ರಾಷ್ಟ್ರೀಯ

ತನ್ನ ಹೆಂಡತಿಯ ಫೋಟೋಗಳನ್ನು ವಾಟ್ಸ್​ಆಯಪ್​ ಗ್ರೂಪ್​ಗಳಲ್ಲಿ ಬಿಟ್ಟು ಕಾಲ್​ಗರ್ಲ್​ ಎಂದ..!

Pinterest LinkedIn Tumblr


ತಿರುಪತಿ: ತುಂಬಾ ಕನಸು ಹೊತ್ತುಕೊಂಡು ಪತಿಯ ಮನೆಗೆ ಆಗಮಿಸಿದ ವಧುವಿಗೆ ಪಾಪಿ ಪತಿರಾಯ ನರಕ ದರ್ಶನ ಮಾಡಿಸಿರುವ ಅಮಾನವೀಯ ಘಟನೆ ತಿರುಪತಿಯಲ್ಲಿ ಬೆಳಕಿಗೆ ಬಂದಿದೆ. ಇದುವರೆಗೂ ಕೇವಲ ಚಲನಚಿತ್ರಗಳಲ್ಲಿ ನೋಡಿದಂತಹ ಅತ್ಯಂತ ಕ್ರೂರ ಪತಿಯ ಪಾತ್ರ ಈ ಸ್ಟೋರಿಯಲ್ಲಿ ನಿಜವಾಗಿದೆ.

ತನ್ನ ಪತ್ನಿಯನ್ನು ಕಾಲ್​ ಗರ್ಲ್​ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿರುವ ಪಾಪಿ ಪತಿ, ವಾಟ್ಸ್​ಆಯಪ್​ ಗ್ರೂಪ್​ಗಳಲ್ಲಿ ಪತಿಯ ಫೋಟೋಗಳನ್ನು ಹರಿಬಿಟ್ಟು ವಿಕೃತಿ ಮೆರೆದಿದ್ದಾನೆ.

ಘಟನೆಯ ವಿವರಣೆಗೆ ಬರುವುದಾದರೆ, ತಿರುಪತಿ ಉಪನಗರ ತಿಮ್ಮಿನಾಯುಡು ಪಾಳೆಂನ ಎಸ್​ಜಿಎಸ್​ ಕಾಲೇಜಿನಲ್ಲಿ ಕಿರಿಯ ಸಹಾಯಕನಾಗಿ ಕೆಲಸ ಮಾಡುತ್ತಿರುವ ರೋಹಿತ್​ ಕುಮಾರ್, ರೇವಂತ್​ ಹೆಸರಿನಲ್ಲಿ ಯುವತಿಯೊಬ್ಬಳನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು ಕಳೆದ ಆಗಸ್ಟ್​ನಲ್ಲಿ ಮದುವೆಯಾಗಿದ್ದ. ಕೆಲವು ದಿನಗಳ ಬಳಿಕ ತನ್ನ ನಿಜ ಹೆಸರು ಮತ್ತು ವಿಳಾಸವನ್ನು ಹೇಳಿ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ.

ಮದುವೆಯಾದಾಗಿನಿಂದ ಕಿರುಕುಳ ನೀಡುತ್ತಿದ್ದ ರೋಹಿತ್​, 10 ಲಕ್ಷ ರೂ. ನಗದು, ಚಿನ್ನಾಭರಣ ಸೇರಿದಂತೆ ಹೆಚ್ಚುವರಿಗೆ ಹಣಕ್ಕಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಆದರೆ, ಇದಕ್ಕೆ ಒಪ್ಪದಿದ್ದಾಗ ಪತ್ನಿಯನ್ನು ಮನೆಯಿಂದ ಆಚೆಗೆ ನೂಕಿದ್ದ. ಅಲ್ಲದೆ, ವರದಕ್ಷಿಣೆ ತರದಿದ್ದರೆ ಪೋರ್ನ್​ ವೆಬ್​ಸೈಟ್​ಗೆ ಫೋಟೋಗಳನ್ನು ಅಪ್​​ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಕೇವಲ ಬೆದರಿಕೆ ಮಾತ್ರವಲ್ಲದೆ, ನಿಜವಾಗಿಯೂ ಆತ ಕಾಲ್​ ಗರ್ಲ್​ ಎಂದು ಹೇಳಿ ಫೋಟೋಗಳನ್ನು ಪೋಸ್ಟ್​ ಮಾಡಿರುವ ಆರೋಪ ಕೇಳಿಬಂದಿದೆ. ಮಗಳ ಬಗ್ಗೆ ತಿಳಿದ ಆಕೆಯ ಪಾಲಕರು ರೋಹಿತ್​ ಮನೆಗೆ ಧಾವಿಸುತ್ತಾರೆ. ಇದೊಂದು ಕೌಟುಂಬಿಕ ಸಮಸ್ಯೆ ಎಂದು ಅರಿಯುವ ಪೊಲೀಸರು ಎರಡು ಕುಟುಂಬವನ್ನು ಕೂರಿಸಿ ಸಂಧಾನ ಮಾಡುವ ಪ್ರಯತ್ನ ಮಾಡುತ್ತಾರೆ. ಆದರೆ, ರೋಹಿತ್​ ಸಂತ್ರಸ್ತೆಯ ಪಾಲಕರನ್ನೇ ಹಿಗ್ಗಾಮುಗ್ಗ ಬೈಯುತ್ತಾನೆ. ಇದೀಗ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.

Comments are closed.