋಡಿ ಆನಂದಿಸುವುದೇ ಒಂದು ಮಜಾ ಎನ್ನುತ್ತಾನೆ ಝಿಯೋನಾ.

ಈ ಕುಟುಂಬದ ಮುಖ್ಯಸ್ಥನಾಗಿ ನಾನು ಎಷ್ಟು ಮಂದಿಯನ್ನು ಪತ್ನಿಯರನ್ನಾಗಿ ಸ್ವೀಕರಿಸಿದರೂ ಯಾರೂ ಅಡ್ಡಿ ಮಾಡುವುದಿಲ್ಲ. ಆ ರೀತಿ ಎಲ್ಲರನ್ನೂ ನಾನು ಸುಖವಾಗಿ ಸಾಕುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಾನೆ.  ಹಿಂದೊಮ್ಮೆ ಒಂದೇ ವರ್ಷದಲ್ಲಿ ಹತ್ತು ಮಂದಿ ಮಹಿಳೆಯರನ್ನು ಈತ ವಿವಾಹವಾಗುವ ಮೂಲಕ ಹಿಂದಿನ ದಾಖಲೆಗಳನ್ನೆಲ್ಲ ಮುರಿದಿದ್ದಾನೆ. ಈ ಎಲ್ಲರೊಂದಿಗೂ ಹೇಗಪ್ಪ ಈ ಮನುಷ್ಯ ಏಗುತ್ತಾನೆ ಎಂದು ಆಶ್ಚರ್ಯವಾಗಬಹುದು. ಆದರೆ, ಅದಕ್ಕೂ ಆತ ಉಪಾಯಗಳನ್ನು ಕಂಡುಕೊಂಡಿದ್ದಾನೆ. ಪತ್ನಿಯರು ರೊಟೇಷನ್ ಪದ್ಧತಿಯಲ್ಲಿ ಈತನ ಬೆಡ್‌ರೂಮ್ ಪ್ರವೇಶಿಸುತ್ತಾರೆ..! ಈತನ ಪತ್ನಿಯರ ಸಾಲಿನಲ್ಲಿ 35 ವರ್ಷದ ರಿಂಕ್ಮಿನಿ ಸಹ ಸೇರಿದ್ದಾಳೆ. ಆಕೆ ಈತನ ಬಗ್ಗೆ ಹೊಗಳಿಕೆ ವ್ಯಕ್ತಪಡಿಸುತ್ತಾಳೆ. ನನ್ನ ಗಂಡ  ಈ ಹಳ್ಳಿಯಲ್ಲೇ ಅತ್ಯಂತ ಸುಂದರ ಸರದಾರ. ಈ ಮನೆಯ ಯಜಮಾನನಾಗುವ ಇವರ ಸುತ್ತಮುತ್ತ ಸದಾಕಾಲ ನಾವು ಇದ್ದು ಅವರ ಆದೇಶಗಳನ್ನು ಚಾಚೂತಪ್ಪದೆ ಪಾಲಿಸುತ್ತ ಈ ಮನೆಯನ್ನು ನಂದನವನ ಮಾಡಿದ್ದೇವೆ ಎನ್ನುತ್ತಾರೆ.  ಒಟ್ಟಾರೆ ಇಂದಿನ ಕಾಲದಲ್ಲಿ ಒಬ್ಬ ಹೆಂಡತಿಯನ್ನೇ ಸುಧಾರಿಸಲು ಸಾಧ್ಯ ವಾಗದ ಸ್ಥಿತಿ ಇರುವಾಗ ಈತ 39 ಮಂದಿ ಪತ್ನಿಯರನ್ನು ಅದು ಹೇಗೆ ನಿಭಾಯಿಸುತ್ತಿದ್ದಾನೆ ಆ ದೇವರೇ ಬಲ್ಲ..!

Write A Comment