ಅಂತರಾಷ್ಟ್ರೀಯ

41 ವರ್ಷದಿಂದ ಇದ್ದ ಭಾರತ-ಬಾಂಗ್ಲಾ ಗಡಿ ವಿವಾದ ಅಂತ್ಯ: ಭೂಮಿ ಅದಲು-ಬದಲು ಒಪ್ಪಂದಕ್ಕೆ ಸಹಿ

Pinterest LinkedIn Tumblr

modi-bangla8a

ಢಾಕಾ: ಕಳೆದ 41 ವರ್ಷಗಳಿಂದ ಇದ್ದ ಭಾರತ-ಬಾಂಗ್ಲಾದೇಶ ಗಡಿ ವಿವಾದಕ್ಕೆ ಶನಿವಾರ ತೆರೆ ಬಿದ್ದಿದ್ದು, ಈ ಸಂಬಂಧ ಉಭಯ ರಾಷ್ಟ್ರಗಳು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.

ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಜೊತೆ ಮಾತುಕತೆ ನಡೆಸಿದರು. ಬಳಿಕ ಉಭಯ ದೇಶಗಳ ನಾಯಕರು ಭೂಮಿ ಅದಲು-ಬದಲು ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಒಪ್ಪಂದ ಪ್ರಕಾರ, ಭಾರತ ಬಾಂಗ್ಲಾದೇಶಕ್ಕೆ 111 ಗ್ರಾಮಗಳನ್ನು ಹಾಗೂ ಬಾಂಗ್ಲಾದೇಶ ಭಾರತಕ್ಕೆ 51 ಗ್ರಾಮಗಳನ್ನು ಹಸ್ತಾಂತರಿಸಲಿದೆ.

ಬಾಂಗ್ಲಾದೇಶಕ್ಕೆ ಭಾರತ ಒಟ್ಟು 17 ಸಾವಿರ ಎಕರೆ ಭೂಮಿಯನ್ನು ಹಸ್ತಾಂತರ ಮಾಡಿದರೆ, ಇದಕ್ಕೆ ಪ್ರತಿಯಾಗಿ ಭಾರತಕ್ಕೆ ಬಾಂಗ್ಲಾದೇಶ 7 ಸಾವಿರ ಎಕರೆ ಭೂಮಿಯನ್ನು ಹಸ್ತಾಂತರಿಸಿದೆ.

ಉಭಯ ನಾಯಕರ ಈ ಒಪ್ಪಂದದಿಂದಾಗಿ ಗಡಿ ಸಮಸ್ಯೆ, ಅಕ್ರಮ ಒಳನುಸುಳುವಿಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ.

ಇದಕ್ಕೂ ಮುನ್ನ ಅಲ್ಲಿನ ರಾಷ್ಟ್ರೀಯ ಹುತಾತ್ಮ ಯೋಧರ ಸ್ಮಾರಕಕ್ಕೆ ಭೇಟಿ ನೀಡಿದ ಮೋದಿ, 1971ರ ಬಾಂಗ್ಲಾದೇಶ ವಿಮೋಚನೆಯ ಯುದ್ಧದಲ್ಲಿ ಮಡಿದ ಯೋಧರಿಗೆ ಗೌರವ ನಮನ ಸಲ್ಲಿಸಿದರು.

ಭಾರತ, ಬಾಂಗ್ಲಾ ನಡುವೆ ಬಸ್ ಸೇವೆಗೆ ಚಾಲನೆ

ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಇಂದು ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡು ಬಸ್ ಸೇವೆಗೆ ಬಾವುಟದ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಪಶ್ಚಿಮಬಂಗಾಳ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಜರಿದ್ದರು.

Write A Comment