ಅಂತರಾಷ್ಟ್ರೀಯ

ಕ್ಯಾನ್ವಸ್ ಸಿಲ್ವರ್ 5 ಸ್ಮಾರ್ಟ್ ಫೋನಿನ ವಿಶೇಷತೆಯೇನು ಗೊತ್ತಾ..?

Pinterest LinkedIn Tumblr

45833354Canvas-Sliver-b

ಮೊಬೈಲ್ ತಯಾರಿಕಾ ಕಂಪನಿಗಳ ಪೈಕಿ ಒಂದಾಗಿರುವ ಮೈಕ್ರೋಮ್ಯಾಕ್ಸ್, ಸ್ಲಿಮ್ ಸ್ಮಾರ್ಟ್ ಫೋನ್ ‘ಕ್ಯಾನ್ವಸ್ ಸಿಲ್ವರ್ 5’ ಬಿಡುಗಡೆ ಮಾಡಿದ್ದು, ಇದರ ಬೆಲೆ 17,999 ರೂ.ಗಳೆಂದು ಕಂಪನಿ ತಿಳಿಸಿದೆ.

5.1 ಎಂ.ಎಂ. ಥಿಕ್ ನೆಸ್ ಹೊಂದಿರುವ ಈ ಫೋನ್ ವಿಶ್ವದಲ್ಲಿಯೇ ಅತ್ಯಂತ ತೆಳುವಾದ ಫೋನ್ ಎಂದು ಕಂಪನಿ ಹೇಳಿಕೊಂಡಿದೆ. 4.5 ಇಂಚಿನ ಹೆಚ್.ಡಿ. ಪರದೆಯನ್ನು ಇದು ಹೊಂದಿದ್ದು, ಆಂಡ್ರಾಯ್ಡಿನ 5.0.2 ಆಪರೇಟಿಂಗ್ ಸಿಸ್ಟಂನಲ್ಲಿ ಈ ಪೋನ್ ಕಾರ್ಯ ನಿರ್ವಹಿಸುತ್ತದೆ.

‘ಕ್ಯಾನ್ವಸ್ ಸಿಲ್ವರ್ 5’  16 ಜಿಬಿ ಇಂಟರ್ನಲ್ ಸ್ಟೋರೆಜ್ ಹೊಂದಿದ್ದು, ಇದನ್ನು ವಿಸ್ತರಿಸಲು ಅವಕಾಶ ನೀಡಲಾಗಿಲ್ಲ. ಇದಕ್ಕೆ 8 ಎಂಪಿ ಹಿಂಬದಿ ಹಾಗೂ 5 ಎಂಪಿ ಮುಂಬದಿ ಕ್ಯಾಮರಾವಿದ್ದು, ಬ್ಯಾಟರಿ ಸಾಮರ್ಥ್ಯ 2,000 ಎಂಎಎಚ್ ಎಂದು ಹೇಳಲಾಗಿದೆ.

Write A Comment