ಕರಾವಳಿ

ಗಂಗೊಳ್ಳಿ ಮೀನುಗಾರರ ವರ್ಷಗಳ ಸಮಸ್ಯೆಗೆ ಶೀಘ್ರ ಮುಕ್ತಿ; 12 ಕೋಟಿ ವೆಚ್ಚದಲ್ಲಿ ಜೆಟ್ಟಿ ಮರು ನಿರ್ಮಾಣ

Pinterest LinkedIn Tumblr

ಕುಂದಾಪುರ: ಗಂಗೊಳ್ಳಿಯಲ್ಲಿನ ಬಂದರು ಪ್ರದೇಶದಲ್ಲಿ 12 ಕೋಟಿ ವೆಚ್ಚದಲ್ಲಿ ಜೆಟ್ಟಿ ಮರು ನಿರ್ಮಾಣ ಹಾಗೂ 1 ಕೋಟಿ ವೆಚ್ಚದಲ್ಲಿ ಬಂದರು ರಸ್ತೆ ನಿರ್ಮಾಣ ಕಾಮಗಾರಿಗೆ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಗಂಗೊಳ್ಳಿ ಬಂದರು ಅಭಿವೃದ್ಧಿ, ಮೀನುಗಾರಿಕಾ ರಸ್ತೆಗಳ ಅಭಿವೃದ್ಧಿಗೆ ಸರಕಾರ ಮುಂದಾಗಿದೆ. ಈಗಾಗಲೇ ಜೆಟ್ಟಿ ಮರು‌ನಿರ್ಮಾಣ,‌ಮೀನುಗಾರಿಕಾ ರಸ್ತೆಗೆ ಗಂಗೊಳ್ಳಿಯಿಂದ ಶಿರೂರು ತನಕ ಮೀನುಗಾರಿಕಾ ರಸ್ತೆಗೆ 36 ಕೋಟಿ ಅನುದಾನ ಬಂದಿದೆ. ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈಗಾಗಲೇ 1600 ಕೋಟಿ ಅನುದಾನ ಲಭಿಸಿದ್ದು ರಾಜ್ಯದಲ್ಲೇ ಕಡಿಮೆ‌ ಅವಧಿಯಲ್ಲಿ ಹೆಚ್ಚು ಅನುದಾ‌ನ ಸಿಕ್ಕ ಕ್ಷೇತ್ರಗಳಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರವು ಒಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. 5 ವರ್ಷದ ಹಿಂದೆ ಜೆಟ್ಟಿ ಕಳಪೆ ಕಾಮಗಾರಿಯಾಗಿದ್ದು ಜೆಟ್ಟಿ ಪುನರ್ ನಿರ್ಮಾಣಕ್ಕಾಗಿ ಮೀನುಗಾರರು ಬಹಳಷ್ಟು ಬೇಡಿಕೆ ಸಲ್ಲಿಸಿದ್ದರು. ಜೆಟ್ಟಿ ನಿರ್ಮಾಣವಾಗದಿದ್ದಲ್ಲಿ ಮೀನುಗಾರರಿಗೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಸಂಸದ ಬಿ.ವೈ ರಾಘವೇಂದ್ರ, ಮೀನುಗಾರಿಕಾ‌ ಸಚಿವರ ಮುತುವರ್ಜಿಯಲ್ಲಿ‌ ಕಾಮಗಾರಿಗೆ ಅನುದಾನ ಲಭಿಸಿದೆ. ಉತ್ತಮ ಗುಣಮಟ್ಟದಲ್ಲಿ ಜೆಟ್ಟಿ ಹಾಗೂ ಬಂದರು ರಸ್ತೆ ನಿರ್ಮಾಣವಾಗುವ ವಿಶ್ವಾಸವಿದೆ ಎಂದರು.

ಜಿ.ಪಂ ಸದಸ್ಯೆ ಶೋಭಾ ಜಿ.ಪುತ್ರನ್, ತಾ.ಪಂ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ,ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮೀನುಗಾರಿಕಾ ಸೊಸೈಟಿ ಅಧ್ಯಕ್ಷ ಸದಾಶಿವ ಗಂಗೊಳ್ಳಿ, ಹಸಿ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜನಾರ್ಧನ ಖಾರ್ವಿ, ಬಂದರು-ಮೀನುಗಾರಿಕೆ ಇಲಾಖೆಯ ಮಂಚೇಗೌಡ, ಅಂಜನಾದೇವಿ, ಎಸ್. ಉದಯಕುಮಾರ್ ಶೆಟ್ಟಿ, ವಿಜಯ್ ಶೆಟ್ಟಿ, ಗ್ರಾ.ಪಂ ಸದಸ್ಯರಾದ ನಾಗರಾಜ ಖಾರ್ವಿ, ಪ್ರಶಾಂತ್ ಖಾರ್ವಿ, ಗುತ್ತಿಗೆದಾರರಾದ ಕಮಲಕಿಶೋರ್ ಹೆಗ್ಡೆ, ರೋಹನ್ ಕೋತ, ವಿಶ್ವನಾಥ್ ಶೆಟ್ಟಿ ಬಾಳಿಕೆರೆ ಮೊದಲಾದವರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.