ಕರ್ನಾಟಕ

10ನೇ ತರಗತಿ ಪರೀಕ್ಷೆ ನಂತರ ಅಂತರ್ ಜಿಲ್ಲಾ ಪ್ರಯಾಣ ನಿರ್ಬಂಧ; ಸಚಿವ ಆರ್.ಅಶೋಕ್

Pinterest LinkedIn Tumblr


ಬೆಂಗಳೂರು: ಕೊವೀಡ್ 19 ತಡೆಗೆ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳಲು ಇಂದು ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಕೋವಿಡ್ ವಿಚಾರವಾಗಿ ಇಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರು ನಡೆಸಿದ ತುರ್ತು ಸಭೆಯ ಬಳಿಕ ಮಾತನಾಡಿದ ಸಚಿವ ಅಶೋಕ್ ಅವರು, ಎಸ್​ಎಸ್​ಎಲ್​ಸಿ ಪರೀಕ್ಷೆ ಮುಗಿಯುವುದಕ್ಕಾಗಿ ಕಾಯುತ್ತಿದ್ದೇವೆ. ಪರೀಕ್ಷೆ ಮುಗಿದ ನಂತರ ಕಠಿಣ ಕ್ರಮ ಜಾರಿ ಮಾಡ್ತೇವೆ. ಲಾಕ್​ಡೌನ್ ಬದಲಾಗಿ ಕಟ್ಟು ನಿಟ್ಟಿನ ಕ್ರಮ ಜಾರಿ ಮಾಡಲಾಗುವುದು. ಇವತ್ತಿನ ಸಭೆಯಲ್ಲಿ ಮೂರು ಪ್ರಮುಖ ನಿರ್ಧಾರ ಗಳು ಆಗಿವೆ. ಅವುಗಳನ್ನು ಸಿಎಂ ಯಡಿಯೂರಪ್ಪ ಅವರೇ ಪ್ರಕಟಿಸಲಿದ್ದಾರೆ ಎಂದು ಹೇಳಿದರು.

ತಜ್ಞ ವೈದ್ಯರ ಸಲಹೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಣಿಸಿದೆ. ಅವರ ಸಲಹೆಗಳಂತೆ ಇಂದಿನ ಸಭೆಯಲ್ಲಿ ಕೆಲ ತೀರ್ಮಾನ ಮಾಡಲಾಗಿದೆ. ಅಂತರ್ ಜಿಲ್ಲೆಯ ಸಂಚಾರ ನಿರ್ಬಂಧ ಸೇರಿದಂತೆ ಪ್ರಮುಖ ಮೂರು ವಿಷಯಗಳ ಬಗ್ಗೆ ನಿರ್ಧಾರ ಮಾಡಲಾಗಿದ್ದು, ಆ ಮೂರು ನಿರ್ಧಾರಗಳು ಏನೆಂದು ಕೆಲವೇ ಕ್ಷಣಗಳಲ್ಲಿ ಸಿಎಂ ಬಿಎಸ್​ವೈ ಪ್ರಕಟಿಸಲಿದ್ದಾರೆ ಎಂದು ಆರ್.ಅಶೋಕ್ ಹೇಳಿದರು.

ಖಾಸಗಿ ಆಸ್ಪತ್ರೆಗಳಿಗೆ ನಾವು ಮಾಡಿರುವ ದರವನ್ನು ಅವರು ಫಾಲೋ ಮಾಡಬೇಕು. ಸರ್ಕಾರ ಈಗಾಗಲೇ ದರ ಪಟ್ಟಿ ಪ್ರಕಟಿಸಿದೆ. ಅದರಂತೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಬೇಕು. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಏನು ಬೇಡಿಕೊಳ್ಳುವುದಿಲ್ಲ. ಕೊರೋನಾದಂಥ ಯುದ್ಧದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಬೇಡಿಕೊಳ್ಳುವುದಿಲ್ಲ. ಆದೇಶ ಮಾಡುತ್ತಿದೆ. ಸರ್ಕಾರದ ಸೂಚನೆಗಳನ್ನು ಖಾಸಗಿ ಆಸ್ಪತ್ರೆಗಳು ಪಾಲಿಸಲೇಬೇಕು. ಸೂಚನೆಗಳನ್ನು ಪಾಲಿಸದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಅವರು ತಪ್ಪು ಮಾಡಿದರೆ ಒಂದು ವರ್ಷ ಜೈಲು ಶಿಕ್ಷೆಯೂ‌ ಆಗಬಹುದು ಎಂದು ಖಾಸಗಿ ಆಸ್ಪತ್ರೆಗಳಿಗೆ ಆರ್.ಅಶೋಕ್ ಎಚ್ಚರಿಕೆ ನೀಡಿದರು.

ಖಾಸಗಿ ಆಸ್ಪತ್ರೆಗಳು ಹಾಗೂ ಖಾಸಗಿ ಮೆಡಿಕಲ್ ಕಾಲೇಜುಗಳ ಜೊತೆ ಸೋಮವಾರ ಸಭೆ ಮಾಡುತ್ತೇನೆ. ಸಭೆಯಲ್ಲಿ ಸರ್ಕಾರದ ದರ ನಿಗದಿ ಪಾಲಿಸುವಂತೆ ಮನವರಿಕೆ ಮಾಡುತ್ತೇನೆ. ಅಲ್ಲದೇ ಸೂಕ್ತ ಚಿಕಿತ್ಸೆ ನೀಡುವ ಕುರಿತು ಮಾತನಾಡುತ್ತೇನೆ ಎಂದು ಸಚಿವರು ಹೇಳಿದರು.

Comments are closed.