ಅಂತರಾಷ್ಟ್ರೀಯ

ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಅದಾನಿ, ರಿಲಯನ್ಸ್ ಕಂಪನಿಗಳೊಂದಿಗೆ ಬಾಂಗ್ಲಾ ಒಪ್ಪಂದ

Pinterest LinkedIn Tumblr

modi2

ಢಾಕಾ: ಬಾಂಗ್ಲಾ ದೇಶದಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆಯನ್ನು ನಿವಾರಿಸಲು ಭಾರತದ ಅದಾನಿ ಪವರ್ ಲಿಮಿಟೆಡ್  ಹಾಗೂ ರಿಲಯನ್ಸ್ ಪವರ್ ಲಿಮಿಟೆಡ್ ಬಾಂಗ್ಲಾದಲ್ಲಿ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲಿವೆ.

ಪ್ರಧಾನಿ ನರೇಂದ್ರ ಮೋದಿ 2 ದಿನಗಳ  ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದು, ಪ್ರವಾಸದ ಭಾಗವಾಗಿ ಭಾರತದ ಕಂಪನಿಗಳು ಬಾಂಗ್ಲಾ ದೇಶದಲ್ಲಿ ವಿದ್ಯುತ್ ಸ್ಥಾವರ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಸುಮಾರು 4,600  ಮೆಗಾವ್ಯಾಟ್ ಗಳಷ್ಟು ವಿದ್ಯುತ್ ಉತ್ಪಾದನೆ ಮಾಡಲು 3 ಬಿಲಿಯನ್ ಡಾಲರ್ ವೆಚ್ಚದಲ್ಲಿ ವಿದ್ಯುತ್ ಸ್ಥಾವರಗಳ ನಾಲ್ಕು ಘಟಕಗಳನ್ನು ನಿರ್ಮಿಸುವುದಕ್ಕೆ ಭಾರತದ ಎರಡು ಕಂಪನಿಗಳು  ಬಾಂಗ್ಲಾದೇಶದ ಸರ್ಕಾರಿ ವಿದ್ಯುತ್ ಅಭಿವೃದ್ಧಿ ಮಂಡಳಿಯೊಂದಿಗೆ ಒಪ್ಪಂದ(ಎಂ.ಒ.ಯು)ಕ್ಕೆ ಸಹಿ ಹಾಕಿವೆ.

ಅದಾನಿ ಕಂಪನಿ 1.5 ಬಿಲಿಯನ್ ಡಾಲರ್ ವೆಚ್ಚದಲ್ಲಿ, 1,600 ಮೆಗಾವ್ಯಾಟ್ ವಿದ್ಯುತ್  ಉತ್ಪಾದನೆ ಸಾಮರ್ಥ್ಯವಿರುವ 2  ಕಲ್ಲಿದ್ದಲಿನ ಶಾಖೋತ್ಪನ್ನ ಸ್ಥಾವರಗಳನ್ನು ನಿರ್ಮಿಸಲಿದೆ. ಅಂತಿಮ ಹಂತದ ಒಪ್ಪಂದವಾದ ನಂತರ ವಿದ್ಯುತ್ ಸ್ಥಾವರ ನಿರ್ಮಾಣ ಸಂಪೂರ್ಣವಾಗಲು 13 ತಿಂಗಳ ಕಾಲಾವಕಾಶ ಅಗತ್ಯವಿದೆ ಎಂದು ಬಾಂಗ್ಲಾದೇಶದ ಸರ್ಕಾರಿ ವಿದ್ಯುತ್ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಗ್ಲಾ ದೇಶದಲ್ಲಿ ಪ್ರಸ್ತುತ 7,000 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಾಗುತ್ತಿದ್ದು, ಪೂರೈಕೆ ಹಾಗೂ ಬೇಡಿಕೆಯಲ್ಲಿ ಭಾರಿ ವ್ಯತ್ಯಯ ಕಂಡುಬರುತ್ತಿದೆ. ಪ್ರತಿ ದಿನ ಬಾಗ್ಲಾ ದೇಶ 1,500 ಮೆಗಾವ್ಯಾಟ್  ವಿದ್ಯುತ್ ಕೊರತೆ ಎದುರಿಸುತ್ತಿದೆ. ಕೊರತೆಯನ್ನು ಪೂರೈಸಲು ಭಾರತದ ಕಂಪನಿಗಳು ನಿರ್ಮಿಸಲಿರುವ ವಿದ್ಯುತ್  ಸ್ಥಾವರಗಳು ನೆರವಾಗಲಿದೆ.   ದೇಶಾದ್ಯಂತ ಇರುವ ವಿದ್ಯುತ್ ಸಮಸ್ಯೆಯನ್ನು ನಿಯಂತ್ರಿಸಲು 2014 -15 ನೇ ಸಾಲಿನಲ್ಲಿ ಬಾಂಗ್ಲಾ ಸರ್ಕಾರ ತನ್ನ  ಬಜೆಟ್ ನಲ್ಲಿ  2.95  ಟ್ರಿಲಿಯನ್ ಡಾಲರ್ ಹಣ ಖರ್ಚು ಮಾಡಿತ್ತು.

Write A Comment