ರಾಷ್ಟ್ರೀಯ

ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ; ಮೇ 2ರಂದು ಫಲಿತಾಂಶ

Pinterest LinkedIn Tumblr

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ತಮಿಳುನಾಡು, ಕೇರಳ, ಬಂಗಾಳ, ಅಸ್ಸಾ ಮತ್ತು ಪುದುಚೇರಿ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದ್ದು ಮೇ 2ರಂದು ಫಲಿತಾಂಶ ಹೊರಬೀಳಲಿದೆ.

ತಮಿಳುನಾಡು(234 ಕ್ಷೇತ್ರ), ಕೇರಳ(140 ಕ್ಷೇತ್ರ), ಪುದುಚೇರಿ(30 ಕ್ಷೇತ್ರ)ಯಲ್ಲಿ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಇನ್ನು ಪಶ್ಚಿಮ ಬಂಗಾಳ(294 ಕ್ಷೇತ್ರ)ದಲ್ಲಿ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಇದೇ ವೇಳೆ ಅಸ್ಸಾಂ(126 ಕ್ಷೇತ್ರ)ನಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ.

ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಫೆ.26 ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯಕ್ತ ಸುನೀಲ್ ಅರೋರಾ ಅವರು ವೇಳಾಪಟ್ಟಿ ಪ್ರಕಟಿಸಿದರು.

ಚುನಾವಣಾ ಪ್ರಕ್ರಿಯೆಯ ಪ್ರಮುಖ ದಿನಾಂಕಗಳು
ಅಧಿಸೂಚನೆ ದಿನಾಂಕ: ಮಾರ್ಚ್‌ 12
ನಾಮಪತ್ರ ಸಲ್ಲಿಕೆಗೆ ಕೊನೇ ದಿನ: ಮಾರ್ಚ್‌ 19
ನಾಮಪತ್ರಗಳ ಪರಿಶೀಲನೆ: ಮಾರ್ಚ್‌ 20
ನಾಮಪತ್ರ ಹಿಂತೆಗೆದುಕೊಳ್ಳಲು ಕೊನೇ ದಿನ: ಮಾರ್ಚ್‌ 22
ಮತದಾನ: ಏಪ್ರಿಲ್‌ 6
ಮತ ಎಣಿಕೆ: ಮೇ 2

ಪಶ್ಚಿಮ ಬಂಗಾಳದಲ್ಲಿ 8 ಹಂತದ ಮತದಾನ
ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ಮಾರ್ಚ್‌ 27ರಿಂದಲೇ ಆರಂಭವಾಗಲಿದೆ. 8ನೇ ಹಂತದ ಮತದಾನ ಏಪ್ರಿಲ್‌ 29ರಂದು ಪೂರ್ಣವಾಗಲಿದೆ. ಪಶ್ಚಿಮ ಬಂಗಾಳದಲ್ಲಿ ವಿವಿಧ ಹಂತಗಳಲ್ಲಿ ನಡೆಯುವ ಮತದಾನದ ದಿನಾಂಕ ಇಲ್ಲಿದೆ.
ಮೊದಲ ಹಂತ: ಮಾರ್ಚ್‌ 27
ಎರಡನೇ ಹಂತ: ಏಪ್ರಿಲ್‌ 1
ಮೂರನೇ ಹಂತ: ಏಪ್ರಿಲ್‌ 6
4ನೇ ಹಂತ: ಏಪ್ರಿಲ್ 10
5ನೇ ಹಂತ: ಏಪ್ರಿಲ್ 17
6ನೇ ಹಂತ: ಏಪ್ರಿಲ್ 22
7ನೇ ಹಂತ: ಏಪ್ರಿಲ್‌ 26
8ನೇ ಹಂತ: ಏಪ್ರಿಲ್ 29

ಅಸ್ಸಾಂನಲ್ಲಿ 3 ಹಂತದ ಮತದಾನ
ಅಸ್ಸಾಂನಲ್ಲಿ 3 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದ ಮತದಾನ ಮಾರ್ಚ್‌ 27ಕ್ಕೆ ಆರಂಭವಾಗಲಿದೆ. 2ನೇ ಹಂತವು ಏಪ್ರಿಲ್‌ 1ರಂದು ನಡೆಯಲಿದೆ. ಹಾಗೂ ಮೂರನೇ ಹಂತವು ಏಪ್ರಿಲ್‌ 6 ರಂದು ನಡೆಯಲಿದೆ. ಮತ ಎಣಿಕೆ ಮತ್ತು ಫಲಿತಾಂಶ ಮೇ 2ರಂದು ಹೊರಬೀಳಲಿದೆ. ಕೇರಳ, ತಮಿಳುನಾಡು ಹಾಗೂ ಪುದುಚೇರಿಗಳಲ್ಲಿ ಏಪ್ರಿಲ್‌ 6ರಂದು ಒಂದೇ ದಿನ ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ.

ಚುನಾವಣಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ
ಪಶ್ಚಿಮ ಬಂಗಾಳ (ಒಟ್ಟು ಕ್ಷೇತ್ರ 294)
ತಮಿಳುನಾಡು (ಒಟ್ಟು ಕ್ಷೇತ್ರ 234)
ಕೇರಳ (ಒಟ್ಟು ಕ್ಷೇತ್ರ 140)
ಅಸ್ಸಾಂ (ಒಟ್ಟು ಕ್ಷೇತ್ರ 16)
ಪುದುಚೇರಿ (ಒಟ್ಟು 33 ಕ್ಷೇತ್ರ. 30 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಉಳಿದ 3 ಸ್ಥಾನಗಳನ್ನು ಕೇಂದ್ರದಿಂದ ನಾಮನಿರ್ದೇಶನ ಮಾಡಲಾಗುತ್ತದೆ)

Comments are closed.