ರಾಷ್ಟ್ರೀಯ

ದೇಶದಲ್ಲಿ ಇಂದು (ಶನಿವಾರ) 18552 ಕೊರೋನಾ ಪ್ರಕರಣಗಳು ಪತ್ತೆ: 384 ಸಾವು

Pinterest LinkedIn Tumblr


ನವದೆಹಲಿ: ದೇಶದಲ್ಲಿ ಕರೋನಾ ರೋಗಿಗಳ ಸಂಖ್ಯೆ 5 ಲಕ್ಷ ದಾಟಿದ್ದು ಒಟ್ಟು ಕರೋನಾ ಪ್ರಕರಣಗಳ ಸಂಖ್ಯೆ 508953ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 18552 ಹೊಸ ಪ್ರಕರಣಗಳು ವರದಿಯಾಗಿದ್ದು, 384 ರೋಗಿಗಳು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ 10244 ರೋಗಿಗಳನ್ನು ಗುಣಪಡಿಸಲಾಗಿದೆ. ದೇಶದಲ್ಲಿ ಕರೋನಾವೈರಸ್ (Coronavirus) ಸೋಂಕಿನಿಂದ ಇದುವರೆಗೆ 15685 ಜನರು ಸಾವನ್ನಪ್ಪಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಪ್ರಸ್ತುತ 197387 ಸಕ್ರಿಯ ಪ್ರಕರಣಗಳಿವೆ. ಅಂದರೆ ಸುಮಾರು ಎರಡು ಲಕ್ಷ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ 295880 ಜನರನ್ನು ಗುಣಪಡಿಸಲಾಗಿದೆ. ಚೇತರಿಕೆ ದರವು ಸುಧಾರಿಸುತ್ತಿದೆ. ಇದು 58.13% ಕ್ಕೆ ಏರಿದೆ ಎಂದು ತಿಳಿದು ಬಂದಿದೆ.

ದೆಹಲಿಯಲ್ಲಿ 77 ಸಾವಿರ ಮೀರಿದ Covid-19 ಪ್ರಕರಣ:
ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 3,460 ಮಂದಿ ಕರೋನಾವೈರಸ್ ಕೋವಿಡ್-19 (Covid-19) ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ. ಇದರೊಂದಿಗೆ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 77,000 ದಾಟಿದೆ. ಅದೇ ಸಮಯದಲ್ಲಿ ಈ ಅಪಾಯಕಾರಿ ವೈರಸ್ನಿಂದ 2,492 ಜನರು ಪ್ರಾಣ ಕಳೆದುಕೊಂಡಿದ್ದಾರೆ. ದೇಶದ ಅತಿ ಹೆಚ್ಚು ಹಾನಿಗೊಳಗಾದ ನಗರಗಳ ಪಟ್ಟಿಯಲ್ಲಿ ದೆಹಲಿ ಬುಧವಾರ ಮುಂಬೈಯನ್ನು ಹಿಂದಿಕ್ಕಿದೆ. ಕಳೆದ 24 ಗಂಟೆಗಳಲ್ಲಿ 63 ಜನರು ಸಾವನ್ನಪ್ಪಿದ್ದಾರೆ. ಸತ್ತವರ ಸಂಖ್ಯೆ 2,492 ಮತ್ತು ಸೋಂಕಿತರ ಸಂಖ್ಯೆ 77,240 ಎಂದು ಬುಲೆಟಿನ್ ಹೇಳಿದೆ.

ಮುಂಬೈನಲ್ಲಿ 1,297 ಹೊಸ ಪ್ರಕರಣಗಳು ದಾಖಲಾಗಿದ್ದು 117 ರೋಗಿಗಳು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ, ದೇಶದ ಆರ್ಥಿಕ ರಾಜಧಾನಿಯಲ್ಲಿ 1,297 ಹೊಸ ಕರೋನಾ ವೈರಸ್ ಸೋಂಕುಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 72,287ಕ್ಕೆ ಏರಿದೆ. ಕೋವಿಡ್ -19 ರ ಇನ್ನೂ 117 ರೋಗಿಗಳ ಸಾವಿನೊಂದಿಗೆ ಈ ಮಾರಕ ವೈರಸ್‌ನಿಂದ ಸಾವಿನ ಸಂಖ್ಯೆ 4,177 ಕ್ಕೆ ಏರಿದೆ. ಸೋಂಕಿನಿಂದ ಚೇತರಿಸಿಕೊಂಡ ನಂತರ ಶುಕ್ರವಾರ 593 ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಬಿಎಂಸಿ ತಿಳಿಸಿದೆ. ಈವರೆಗೆ ನಗರದಲ್ಲಿ 39,744 ರೋಗಿಗಳು ಈ ಕಾಯಿಲೆಯಿಂದ ಗುಣಮುಖರಾಗಿದ್ದಾರೆ.

Comments are closed.