ರಾಷ್ಟ್ರೀಯ

ಒಂದು ದಿನ ಬೆತ್ತಲಾಗಿ ನಿಂತರೆ ಒಂದು ಸಾವಿರ ರೂಪಾಯಿ !!

Pinterest LinkedIn Tumblr

7092bbc-6_1434612961

ಲಲಿತ ಕಲೆ ಅಥವಾ ಫೈನ್ ಆರ್ಟ್ಸ್ ಕಾಲೇಜಿನ ವಿದ್ಯಾರ್ಥಿಗಳ ಚಿತ್ರಕಲೆಗಳಿಗೆ ಪೋಸು ಕೊಡುವ ನಗ್ನ ಅಥವಾ ಅರೆನಗ್ನ ಮಾಡೆಲ್ ಗಳು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ ಈ ‘ಕಲೆಯನ್ನು’ ಉಳಿಸಲು ಮುಂದಾಗಿದ್ದು ಅದಕ್ಕಾಗಿಯೇ ಅವರಿಗೆ ನೀಡುತ್ತಿದ್ದ ಸಂಭಾವನೆಯನ್ನು ಹೆಚ್ಚಿಸಿದೆ.

ಲಲಿತ ಕಲೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಜೀವಂತ ಮಾಡೆಲ್ ಗಳ ಚಿತ್ರ ಬಿಡಿಸುವುದನ್ನು ಅಭ್ಯಾಸ ಮಾಡಬೇಕಿದ್ದು  ಒಬ್ಬ ರೂಪದರ್ಶಿಯ ಚಿತ್ರ ಬಿಡಿಸಲು ಸಾಮಾನ್ಯವಾಗಿ 6 ಗಂಟೆ ಬೇಕಾಗುತ್ತದೆ. ಅಷ್ಟು ಹೊತ್ತು ಬೆತ್ತಲೆಯಾಗಿ ಅಚಲವಾಗಿ ನಿಂತುಕೊಳ್ಳುವುದು ಭಾರೀ ಕಷ್ಟದ ಕೆಲಸವಾಗಿದ್ದು ಇಷ್ಟೊಂದು ಕಡಿಮೆ ಹಣಕ್ಕೆ ಯಾರೂ ಸಹ ಬೆತ್ತಲಾಗಲು ಒಪ್ಪುತ್ತಿಲ್ಲ. ಹಾಗಾಗಿ ಮಾಡೆಲ್ ಗಳ ಕೊರತೆ ಎದುರಾಗಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

ಸರ್ಕಾರದ ಈ ಕೊಡುಗೆಯ ಅನ್ವಯ ಈ ಹಿಂದೆ ಪ್ರತಿದಿನ 300 ರೂಪಾಯಿಗಳ ಸಂಭಾವನೆ ಪಡೆಯುತ್ತಿದ್ದ ಸಂಪೂರ್ಣ ನಗ್ನ ರೂಪದರ್ಶಿಯರು ದಿನಕ್ಕೆ 1 ಸಾವಿರ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ. ಅಲ್ಲದೇ ಅರೆನಗ್ನ ಹಾಗೂ ವಿಶೇಷ ಉಡುಗೆ ತೊಟ್ಟ ರೂಪದರ್ಶಿಯರ ಸಂಭಾವನೆಯಲ್ಲೂ ಭಾರೀ ಏರಿಕೆಯಾಗಿದೆ.

Write A Comment